ಮುರಿದುಬೀಳುತ್ತಾ ಬಿಜೆಪಿ-ಜೆಡಿಎಸ್ ದೋಸ್ತಿ..?; ಕುಮಾರಸ್ವಾಮಿಗೆ ಇಷ್ಟು ಅಸಮಾಧಾನ ಯಾಕೆ..?
ಬೆಂಗಳೂರು; ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.. ಆದ್ರೆ ಚುನಾವಣೆಗೂ ಮೊದಲೇ ಈ ದೋಸ್ತಿ ಹಳಿ ತಪ್ಪಿದಂತೆ ಕಾಣುತ್ತಿದೆ.. ಚುನಾವಣೆ ಘೋಷಣೆಯಾಗಿ ಮೂರು ದಿನ ಆದರೂ ಇನ್ನೂ ಜೆಡಿಎಸ್‌ಗೆ ಸೀಟು ಹಂಚಿಕೆಯಾಗಿಲ್ಲ.. ಕೋಲಾರ ಕ್ಷೇತ್ರ ಬಿಟ್ಟುಕೊಡೋದಕ್ಕೆ ಬಿಜೆಪಿ ಇನ್ನೂ ಮೀನಾ ಮೇಷ ಎಣಿಸುತ್ತಿದೆ.. ಇದರಿಂದಾಗಿ, ಜೆಡಿಎಸ್ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.. ಚುನಾವಣೆಗೆ ಮುಂಚೆಯೇ ದೋಸ್ತಿ ಖತಂ ಆಗುತ್ತಾ ಎಂಬ ಅನುಮಾನವೂ ಮೂಡೋದಕ್ಕೆ ಶುರುವಾಗಿದೆ..
ಇದನ್ನೂ ಓದಿ; ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿಚಾರ; ನಗರತ್ ಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಹೋಗಿ ಸಂಕಷ್ಟ;
ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ ಠಕ್ಕರ್ ಕೊಡುವುದಕ್ಕಾಗಿಯೇ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ.. ಜೆಡಿಎಸ್ ನಾಯಕರು ಮೊದಲು ಏಳು ಕ್ಷೇತ್ರಗಳನ್ನು ಕೇಳಿದ್ದರು.. ಕೊನೆಗೆ ಮೂರು ಕ್ಷೇತ್ರಗಳಿಗೆ ಫಿಕ್ಸ್ ಆಗಿದ್ದರು.. ಆದ್ರೆ ಈಗ ಬಿಜೆಪಿ ಆ ಮೂರು ಕ್ಷೇತ್ರಗಳನ್ನು ಕೂಡಾ ಫೈನಲ್ ಮಾಡುತ್ತಿಲ್ಲ.. ಇದರಿಂದಾಗಿ ದೋಸ್ತಿಯಲ್ಲಿ ಅಸಮಾಧಾನ ಉಂಟಾಗಿದೆ.. ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕೇ ಬೇಡವೇ ಎಂಬುದರ ಕುರಿತು ಬಿಜೆಪಿ ನಾಯಕರು ಚರ್ಚೆ ಮಾಡುತ್ತಿದ್ದಾರೆ.. ಇನ್ನೊಂದೆಡೆ ಪ್ರಧಾನಿ ಮೋದಿಯವರು ಈಗಾಗಲೇ ಎರಡು ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದಾರೆ.. ಆದ್ರೆ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಆಹ್ವಾನ ಕೊಟ್ಟಿಲ್ಲ.. ಇದೂ ಕೂಡಾ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ; ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕೋಲಾರ ಕ್ಷೇತ್ರದ ಬಗ್ಗೆ ಹೆಚ್ಡಿಕೆ ಹೇಳಿದ್ದೇನು..?
ಅಸಮಾಧಾನಕ್ಕೆ ಕಾರಣಗಳಾದರೂ ಏನು..?
ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದರು. ಈ ಸಮಾವೇಶಗಳಿಗೆ ದೋಸ್ತಿ ಪಕ್ಷದ ನಾಯಕರಾದ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಆಹ್ವಾನ ನೀಡಬೇಕಿತ್ತು. ಆದ್ರೆ ಬಿಜೆಪಿ ನಾಯಕರು ಇಬ್ಬರಿಗೂ ಆಹ್ವಾನ ನೀಡಿಲ್ಲ. ಇದು ದೇವೇಗೌಡರು ಹಾಗೂ ಕುಮಾರಸ್ವಾಮಿಗೆ ಅಸಮಾಧಾನ ಉಂಟು ಮಾಡಿದೆ
ಇನ್ನು ಹಾಸನ ಕ್ಷೇತ್ರವನ್ನು ಬಿಜೆಪಿ ನಾಯಕರು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಆದ್ರೆ ಮಾಜಿ ಶಾಸಕ ಪ್ರೀತಂಗೌಡರನ್ನು ಕಂಟ್ರೋಲ್ ಮಾಡೋದಕ್ಕೆ ಆಗುತ್ತಿಲ್ಲ.. ಪ್ರೀತಂ ಗೌಡ ಈಗಲೂ ಜೆಡಿಎಸ್ ಹಾಗೂ ಹೊಂದಾಣಿಕೆ ವಿರುದ್ಧವೇ ಇದ್ದಾರೆ.. ಇನ್ನು ಮಂಡ್ಯದಲ್ಲಿ ಕೊನೇ ಕ್ಷಣದವರೆಗೂ ಸುಮಲತಾ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.. ಟಿಕೆಟ್ ಬಗ್ಗೆ ಅವರಿಗೆ ಸರಿಯಾಗಿ ಕ್ಲಾರಿಟಿ ಕೊಡುತ್ತಿಲ್ಲ. ಇದೂ ಕೂಡಾ ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ; ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ; ವಿಜಯೇಂದ್ರ ವಿಶ್ವಾಸ
ಕೋಲಾರದಲ್ಲಿ ಜೆಡಿಎಸ್ ಪಕ್ಷಕ್ಕೆ ಬಲ ಇದೆ.. ಅಲ್ಲಿ ಮೂವರು ಜೆಡಿಎಸ್ ಶಾಸಕರಿದ್ದಾರೆ.. ಬಿಜೆಪಿಗಿಂತ ಜೆಡಿಎಸ್ ಅಲ್ಲಿ ಪ್ರಬಲವಾಗಿದೆ.. ಹೀಗಾಗಿ ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕೇಳಲಾಗುತ್ತಿದೆ.. ಆದ್ರೆ ಈ ಬಗ್ಗೆ ಬಿಜೆಪಿ ನಾಯಕರು ಇನ್ನೂ ಏನನ್ನೂ ಹೇಳುತ್ತಿಲ್ಲ. ಇದರಿಂದ ಜೆಡಿಎಸ್ ನಾಯಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಎರಡು ಕ್ಷೇತ್ರವಾಗಿದ್ದರೆ ದೋಸ್ತಿ ಏನಕ್ಕೆ ಬೇಕಾಗಿತ್ತು.. ಇನ್ನೂ ತ್ರಿಕೋನ ಸ್ಪರ್ಧೆ ಇದ್ದರೆ ಮಂಡ್ಯ ಹಾಗೂ ಹಾಸನದಲ್ಲಿ ನಾವು ಗೆಲ್ಲೋದು ಸುಲಭವಾಗುತ್ತೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.
