CrimeNational

ಅಕ್ಕನ ಗಂಡನೇ ಬೇಕೆಂದು ಪಟ್ಟು ಹಿಡಿದ ಯುವತಿ!; ಒಪ್ಪದಿದ್ದಾಗ ವಿಷ ಸೇವಿಸಿ ಆತ್ಮಹತ್ಯೆ!

ಹೈದರಾಬಾದ್‌; ಯುವತಿಯೊಬ್ಬಳು ಅಕ್ಕನ ಗಂಡನ ಮೇಲೆ ಮೋಹಗೊಂಡಿದ್ದಾಳೆ.. ಅಕ್ಕನ ಗಂಡನನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾಳೆ.. ಆದ್ರೆ ಮನೆಯವರು ಇದಕ್ಕೆ ಒಪ್ಪಿಲ್ಲ.. ಇದ್ರಿಂದ ಮನನೊಂದ ಯುವತಿ ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಹೈದರಾಬಾದ್‌ನ ಹಯಾತ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..

ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

ಇಂದಿರಾ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡವಳು.. ಇಂದಿರಾ ತನ್ನ ಅಕ್ಕನ ಗಂಡನನ್ನೇ ಪ್ರೀತಿಸಿದ್ದಾಳೆ. ಆದ್ರೆ ಮನೆಯವರು ಬೇರೆ ಹುಡುಗನನ್ನು ನೋಡುತ್ತಿದ್ದರು.. ಯಾವುದನ್ನೂ ಇಂದಿರಾ ಒಪ್ಪುತ್ತಿರಲಿಲ್ಲ.. ಕೊನೆಗೆ ತಾನು ಭಾವನನ್ನೇ ಪ್ರೀತಿ ಮಾಡ್ತಿರೋದಾಗಿ ಪೋಷಕರ ಬಳಿ ಹೇಳಿದ್ದಾಳೆ.. ಭಾವನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ.. ಆದ್ರೆ ಪೋಷಕರು ನೀನು ಭಾವನನ್ನು ಮದುವೆಯಾದರೆ ನಿನ್ನ ಅಕ್ಕನ ಬಾಳು ಹಾಳಾಗುತ್ತದೆ.. ಇಲ್ಲಿಗೆ ಇದನ್ನು ಬಿಟ್ಟು ಬೇರೆ ಹುಡುಗನ ಜೊತೆ ಮದುವೆಯಾಗು ಎಂದು ಬುದ್ಧಿವಾದ ಹೇಳಿದ್ದಾರೆ.. ಕುಟುಂಬದ ಎಲ್ಲಾ ಸದಸ್ಯರೂ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಯಾರ ಮಾತಿಗೂ ಸೊಪ್ಪು ಹಾಕದ ಇಂದಿರಾ ಕೋಪಿಸಿಕೊಂಡು ಮನೆಯಿಂದ ಹೊರಗೆ ಹೋಗಿ ಕೀಟನಾಶಕ ಸೇವನೆ ಮಾಡಿದ್ದಾಳೆ.. ಮನೆಯ ಬಳಿಯೇ ಪ್ರಜ್ಞಾಹೀನಳಾಗಿ ಕುಸಿದುಬಿದ್ದಿದ್ದ ಆಕೆಯನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ..

Share Post