BengaluruPolitics

ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ವಿಚಾರ; ನಗರತ್‌ ಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

ಬೆಂಗಳೂರು; ಎರಡು ದಿನದ ಹಿಂದೆ ಬೆಂಗಳೂರಿನ ನಗರತ್‌ ಪೇಟೆಯ ಮೊಬೈಲ್‌ ಶಾಪ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಕೆಲವರು ಮೊಬೈಲ್‌ ಅಂಗಡಿ ಮಾಲೀಕನ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದರು,.. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.. ಈ ವಿಚಾರವಾಗಿ ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ,.

ಇದನ್ನು ಓದಿ; ಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕೋಲಾರ ಕ್ಷೇತ್ರದ ಬಗ್ಗೆ ಹೆಚ್ಡಿಕೆ ಹೇಳಿದ್ದೇನು..?

ನಗರತ್‌ ಪೇಟೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ;

ನಗರತ್‌ ಪೇಟೆಯ ಮೊಬೈಲ್‌ ಶಾಪ್‌ನಲ್ಲಿ ಹನುಮಾನ್‌ ಚಾಲೀಸಾ ಹಾಕಲಾಗಿತ್ತು.. ನಮಾಜ್‌ ಸಮಯದಲ್ಲಿ ಹನುಮಾನ್‌ ಚಾಲೀಸಾ ಹಾಕಲಾಗಿದೆ ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದರು ಎಂದು ಅಂಗಡಿ ಮಾಲೀಕ ದೂರು ಕೊಟ್ಟಿದ್ದರು.. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಂದು ನಗರತ್‌ ಪೇಟೆಯ ಮೊಬೈಲ್‌ ಶಾಪ್‌ ಪ್ರತಿಭಟನೆ ಮಾಡಿದ್ದಾರೆ.. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ; ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ; ವಿಜಯೇಂದ್ರ ವಿಶ್ವಾಸ

ಯುವಕರ ಗುಂಪಿನಿಂದ ಮುಕೇಶ್‌ ಮೇಲೆ ಹಲ್ಲೆ;

ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿತ್ತು.. ನಗರತ್‌ ಪೇಟೆಯ ಮುಕೇಶ್‌ ಎಂಬುವವರ ಮೇಲೆ ಯುವಕ ಗುಪೊಂದು ಹಲ್ಲೆ ಮಾಡಿತ್ತು.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮೊಬೈಲ್‌ ಅಂಗಡಿಯಲ್ಲಿ ಮುಕೇಶ್‌ ಹನುಮಾನ್‌ ಚಾಲೀಸಾ ಹಾಕಿದ್ದರು.. ಇದೇ ವೇಳೆ ಕೆಲ ಹುಡುಗರು ಬಂದು ನಮಾಜ್‌ ವೇಳೆ ಹನುಮಾನ್‌ ಚಾಲೀಸಾ ಹಾಕಿದ್ದೀಯಾ ಎಂದು ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಈ ಘಟನೆ ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಮುಖಂಡರು ನಗರತ್ ಪೇಟೆಯಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲು ಮುಂದಾಗಿದ್ದರು. ಮುಖೇಶ್ ಶಾಪ್​ನಿಂದ ಭಾಗವಧ್ವಜದೊಂದಿಗೆ ಶಾಂತಿಯುತ ಮೆರವಣಿಗೆ ಮಾಡಲು ಆಗಮಿಸಿದ್ದರು.

ಇದನ್ನೂ ಓದಿ; ಬೆಂಗಳೂರಿನ ಆಸ್ಪತ್ರೆಗಳಲ್ಲೂ ನೀರಿಗಾಗಿ ಹಾಹಾಕಾರ; ಬತ್ತಿದ 7 ಸಾವಿರ ಬೋರ್‌ವೆಲ್‌ಗಳು!

ಶಾಸಕರನ್ನು ತಳ್ಳಾಡಿದ ಪೊಲೀಸ್‌;

ಪ್ರತಿಭಟನೆಯಲ್ಲಿ ಶಾಸಕ ಸುರೇಶ್‌ ಕುಮಾರ್‌ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸ್‌ ಒಬ್ಬರು ಶಾಸಕರನ್ನು ಎಳೆದಾಡಿದ್ದಾರೆ.. ಶಾಸಕರು ಮತ್ತು ಮಾಜಿ ಸಚಿವರೂ ಆಗಿರುವ ಸುರೇಶ್ ಕುಂಆರ್‌ ಅವರೊಂದಿಗೆ ಒರಟಾಗಿ ವರ್ತಿಸುವುದರ ಜೊತೆಗೆ ಏರುಧ್ವನಿಯಲ್ಲಿ ಕೂಡಾ ಮಾತಾಡಿದ್ದಾರೆ. ಇದರಿಂದ ಕೋಪಗೊಂಡ ಶಾಸಕ ಸುರೇಶ್‌ ಕುಮಾರ್‌ ಅವರು ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಸ್ವಂತ ಅಕ್ಕನನ್ನೇ ಮದುವೆಯಾದ ಭೂಪ; ಕಾರಣ ಕೇಳಿದ್ರೆ ಥೂ ಅಂತೀರಿ!

ನಗರತ್‌ ಪೇಟೆ ರಸ್ತೆಗಳಲ್ಲಿ ಹನುಮಾನ್‌ ಚಾಲೀಸಾ ಹಾಗೂ ಭಜನೆ;

ಶಾಂತಿಯುತ ಮೆರವಣಿಗೆಯನ್ನು ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದೆ.. ನೂರಾರು ಬಿಜೆಪಿ & ಹಿಂದೂ ಮುಖಂಡರು ಜೆ.ಎಂ ರೋಡ್‌ನಿಂದ ನಗರತ್ ಪೇಟೆವರೆಗಿನ ಎಲ್ಲಾ ರಸ್ತೆಗಳಲ್ಲಿ, ಹನುಮಾನ್ ಚಾಲೀಸಾ & ಹನುಮ ಭಜನೆ ಮಾಡಿದಗ್ದಾರೆ. ಹಿಂದೂಗಳ ಆತ್ಮಸ್ಥೈರ್ಯ ಗಟ್ಟಿ ಮಾಡುವ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದೇವೆ ಎಂದು ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಶಾಸಕರು ಹಾಗೂ ಹಲವು ನಾಯಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ; ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಕೊಟ್ರಾ ನಮ್ಮ ಮೆಟ್ರೋ ಅಧಿಕಾರಿ?

 

Share Post