BengaluruCrime

ಹೊಡೆದೂ ಇಲ್ಲ, ಬಡಿದೂ ಇಲ್ಲ; ಕೂತು ಪತ್ನಿ ಕಾಲು ಮುರಿದ ಪತಿ!

ಬೆಂಗಳೂರು; ಇದೊಂತರಾ ವಿಚಿತ್ರ ಘಟನೆ. ಇಲ್ಲಿ ಹೊಡೆದೂ ಇಲ್ಲ, ಬಡಿದೂ ಇಲ್ಲ. ಆದರೂ ಪತಿಯೊಬ್ಬ ಪತ್ನಿಯ ಕಾಲನ್ನು ಮುರಿದಿದ್ದಾನೆ. ಇದಕ್ಕೆ ಕಾರಣ ಆತನ ತೂಕ. 150 ಕೆಜಿ ತೂಕದ ಪತಿ ಹೆಂಡತಿ ಮೇಲೆ ಕೂತಿದ್ದು, ಇದರಿಂದಾಗಿ ಹೆಂಡತಿಯ ಕಾಲು ಮುರಿದು ಕಾಲು ಊತ ಬಂದಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಬೆಂಗಳೂರು ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಚೈತ್ರಾ ಎಂಬಾಕೆಯೇ ದೂರು ಕೊಟ್ಟ ಮಹಿಳೆ. ಈಕೆಯ ಗಂಡ ಚರಣ್‌ ಗೌಡ ಯಾವಾಗಲೂ ಜಗಳ ತೆಗೆಯುತ್ತಿದ್ದನಂತೆ. ಇಬ್ಬರೂ ಜಗಳ ಮಾಡಿದಾಗಲೆಲ್ಲಾ ಆತ ಪತ್ನಿಯನ್ನು ಹೊಡೆಯುತ್ತಿರಲಿಲ್ಲ. ಬದಲಾಗಿ ಆಕೆ ಮೇಲೆ ಕೂತುಬಿಡುತ್ತಿದ್ದನಂತೆ. 150 ಕೆಜಿ ತೂಕದ ಪತಿ ಕೂತಿದ್ದರಿಂದ ಕಾಲಿನ ನರ ಊತ ಬಂದಿದೆಯಂತೆ. ಹೀಗೆ ವಿಚಿತ್ರವಾಗಿ ಕೋಪ ತೀರಿಸಿಕೊಳ್ಳುತ್ತಿರುವ ಪತಿ ಚರಣ್‌ ಗೌಡ ವಿರುದ್ಧ ಕೊನೆಗೂ ಪತ್ನಿ ಚೈತ್ರಾ ಸಿಡಿದೆದ್ದಿದ್ದಾಳೆ.

2022ರಲ್ಲಿ ಚೈತ್ರಾ ಹಾಗೂ ಚರಣ್‌ ಗೌಡ ಮದುವೆಯಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ಇಬ್ಬರ ನಡುವೆ ಮನಸ್ತಾಪ ಬಂದಿದೆ. ಇದರಿಂದ ಆಗಾಗ ಜಗಳವಾದರೂ ಪತಿ ತನ್ನ ಪತ್ನಿಗೆ ಒಂದೂ ಏಟು ಹೊಡೆದಿಲ್ಲ. ಬದಲಾಗಿ ಅತಿತೂಕದ ಚರಣ್‌ ಗೌಡ ಪತ್ನಿ ಮೇಲೆ ಕೂತು ಸೇಡು ತೀರಿಸಿಕೊಳ್ಳುತ್ತಿದ್ದನಂತೆ.

Share Post