ಮದುವೆಯಾಗುವುದಾಗಿ ನಂಬಿಸಿ KSRP ಪೇದೆಯಿಂದ ಅತ್ಯಾಚಾರ!
ಕಲಬುರಗಿ; ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಕೆಎಸ್‌ಆರ್‌ಪಿ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.. ಹೈದರಾಬಾದ್ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ಕರೆಸಿಕೊಂಡು ಕಲಬುರಗಿ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಯುವತಿ ಆರೋಪ ಮಾಡಿದ್ದಾಳೆ..
ಈ ಬಗ್ಗೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.. ಕೆಎಸ್‌ಆರ್‌ಸಿಪಿ ಪೇದೆ ಯಲ್ಲಾಲಿಂಗ ವಿರುದ್ಧ ಈ ಆರೋಪ ಕೇಳಿಬಂದಿದೆ.. ಇನ್ಸ್ಟಾಗ್ರಾಂನಲ್ಲಿ ನನಗೆ ಯಲ್ಲಾಲಲಿಂಗ ಪರಿಚಯವಾದ.. ನಂತರ ನಾವಿಬ್ಬರೂ ಮೊಬೈಲ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡೆವು.. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು.. ಯಲ್ಲಾಲಿಂಗ ಮದುವೆಯಾಗುತ್ತೇನೆಂದು ಕಲಬುರಗಿಗೆ ಕರೆಸಿಕೊಂಡ ಎಂದು ಯುವತಿ ಆರೋಪ ಮಾಡಿದ್ದಾಳೆ..
ಆಗಸ್ಟ್ 8ರಂದು ನಾನು ಯಲ್ಲಾಲಲಿಂಗನನ್ನು ನಂಬಿ ಕಲಬುರಗಿಗೆ ಬಂದೆ.. ಬೈಕ್‌ನಲ್ಲಿ ಕೂರಿಸಿಕೊಂಡ ಆತ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.. ಮರುದಿನ ಮದುವೆಯಾಗೋಣ ಎಂದು ಕೇಳಿದೆ.. ಇವತ್ತು ಹುಮನಾಬಾದ್‌ನಲ್ಲಿ ಡ್ಯೂಟಿಗೆ ಹಾಕಿದ್ದಾರೆ. ನಾಳೆ ಮದುವೆಯಾಗೋಣ ಎಂದ ಆತ ನನ್ನನ್ನು ಲಾಡ್ಜ್‌ನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ..