BengaluruCrime

ಜೂನ್‌ 20ರವರೆಗೆ ದರ್ಶನ್‌ ಅಂಡ್‌ ಗ್ಯಾಂಗ್‌ ಪೊಲೀಸ್‌ ಕಸ್ಟಡಿ ಮುಂದುವರಿಕೆ!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜೂನ್‌ 20ರವರೆಗೂ ಪೊಲೀಸ್‌ ಕಸ್ಟಡಿ ಮುಂದುವರೆಸಲಾಗಿದೆ.. ಈ ಹಿಂದೆ ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿತ್ತು.. ನಾಳೆಗೆ ಕಸ್ಟಡಿ ಮುಗಿಯುತ್ತಿತ್ತು.. ನಾಳೆ ಭಾನುವಾರ ಇದ್ದುದರಿಂದ ಇಂದೇ ಕೋರ್ಟ್‌ಗೆ ಹಾಜರುಪಡಿಸಿದ್ದ ಪೊಲೀಸರು, ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.. ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್‌, ಮತ್ತೆ ಐದು ದಿನ ಪೊಲೀಸ್‌ ಕಸ್ಟಡಿ ವಿಸ್ತರಿಸಿದೆ..

ದರ್ಶನ್‌, ಪವಿತ್ರಗೌಡ ಸೇರಿ ಒಟ್ಟು 19 ಆರೋಪಿಗಳಿದ್ದು, ಎಲ್ಲರನ್ನೂ ಇಂದು ಎಲ್ಲರನ್ನೂ ಬಿಗಿ ಭದ್ರತೆಯ ನಡುವೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.. ಪೊಲೀಸರ ಪರವಾಗಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಸಿದರು. ಇನ್ನಷ್ಟು ತನಿಖೆ ಹಾಗೂ ಆರೋಪಿಗಳ ವಿಚಾರಣೆಯ ಅವಶ್ಯಕತೆ ಇರುವುದನ್ನು ಅವರು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.. 9 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಲಾಗಿತ್ತು.. ಆದ್ರೆ ಕೋರ್ಟ್‌ ಐದು ದಿನಗಳ ಕಸ್ಟಡಿ ಮುಂದುವರೆಸಿದೆ..

 

Share Post