Politics

ಯಾರು ರಾಜ..?; ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಸಂಸದ ಪ್ರತಾಪ ಸಿಂಹ!

ಮೈಸೂರು; ಸಿಎಂ ಸಿದ್ದರಾಮಯ್ಯ ಯಾರು ರಾಜ..? ಯದುವೀರ್‌ಗೆ ಬಗ್ಗೆ ಪ್ರಶ್ನೆ ಮಾಡಿದ್ದರು.. ಇದನ್ನು ಸಂಸದ ಪ್ರತಾಪ ಸಿಂಹ ಸಮರ್ಥಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.. ಟಿಕೆಟ್‌ ಕೈತಪ್ಪಿದ ಮೇಲೆ ಸೈಲೆಂಟಾಗಿದ್ದ ಪ್ರತಾಪ ಸಿಂಹ ಅವರು ನಿನ್ನೆಯಿಂದ ಸಕ್ರಿಯರಾಗಿದ್ದಾರೆ.. ಆದರೂ ಪ್ರಚಾರದ ವೇಳೆ ಬಿಜೆಪಿ ಮುಜುಗರ ತರುವ ರೀತಿಯಲ್ಲೇ ಮಾತನಾಡುತ್ತಿದ್ದಾರೆ.. ಅದೂ ಕೂಡಾ ಮಾತುಮಾತಿಗೂ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದ ಪ್ರತಾಪ ಸಿಂಹ ಈಗ ಇದ್ದಕ್ಕಿದ್ದಂತೆ ಅವರ ಹೇಳಿಕೆ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ.

ಇದನ್ನೂ ಓದಿ; ಮುರಿದುಬೀಳುತ್ತಾ ಬಿಜೆಪಿ-ಜೆಡಿಎಸ್‌ ದೋಸ್ತಿ..?; ಕುಮಾರಸ್ವಾಮಿಗೆ ಇಷ್ಟು ಅಸಮಾಧಾನ ಯಾಕೆ..?

ಈಗ ರಾಜ – ಮಹಾರಾಜರ ಪರಿಕಲ್ಪನೆ ಇಲ್ಲ;

ಸಿದ್ದರಾಮಯ್ಯ ಅವರು ರಾಜ ಯಾರು ಎಂದು ಪ್ರಶ್ನೆ ಮಾಡಿದ್ದರು.. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸಂಸದ ಪ್ರತಾಪ ಸಿಂಹ, ಮುಖ್ಯಮಂತ್ರಿಗಳ ಎಲ್ಲಾ ಹೇಳಿಕೆಗಳಲ್ಲೂ ಹುಳುಕು ಹುಡುಕಬಾರದು.. ಸಂವಿಧಾನ ಜಾರಿಯಾದ ಮೇಲೆ ರಾಜರು ಅನ್ನೋದು ಇರೋದಿಲ್ಲ. ಈಗ ರಾಜ-ಮಹಾರಾಜ ಎಂಬ ಪರಿಕಲ್ಪನೆಯೇ ಇಲ್ಲ ಎಂದು ಪ್ರತಾಪ ಸಿಂಹ ಹೇಳಿದ್ದಾರೆ..

ಇದನ್ನೂ ಓದಿ; ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿಚಾರ; ನಗರತ್‌ ಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

ಯದುವೀರ್‌ ಈಗ ಬಿಜೆಪಿ ಅಭ್ಯರ್ಥಿ.. ರಾಜ ಅಲ್ಲ..!;

ಇನ್ನೂ ಮುಂದುವರೆದು ಮಾತನಾಡಿರುವ ಸಂಸದ ಪ್ರತಾಪ ಸಿಂಹ ಅವರು, ಯದುವೀರ್‌ ಅವರು ಈಗ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಹೀಗಾಗಿ ಅವರು ರಾಜ ಅಲ್ಲ.. ಪ್ರಜಾಪ್ರಭುತ್ವದಲ್ಲಿ ರಾಜ ಅನ್ನೋದು ಇರೋದಿಲ್ಲ.. ಖಾಸಗಿ ದರ್ಬಾರ್‌ ವೇಳೆ ಮಾತ್ರ ರಾಜರು ಅಲ್ಲಿಗೆ ಸೀಮಿತರಾಗುತ್ತಾರೆ.. ಹೀಗಾಗಿ ಸಿದ್ದರಾಮಯ್ಯ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.. ಸೈದ್ದಾಂತಿಕವಾಗಿ ನಾನು ಸಿದ್ದರಾಮಯ್ಯ ಅವರನ್ನು ವಿರೋಧ ಮಾಡುತ್ತೇನೆ. ಆದ್ರೆ ಯದುವೀರ್‌ ಬಗೆಗಿನ ಹೇಳಿಕೆ ವಿಚಾರದಲ್ಲಿ ನನ್ನ ಸಹಮತ ಇದೆ ಎಂದೂ ಪ್ರತಾಪ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ; ಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕೋಲಾರ ಕ್ಷೇತ್ರದ ಬಗ್ಗೆ ಹೆಚ್ಡಿಕೆ ಹೇಳಿದ್ದೇನು..?

ಜನಪ್ರತಿನಿಧಿಯಾಗಲು ಯದುವೀರ್‌ ಬಂದಿದ್ದಾರೆ;

ಯದುವೀರ್‌ ಅವರು ಅರಮನೆಗೆ ಸೀಮಿತವಾಗದೇ ಅವರು ಜನಪ್ರತಿನಿಧಿಯಾಗಲು ಬಂದಿದ್ದಾರೆ.. ನೀವು ಈಗ ಅವರನ್ನು ಮಹಾರಾಜ ಎನ್ನುತ್ತೀರೋ, ಬಿಜೆಪಿ ಅಭ್ಯರ್ಥಿ ಎನ್ನುತ್ತೀರೋ ಎಂದು ಪ್ರತಾಪ ಸಿಂಹ ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ.. ಯದುವೀರ್‌ ಅವರನ್ನು ಬಿಜೆಪಿ ಅಭ್ಯರ್ಥಿ ಎನ್ನುವುದರಲ್ಲಿ ತಪ್ಪಿಲ್ಲ.. ಅವರು ಅರಮನೆ ಬಿಟ್ಟು ಜನರ ಬಳಿಗೆ ಬಂದಿದ್ದಾರೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ. ಇದು ಒಂದು ರೀತಿಯಲ್ಲಿ ಯದುವೀರ್‌ಗೆ ಟಾಂಗ್‌ ಕೊಟ್ಟಂತೆ ಕಾಣುತ್ತಿದೆ.

ಇದನ್ನೂ ಓದಿ; ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ; ವಿಜಯೇಂದ್ರ ವಿಶ್ವಾಸ

ಕೈಮುಗಿದುಕೊಂಡು ಹೋಗಿ ಸಾಕು, ಜನ ಗೆಲ್ಲಿಸುತ್ತಾರೆ;

ಇನ್ನು ಇದೇ ವೇಳೆ ಭಾಷಣ ಮಾಡಿರುವ ಪ್ರತಾಪ ಸಿಂಹ ಅವರು, ನಿಮ್ಮ ಸಂಸದ ಹತ್ತು ವರ್ಷದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮಹಾರಾಜರೇ  ನೀವು ಕೈಮುಗಿದುಕೊಂಡು ಹೋಗಿ ಸಾಕು.. ಜನ ನಿಮ್ಮನ್ನು ಗೆಲ್ಲಿಸುತ್ತಾರೆ ಎಂದೂ ಪ್ರತಾಪ ಸಿಂಹ ಹೇಳಿದ್ದಾರೆ.. ಯದುವೀರ್‌ ಅವರ ಗೆಲುವು ನಿರಾಯಾಸವಾಗಿ ಆಗುತ್ತದೆ ಎಂದೂ ಪ್ರತಾಪ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ; ಬೆಂಗಳೂರಿನ ಆಸ್ಪತ್ರೆಗಳಲ್ಲೂ ನೀರಿಗಾಗಿ ಹಾಹಾಕಾರ; ಬತ್ತಿದ 7 ಸಾವಿರ ಬೋರ್‌ವೆಲ್‌ಗಳು!

 

Share Post