ಅಶ್ಲೀಲ ವಿಡಿಯೋ ಪ್ರಕರಣ; ಇಂದು ರೇವಣ್ಣ ಮನೆಯಲ್ಲಿ ಸ್ಥಳ ಮಹಜರು!
ಹಾಸನ; ಹಾಸನದಲ್ಲಿ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ರಿಲೀಸ್ ಪ್ರಕರಣ ಸಂಬಂಧ ತನಿಖೆ ತೀವ್ರಗೊಳ್ಳುತ್ತಿದೆ.. ಒಂದು ಕಡೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿದೆ.. ಇನ್ನೊಂದೆಡೆ ಹೊಳೆ ನರಸೀಪುರದಲ್ಲಿರುವ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ; ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!
ಇಂದು ಮಧ್ಯಾಹ್ನ ಹೊಳೆ ನರಸೀಪುರಕ್ಕೆ ಬರಲಿರುವ ಎಸ್ಐಟಿ ಅಧಿಕಾರಿಗಳು ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.. ಈ ಪ್ರಕರಣ ಸಂಬಂಧ ಮಹಿಳೆಯೊಬ್ಬರು ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಮಹಜರು ನಡೆಸಲಾಗುತ್ತದೆ.. ದೂರು ಕೊಟ್ಟ ಮಹಿಳೆಯ ಹಾಜರಿಯಲ್ಲೇ ಈ ಮಹಜರು ನಡೆಯುತ್ತದೆ..
ಇದನ್ನೂ ಓದಿ; ನಾದಿನಿ ಗಂಡನ ಬರ್ಬರ ಹತ್ಯೆ; ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ ವ್ಯಕ್ತಿ!
ಏಪ್ರಿಲ್ 28ರಂದು ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರೇವಣ್ಣ ಅವರ ನಿವಾಸದಲ್ಲಿ ಮೂರು ವರ್ಷಗಳ ಕಾಲ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆ ಈ ದೂರು ನೀಡಿದ್ದಾರೆ.. ಈ ವೇಳೆ ಮಾಜಿ ಸಚಿವ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದರು.
ಇದನ್ನೂ ಓದಿ; ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಗ್ಯಾರಂಟಿ; ಸಿದ್ದರಾಮಯ್ಯ