CrimePolitics

ಮೇ 3ಕ್ಕೆ ಬೆಂಗಳೂರಿಗೆ ಬರಲಿರುವ ಪ್ರಜ್ವಲ್‌; ವಶಕ್ಕೆ ಪಡೆಯುತ್ತಾ ಎಸ್‌ಐಟಿ..?

ಬೆಂಗಳೂರು; ಚುನಾವಣೆ ಮುಗಿಯುತ್ತಿದ್ದ ಜರ್ಮನಿಗೆ ಪ್ರವಾಸ ಹೋಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮೇ 3ರ ತಡರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ..  ಇದೀಗ ಅವರು ಜರ್ಮನಿಯ ಫ್ರಾಂಕ್‌ ಫರ್ಟ್‌ನಲ್ಲಿದ್ದು, ನಿಗದಿಯಂತೆ ಪ್ರವಾಸ ಮುಗಿಸಿ, ಮೇ 3 ರಂದು ತಡರಾತ್ರಿ ಬೆಂಗಳೂರಿನ ಬರಲಿದ್ದಾರೆ ಎಂದು ತಿಳಿದುಬಂದಿದೆ.. ಅವರು ಬೆಂಗಳೂರಿಗೆ ಬಂದ ತಕ್ಷಣ ಎಸ್‌ಐಟಿ ಅಧಿಕಾರಿಗಳನ್ನು ಅವರ ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ..

ಹಾಸನದಲ್ಲಿ ಅಶ್ಲೀಲ ಪೆನ್‌ಡ್ರೈವ್‌ ಗಳ ಹಂಚಿಕೆ ನಡೆದಿದ್ದು,  ಆ ವಿಡಿಯೋಗಳಲ್ಲಿ ಪ್ರಜ್ವಲ್‌ ರೇವಣ್ಣ ಇದ್ದಾರೆ ಎಂದು ಹೇಳಲಾಗುತ್ತಿದೆ.. ಜೊತೆಗೆ ಮಹಿಳೆಯೊಬ್ಬರು ಈ ಬಗ್ಗೆ ದೂರು ಕೂಡಾ ದಾಖಲಿಸಿದ್ದಾರೆ.. ಈ ನಡುವೆ ಸರ್ಕಾರ ಕೂಡಾ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿದೆ.

ಇನ್ನು ಏಪ್ರಿಲ್‌ 27ರಂದು ಜರ್ಮಿನಿಗೆ ಹಾರಿದ್ದ ಪ್ರಜ್ವಲ್‌ ರೇವಣ್ಣ ವಾಪಸ್‌ ಭಾರತಕ್ಕೆ ಬರಲು ಟಿಕೆಟ್‌ ಬುಕ್‌ ಮಾಡಿದ್ದಾರೆ.. ಲುಪ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಅವರು ಟಿಕೆಟ್‌ ಬುಕ್‌ ಮಾಡಿದ್ದು, ಜರ್ಮನಿಯಿಂದ ಅವರು ಮೇ 3ರಂದು ಪ್ರಯಾಣ ಬೆಳೆಸಲಿದ್ದಾರೆ.. ಅವರು ಮೇ 3ರ ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ..

ಮೇ 4 ರಂದು ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.. ಇಲ್ಲದಿದ್ದರೆ ವಿಮಾನದಿಂದ ಇಳಿಯುತ್ತಿದ್ದಂತೆ, ವಿಮಾನ ನಿಲ್ದಾಣದಲ್ಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ..

ಇನ್ನು ಬೆಳಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ ಏಕಾಏಕಿ ಯಾರನ್ನೂ ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ.. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಬಂಧನ ಸದ್ಯಕ್ಕೆ ಡೌಟು.. ವಿಚಾರಣೆ ಮುಗಿದ ಮೇಲೆ ಮುಂದಿನ ತೀರ್ಮಾನ ಆಗುತ್ತದೆ ಎಂದೂ ಹೇಳಲಾಗುತ್ತಿದೆ..

Share Post