ಅಮರನಾಥದಲ್ಲಿ ಭಾರಿ ಮಳೆ; ಸಂಕಷ್ಟದಲ್ಲಿ ಕನ್ನಡಿಗರು!
ಧಾರವಾಡ; ಅಮರನಾಥದಲ್ಲಿ ಭಾರೀ ಮಳೆಯಾಗುತ್ತಿದ್ದು ಧಾರವಾಡದಿಂದ ಹೋಗಿದ್ದ ಐವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಜುಲೈ 3 ರಂದು ಧಾರವಾಡದಿಂದ ಹೋಗಿದ್ದ ಐವರು ಜುಲೈ 6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸೇನಾ ಪಡೆಯುವರು ಪ್ರವಾಸಕ್ಕೆ ಬಂದಿದ್ದ ಎಲ್ಲರನ್ನೂ ಪಂಚತರಣಿ ಎಂಬಲ್ಲಿ ಖಾಸಗಿಯವರ ಟೆಂಟ್ನಲ್ಲಿ ಇರಿಸಿದ್ದಾರೆ. ಅದರಲ್ಲಿ ಧಾರವಾಡದ ರಾಕೇಶ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವವರೂ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರದಂತೆ ಕರ್ನಾಟಕದ ಅನೇಕ ಜಿಲ್ಲೆಯ ಜನ ಕೂಡ ಇದ್ದಾರೆ.