ಹಳಿ ತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್ ರೈಲು 15 ಬೋಗಿ; ಇಬ್ಬರ ದುರ್ಮರಣ!
ಗೊಂಡಾ (ಉತ್ತರ ಪ್ರದೇಶ); ಇತ್ತೀಚೆಗಷ್ಟೇ ಕಾಂಚನಜುಂಗಾ ರೈಲು ಅಪಘಾತ ನಡೆದಿತ್ತು.. ಇದೀಗ ಮತ್ತೊಂದು ರೈಲು ಹಳ್ಳಿ ತಪ್ಪಿ ದುರಂತ ಸಂಭವಿಸಿದೆ.. ಉತ್ತರ ಪ್ರದೇಶದ ಗೊಂಡಾ ಬಳಿ ದಿಬ್ರುಗಢ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ.. ಸುಮಾರು 15 ಬೋಗಿಗಳು ಹಳಿ ತಪ್ಪಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ..
ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!
ರೈಲು ಚಂಡೀಗಢದಿಂದ ಬರುತ್ತಿತ್ತು ಎಂದು ತಿಳಿದುಬಂದಿದೆ.. ಗೊಂಡಾದ ಜಿಲಾಹಿ ರೈಲು ನಿಲ್ದಾಣ ಹಾಗೂ ಗೋಸಾಯಿ ರೈಲು ನಿಲ್ದಾಣದ ನಡುವೆ ಈ ದುರ್ಘಟನೆ ಸಂಭವಿಸಿದೆ..
ಇದನ್ನೂ ಓದಿ; 30 ವರ್ಷ ವಯಸ್ಸಿನ ನಂತರ ಮದುವೆಯಾದರೆ ಇಷ್ಟೆಲ್ಲಾ ಆಗುತ್ತಾ..?