National

ಕೋವಿಡ್‌ ಸೋಂಕಿನ ಪ್ರಕರಣದ ಸಂಖ್ಯೆ ಇಳಿಮುಖ

ದೆಹಲಿ: ದೇಶದಾದ್ಯಂತ ೨೪ ಗಂಟೆಗಳ ಸಮಯದಲ್ಲಿ ಹೊಸದಾಗಿ ೭,೪೪೭ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ೩೯೧ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೩,೪೭,೨೬,೦೪೯ ಕ್ಕೆ ಹೆಚ್ಚಳವಾಗಿದೆ. ಆ ಪೈಕಿ ೪,೭೬,೮೬೯ ಮಂದಿ ಸಾವನ್ನಪ್ಪಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ೭,೮೮೬ ಜನರು ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೂ ೩,೪೧,೬೨,೭೬೫ ಜನರು ಚೇತರಿಸಿಕೊಂಡಿದ್ದಾರೆ.

Share Post