100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ!
ನವದೆಹಲಿ; ಕೆಲ ತಿಂಗಳ ಹಿಂದೆ 60 ಕ್ಕೂ ಹೆಚ್ಚು ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು.. ಇದೀಗ ದೆಹಲಿಯ ಸರದಿ.. ದೆಹಲಿ ಹಾಗೂ ನೋಯ್ಡಾದ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್‌ಗಳು ಬಂದಿವೆ.. ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ..
ಇದನ್ನೂ ಓದಿ; ಅಶ್ಲೀಲ ವಿಡಿಯೋ ಪ್ರಕರಣ; ಇಂದು ರೇವಣ್ಣ ಮನೆಯಲ್ಲಿ ಸ್ಥಳ ಮಹಜರು!
ಹೀಗಾಗಿ ಬಾಂಬ್ ಸ್ಕ್ವಾಡ್ ಹಾಗೂ ಪೊಲೀಸರು ಶಾಲೆಗಳ ಬಳಿ ಜಮಾಯಿಸಿದ್ದು, ಮಕ್ಕಳನ್ನು ಮನೆಗಳಿಗೆ ಕಳುಹಿಸಲಾಗಿದೆ.. ಶಾಲೆಗಳಲ್ಲಿ ತೀವ್ರ ಪರಿಶೀಲನೆ ಮಾಡಲಾಗಿದೆ.. ಆದ್ರೆ ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ.. ಕೆಲವು ಶಾಲೆಗಳಲ್ಲಿ ಇನ್ನೂ ತಪಸಾಣೆ ಮುಂದುವರೆದಿದೆ..
ಇದನ್ನೂ ಓದಿ; ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!
ದೆಹಲಿ-ಎನ್‌ಸಿಆರ್ ಸೇರಿ 100 ಶಾಲೆಗಳಿಗೆ ಇ-ಮೇಲ್ ಕಳುಹಿಸಲಾಗಿದೆ.. ಎಲ್ಲರಿಗೂ ಒಂದೇ ಇ-ಮೇಲ್‌ನಿಂದ ಒಂದೇ ಮಾಹಿತಿ ಕಳುಹಿಸಲಾಗಿದೆ.. ದೆಹಲಿಯೊಂದರಲ್ಲೇ 60 ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದೆ.. ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ 40 ಶಾಲೆಗಳಿಗೆ ಬೆದರಿಕೆ ಇ-ಮೇಳ್ ಬಂದಿದೆ.. ಎಲ್ಲಾ ಶಾಲೆಗಳಿಗೆ ಬಂದಿರುವ ಇ-ಮೇಲ್ ಮಾಹಿತಿಯೂ ಒಂದೇ ಆಗಿದೆ..