ಇದನ್ನೂ ಓದಿ; ಬೆಂಗಳೂರಿನ ಆಸ್ಪತ್ರೆಗಳಲ್ಲೂ ನೀರಿಗಾಗಿ ಹಾಹಾಕಾರ; ಬತ್ತಿದ 7 ಸಾವಿರ ಬೋರ್‌ವೆಲ್‌ಗಳು!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಜೆಡಿಎಸ್ ಸಾಕಷ್ಟು ಪ್ರಾಬಲ್ಯ ಇದೆ.. ಆದ್ರೆ ಇಲ್ಲಿ ದೇವೇಗೌಡರ ಅಳಿಯ ಮಂಜುನಾಥ್ ಅವರನ್ನು ಬಿಜೆಪಿ ಚಿಹ್ನೆಯಡಿ ನಿಲ್ಲಿಸಲಾಗಿದೆ.. ಅದನ್ನು ಕೂಡಾ ಜೆಡಿಎಸ್ ಲೆಕ್ಕಕ್ಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.. ಇದೂ ಕೂಡಾ ಜೆಡಿಎಸ್ ನಾಯಕರ ಬೇಸರಕ್ಕೆ ಕಾರಣವಾಗಿದೆ. ಇನ್ನು ಸಾಕಷ್ಟು ಬಾರಿ ದೇವೇಗೌಡರು, ಕುಮಾರಸ್ವಾಮಿಯವರು ದೆಹಲಿಗೆ ಹೋಗಿ ಬಂದಿದ್ದಾರೆ. ಸೀಟ್ ಷೇರಿಂಗ್ ಬಗ್ಗೆ ಕೇಳಿದ್ದಾರೆ. ಆದ್ರೆ ಇದುವರೆಗೂ ಒಂದೂ ಅಧಿಕೃತ ಸಭೆ ನಡೆಸಿಲ್ಲ.. ಇದು ಜೆಡಿಎಸ್ ನಾಯಕರನ್ನು ಮತ್ತಷ್ಟು ಬೇಸರಕ್ಕೆ ಈಡು ಮಾಡಿದೆ..
ಇದನ್ನೂ ಓದಿ; ಬೆಂಗಳೂರಿನ ಶಾಲೆ ಬಳಿ ಜಿಲೆಟಿನ್ ಕಡ್ಡಿ, ಡಿಟೋನೇಟರ್‌ಗಳ ಪತ್ತೆ!
ಬಿಜೆಪಿ ಪಟ್ಟಿಯನ್ನು ಘೋಷಣೆ ಮಾಡುವಾಗಲೂ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.. ಜೊತೆಗೆ ಮೋದಿ ಬಂದಾಗಲೂ ಕರೆದಿಲ್ಲ.. ಈ ಮೂಲ ಮೈತ್ರಿಧರ್ಮ ಪಾಲನೆ ಮಾಡುತ್ತಿಲ್ಲ ಎಂಬ ಅಸಮಾಧಾನ ಜೆಡಿಎಸ್ ನಾಯಕರಿಗಿದೆ.. ಬಿಜೆಪಿ ನಾಯಕರೇ ಅಸಡ್ಡೆ ತೋರುವುದಾದರೆ ನಾವೇಕೆ ಮೈತ್ರಿ ಧರ್ಮ ಪಾಲಿಸಬೇಕು ಎಂಬ ಪ್ರಶ್ನೆ ಕೂಡಾ ಜೆಡಿಎಸ್ ನಾಯಕರಲ್ಲಿ ಮೂಡಿದೆ. ಪ್ರಧಾನಿ ಮೋದಿ ಮಧ್ಯಪ್ರವೇಶದಿಂದಷ್ಟೇ ಮೈತ್ರಿ ಉಳಿಯಬಹುದು, ಇಲ್ಲದಿದ್ರೆ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ..
ಜೆಡಿಎಸ್‌ಗೆ ಮಂಡ್ಯ ಹಾಗೂ ಹಾಸನದಲ್ಲಿ ದೊಡ್ಡ ವೋಟ್ ಬ್ಯಾಂಕ್ ಇದೆ.. ಅಲ್ಲಿ ಅವರಿಗೆ ಗೆಲ್ಲೋದಕ್ಕೆ ತೊಂದರೆ ಇಲ್ಲ.. ಇನ್ನು ಇದರ ಜೊತೆಗೆ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸಾಕಷ್ಟು ಬಲವಿದೆ.. ಅದರಿಂದ ಬಿಜೆಪಿಗೆ ಅನುಕೂಲವಾಗಲಿದೆ.. ಒಂದು ವೇಳೆ ಜೆಡಿಎಸ್ ಮೈತ್ರಿ ಮುರಿದುಕೊಂಡು ಹೊರಬಂದರೆ ಬಿಜೆಪಿಗೇ ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.