BengaluruCrime

ಪತ್ನಿಗೆ ಮೇಕಪ್‌ ಹುಚ್ಚು!; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ!

ಬೆಂಗಳೂರು; ಪತ್ನಿ ಯಾವಾಗಲೂ ವಿಪರೀತ ಮೇಕಪ್‌ ಮಾಡುತ್ತಾಳೆ. ಇಷ್ಟ ಬಂದಂತೆ ಡ್ರೆಸ್‌ ಮಾಡಿಕೊಳ್ಳುತ್ತಾಳೆ ಎಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತೊಣಚಿನಕುಪ್ಪೆ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ..

ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್‌ ಡೆಲಿವರಿ ಬಾಯ್‌ ಮನೆಯಲ್ಲಿ ಅನುಮಾನಾಸ್ಪದ ಸಾವು!

ಅಸ್ಸಾಂ ಮೂಲದ ಹುಸೇನ್‌ ಚೌದರಿ ಎಂಬಾತ ಮೂರು ವರ್ಷಗಳ ಹಿಂದೆ ಕುಲ್ಸುಮ್‌ ಬೇಗಂ ಎಂಬಾಕೆಯನ್ನು ಮದುವೆಯಾಗಿದ್ದ.. ಈತ ನೆಲಮಂಗಲದಲ್ಲಿ ಖಾಸಗಿ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ.. ತೊಣಚಿನಕುಪ್ಪೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ.. ಪತ್ನಿ ಯಾವಾಗಲೂ ಮೇಕಪ್‌ ಮಾಡಿಕೊಂಡು, ಡ್ರೆಸ್‌ ಮಾಡಿಕೊಂಡು ಸ್ಟೈಲ್‌ ಮಾಡುತ್ತಿದ್ದದ್ದು ಗಂಡನಿಗೆ ಇಷ್ಟವಿರಲಿಲ್ಲ.. ಇದರಿಂದ ಇಬ್ಬರ ನಡುವೆ ಗಲಾಟೆಗಳಾಗುತ್ತಿದ್ದವು ಎನ್ನಲಾಗಿದೆ..

ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!

ಎರಡು ದಿನದ ಹಿಂದೆಯೂ ಇಬ್ಬರ ನಡುವೆ ವಿಪರೀತ ಗಲಾಟೆಯಾಗಿದೆ.. ಅನಂತರ ಇಬ್ಬರೂ ಮನೆಯಲ್ಲಿ ಮಲಗಿದ್ದಾರೆ.. ಪತ್ನಿ ನಿದ್ದೆ ಹೋದ ಮೇಲೆ ಹುಸೇನ್‌ ಚೌದರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

Share Post