CrimeNational

ಮೆಟ್ರೋ ಫ್ಲೈಓವರ್‌ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ!

ನವದೆಹಲಿ; ನಮ್ಮ ಮೆಟ್ರೋ ಆತ್ಮಹತ್ಯೆಯ ತಾಣವಾಗುತ್ತಿದೆ.. ಟೈಟ್‌ ಸೆಕ್ಯೂರಿಟಿ ಇದ್ದರೂ ಕೂಡಾ ಇತ್ತೀಚಿನ ದಿನಗಳಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಕೆಲ ದಿನಗಳ ಹಿಂದಷ್ಟೇ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೆಟ್ರೋ ರೈಲು ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.. ಇದೀಗ ದೆಹಲಿ ಮೆಟ್ರೋದಲ್ಲೂ ಇದೇ ರೀತಿ ನಡೆದಿದೆ.. 49 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ದೆಹಲಿಯ ಸೂರಜ್ಮಲ್‌ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ..

ಇದನ್ನೂ ಓದಿ; ಇಂತಹ ಸ್ನೇಹಿತರನ್ನು ಎಂದಿಗೂ ಜೊತೆಗಿಟ್ಟುಕೊಳ್ಳಬೇಡಿ; ಇವರು ಎಂದಿಗೂ ಡೇಂಜರ್‌!

ನಿನ್ನೆ ಮಧ್ಯಾಹ್ನ ಖಾಸಗಿ ಕಂಪನಿಯೊಂದರ ಉದ್ಯೋಗಿ ಹರೀಶ್‌ ಎಂಬುವವರು ಮೆಟ್ರೋನ ಫ್ಲಾಟ್‌ಫಾರ್ಮ್‌ 1ರ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.. ಭದ್ರತಾ ಸಿಬ್ಬಂದಿ ರಕ್ಷಿಸಲು ಯತ್ನಿಸಿದ್ದಾರಾದರೂ ಅದು ಸಾಧ್ಯವಾಗಿಲ್ಲ.. ಈ ದೃಶ್ಯ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ವ್ಯಕ್ತಿಯ ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಗೊತ್ತಾಗಿಲ್ಲ..

ಇದನ್ನೂ ಓದಿ; ತಮ್ಮ ದಂಡಪಿಂಡ ಎಂದು ಬೈದ!; ಅಣ್ಣ ತಮ್ಮನಿಗೇ ಪಿಂಡ ಇಟ್ಟ!

Share Post