National

ಉಕ್ರೇನ್‌ನಿಂದ ಭಾರತಕ್ಕೆ ಬಂದಿಳಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಕೇಂದ್ರ ಸಚಿವ ಸ್ಮೃತಿ ಇರಾನಿ

ದೆಹಲಿ: ಉಕ್ರೇನ್‌ನಿಂದ ದೆಹಲಿಗೆ ಸುರಕ್ಷಿತವಾಗಿ ಬಂದಿಳಿದ ಭಾರತೀಯರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ವಾಗತಿಸಿದರು. ಯುದ್ಧ ವಾತಾವರಣದಿಂದ ಸುರಕ್ಷಿತವಾಗಿ ಆಗಮಿಸಿದ ಖುಷಿಯಲ್ಲಿರುವ ವಿದ್ಯಾರ್ಥಿಗಳಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಚಿವೆ ಸ್ಮೃತಿ ಇರಾನಿ ವಿಶೇಷವಾದ ಸ್ವಾಗತ ನೀಡಿದರು.

ರಷ್ಯಾ-ಉಕ್ರೇನಿಯನ್ ಯುದ್ಧ ಪ್ರಾರಂಭವಾದಾಗಿನಿಂದ, ಉಕ್ರೇನ್‌ನಲ್ಲಿರುವ ಭಾರತೀಯರಲ್ಲಿ ಆತಂಕ ಹೆಚ್ಚುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಭಯಭೀತರಾಗುತ್ತಿದ್ದಾರೆ. ಇತ್ತ ಭಾರತಕ್ಕೆ ಬರಲು ದಾರಿಯೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಈ ಮಧ್ಯೆ, ಆಪರೇಷನ್ ಗಂಗಾ ಆಫ್ ಇಂಡಿಯಾ ಹೆಸರಿನಲ್ಲಿ ಹಲವಾರು ವಿಮಾನಗಳು ಉಕ್ರೇನ್ ಗಡಿಯಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡ್ತಿವೆ. ಏಳು ದಿನಗಳು ಕಳೆದರೂ ಉಕ್ರೇನ್‌ನಲ್ಲಿ ಯುದ್ಧದ ವಾತಾವರಣವು ಶಾಂತವಾಗಲಿಲ್ಲ.

ಬುಧವಾರ ಉಕ್ರೇನ್‌ನಿಂದ ಹೊರಟು ದೆಹಲಿಗೆ ಬಂದಿಳಿದ ಇಂಡಿಗೋ ವಿಮಾನದಲ್ಲಿ ನಾಗರಿಕರಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳಿದ್ದರು. ಅವರು ಸುರಕ್ಷಿತವಾಗಿ ದೇಶಕ್ಕೆ ಮರಳಿದ ಸಂದರ್ಭದಲ್ಲಿ ಅವರಿಗೆ ವಿನೂತನ ಸ್ವಾಗತವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೋರಿದ್ರು. ಲ್ಯಾಂಡ್ ಆಗುತ್ತಿದ್ದಂತೆ ವಿಮಾನ ಹತ್ತಿದ ಸ್ಮೃತಿ ಇರಾನಿ, ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವ ನಿಮಗೆಲ್ಲರಿಗೂ ಸ್ವಾಗತ ಎಂದರು.

ಸ್ಮೃತಿ ವಿದ್ಯಾರ್ಥಿಗಳನ್ನು ಕುರಿತು ನಾಲ್ಕು ಭಾಷೆಗಳಲ್ಲಿ ಸ್ವಾಗತಿಸಿದ್ರು.  ಯಾವುದೇ ಹಿಂಜರಿಕೆಯಿಲ್ಲದೆ ನಾಲ್ಕು ಭಾಷೆಗಳಲ್ಲಿ ಸ್ವಾಗತಿಸಿ ನಂತರ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

Share Post