CrimeNational

ಕಾಲೇಜು ಹುಡುಗಿಯನ್ನು ಅಪಹರಿಸಿ 12 ದಿನ ಸಾಮೂಹಿಕ ಅತ್ಯಾಚಾರ!

ಘಾಜಿಯಾಬಾದ್‌; ಇತ್ತೀಚೆಗೆ ಕಾಲೇಜು ಸೇರಿದ್ದ ಅಪ್ತಾಪ್ತ ವಿದ್ಯಾರ್ಥಿನಿಯರನ್ನು ಅಪಹರಿಸಿ ಸುಮಾರು 12 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.. ಬಾಲಕಿಯನ್ನು ಅಪಹರಿಸಿದ ಇಬ್ಬರು ವ್ಯಕ್ತಿಗಳು ಮೀರತ್‌ನ ಖಾಸಗಿ ಹೋಟೆಲ್‌ನಲ್ಲಿ ಕೆಲ ದಿನ ಹಾಗೂ ಜಮ್ಮುವಿನ ಹೋಟೆಲ್‌ನಲ್ಲಿ ಕೆಲ ದಿನ ಇರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.. ಜೊತೆಗೆ ಅತ್ಯಾಚಾರ ಎಸಗುವಾಗ ವಿಡಿಯೋ ಮಾಡಿಕೊಂಡಿದ್ದು, ಯಾರಿಗಾದರೂ ಹೇಳಿದರೆ ವಿಡಿಯೋ ವೈರಲ್‌ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಜೂನ್‌ 24ರಂದು ಬಾಲಕಿ ಕಾಲೇಜಿಗೆ ಹೋಗಿದ್ದಳು.. ಆದ್ರೆ ವಾಪಸ್‌ ಬಂದಿರಲಿಲ್ಲ.. ಹೀಗಾಗಿ ಪೋಷಕರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.. ಕೊನೆಗೆ ಆರೋಪಿಗಳು ಜುಲೈ 6ರಂದು ಘಾಜಿಯಾಬಾದ್‌ನ ಭೋಜ್‌ಪುರ್‌ ಪೊಲೀಸ್‌ ಠಾಣೆಯ ಬಳಿ ಬಾಲಕಿಯನ್ನು ಬಿಟ್ಟುಹೋಗಿದ್ದರು ಎಂದು ತಿಳಿದುಬಂದಿದೆ.. ಬಾಲಕಿಯನ್ನು ವಿಚಾರಿಸಿದಾಗ ಜೂನ್‌ 24ರಂದು ನಾನು ಕಾಲೇಜಿಗೆ ಹೋಗುತ್ತಿದ್ದಾಗ ಬೆಳಗ್ಗೆ 11 ಗಂಟೆಗೆ ನನ್ನನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿದರು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.. ನಾಲ್ವರು ಯುವಕರು ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಬಾಲಕಿಯನ್ನು ಇರಿಸಿದ್ದ ಹೋಟೆಲ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದಿದ್ದಾರೆ.. ಅದರ ಆಧಾರದ ಮೇಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಮೊದಲಿಗೆ ಈ ಪ್ರಕರಣವನ್ನು ತೆಗೆದುಕೊಳ್ಳಲಲು ಘಾಜಿಯಾಬಾದ್‌ ಹಾಗೂ ಮೀರತ್‌ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ.. ಪೋಷಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಮೇಲೆ ಈಗ ತನಿಖೆ ಶುರು ಮಾಡಿದ್ದಾರೆ..

Share Post