CrimeDistricts

ಅಂಗನವಾಡಿ ಮೊಟ್ಟೆ ಕದ್ದರು; ಇಲ್ಲಿ ಸಮಾಧಿಗಳನ್ನೇ ಧ್ವಂಸ ಮಾಡಿದರು!

ಬೆಂಗಳೂರು; ಇಂದು ರಾಜ್ಯದ ವಿವಿಧೆಡೆ ಹಲವು ಅಹಿತಕರ ಘಟನೆಗಳು ನಡೆದಿವೆ.. ಅದರಲ್ಲಿ ಕೆಲವು ಸುದ್ದಿಗಳನ್ನು ನಾವು ಇಲ್ಲಿ ನೀಡಿದ್ದೇವೆ.. ಮೂರು ಜಿಲ್ಲೆಗಳ ಕ್ರೈಂ ಸುದ್ದಿಗಳು ಇಲ್ಲಿವೆ.. ಮಹಿಳೆಯೊಬ್ಬರು ಮಕ್ಕಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಗೋರಿಗಳನ್ನೇ ಕಿತ್ತು ಹಾಕಲಾಗಿದೆ..

ಇದನ್ನೂ ಓದಿ; ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿಚಾರ; ನಗರತ್‌ ಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

ಚಿತ್ರದುರ್ಗ; ಚಳ್ಳಕೆರೆ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ತಾಯಿ-ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಲಿಗೆ ಬೆಂಕಿ ಹಚ್ಚಿದ ತಾಯಿ, ಬೆಂಕಿಗೆ ತನ್ನಿಬ್ಬರು ಮಕ್ಕಳನ್ನು ದೂಡಿದ್ದಾರೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಾರಕ್ಕ ಹಾಗೂ ಆಕೆಯ ಮಕ್ಕಳಾದ ನಯನ್‌, ಹರ್ಷವರ್ದನ್‌ ಮೃತರು. ಮಕ್ಕಳಿಬ್ಬರೂ ನಾಲ್ಕು ಹಾಗೂ ಎರಡು ವರ್ಷದವರು.. ಇಬ್ಬರನ್ನೂ ಗ್ರಾಮದ ಹೊರವಲಯದ ಬೇಲಿ ಬಳಿಗೆ ಕರೆದುಕೊಂಡು ಹೋದ ಮಾರಕ್ಕ, ಅಲ್ಲಿನ ಬೇಲಿಗೆ ಬೆಂಕಿ ಹಚ್ಚಿದ್ದಾಳೆ. ನಂತರ ಆ ಬೆಂಕಿಗೆ ಇಬ್ಬರೂ ಮಕ್ಕಳನ್ನೂ ಹಾಕಿದ್ದಾಳೆ. ಅನಂತರ ತಾನೂ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ತಳಕು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಯಾರು ರಾಜ..?; ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಸಂಸದ ಪ್ರತಾಪ ಸಿಂಹ!

ತುಮಕೂರು; ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಓಬಳಾಪುರ ಗ್ರಾಮದಲ್ಲಿ ವ್ಯಕ್ತಿಯೋರ್ವ ಜನ ನನಗೆ ಸೇರಿದ್ದು ಎಂದು ಹೇಳಿ, ಸ್ಮಶಾನದಲ್ಲಿದ್ದ ಸಮಾಧಿಗಳನ್ನು ಧ್ವಂಸ ಮಾಡಿದ್ದಾನೆ. ಗ್ರಾಮದ ಸರ್ವೆ ನಂ4/1 ರಲ್ಲಿ ಸುಮಾರು 10 ಗುಂಟೆ ಜಾಗದಲ್ಲಿ 19 ಗೋರಿಗಳಿದ್ದವು. ಈ ಜಾಗ ತನ್ನದೆಂದು ಹೇಳಿರುವ ಮಲ್ಲಿಕಾರ್ಜುನ್‌ ಎಂಬಾತ ಕ್ಯಾತೆ ತೆಗೆದಿದ್ದ.. ನಂತರ ಆತ ಜೆಸಿಬಿಯನ್ನು ಕರೆಸಿ ಎಲ್ಲಾ ಗೋರಿಗಳನ್ನು ಧ್ವಂಸ ಮಾಡಿದ್ದಾರೆ.

ಹಿರಿಯರ ಗೋರಿಗಳಿಗೆ ಅವರ ಕುಟುಂಬದವರು ಪೂಜೆ ಮಾಡುತ್ತಿದ್ದರು. ಆ ವ್ಯಕ್ತಿ ಅವುಗನ್ನು ಧ್ವಂಸ ಮಾಡಿದ್ದರಿಂದ ಕಣ್ಣೀರು ಹಾಕಿದ್ದಾರೆ.. ಸಮಾಧಿಗಳ ಅವಶೇಷಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಸಮಾಧಿಗಳ ಧ್ವಂಸ ಮಾಡಿದವನ ವಿರುದ್ಧ ಆಕ್ರೋಶಗಳನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ; ಮುರಿದುಬೀಳುತ್ತಾ ಬಿಜೆಪಿ-ಜೆಡಿಎಸ್‌ ದೋಸ್ತಿ..?; ಕುಮಾರಸ್ವಾಮಿಗೆ ಇಷ್ಟು ಅಸಮಾಧಾನ ಯಾಕೆ..?

ಮಂಗಳೂರು; ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರು ಅಂಗನವಾಡಿ ಮಕ್ಕಳ ಮೊಟ್ಟೆಗಳಿಗೆ ಕನ್ನ ಹಾಕಿದ್ದಾರೆ.. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಳಿಯ ನೆಲ್ಲಿಕಟ್ಟೆಯ ಅಂಗನವಾಡಿಯಲ್ಲಿ ಈ ಘಟನೆ ನಡೆದಿದೆ.

ರಾತ್ರಿ ವೇಳೆ ಬೀಗ ಒಡೆದಿರುವ ಕಳ್ಳರು, ಅಂಗನವಾಡಿಯಲ್ಲಿದ್ದ ಮೊಟ್ಟೆಗಳನ್ನು ಬಳಸಿಕೊಂಡು ಅಲ್ಲಿಯೇ ಆಮ್ಲೆಟ್‌ ಮಾಡಿಕೊಂಡು ತಿಂದು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಈ ಕೃತ್ಯ ಬಯಲಾಗಿದೆ. ವಾರದ ಹಿಂದೆಯಷ್ಟೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿ ಒಂದಷ್ಟು ಸೊತ್ತುಗಳನ್ನು ನಾಶ ಮಾಡಿದ್ದರು.

ಇದನ್ನೂ ಓದಿ; ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿಚಾರ; ನಗರತ್‌ ಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

Share Post