CrimeNational

ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

ಪ್ರಕಾಶಂ (ಆಂಧ್ರಪ್ರದೇಶ); ಬ್ಯಾಂಕ್‌ಗೆ ಕನ್ನ ಹಾಕಿ ಕಳ್ಳತನ ಮಾಡುವ ಪ್ರಕರಣಗಳು ಜಾಸ್ತಿ ನೋಡಿದ್ದೇವೆ.. ಆದ್ರೆ ಕಳ್ಳರು ಪರುಷರೇ ಆಗಿರುತ್ತಾರೆ.. ಇಂತಹ ದೊಡ್ಡ ದೊಡ್ಡ ಕೃತ್ಯ ಮಾಡುವ ಮಹಿಳೆಯರು ಸಿನಿಮಾಗಳಲ್ಲಿ ಮಾತ್ರ ಸಿಗಬಹುದು.. ಆದ್ರೆ, ಇಲ್ಲೊಬ್ಬ ಮಹಿಳೆ ನಿಜವಾಗಿಯೂ ಬ್ಯಾಂಕ್‌ ದರೋಡೆಗೆ ಯತ್ನಿಸಿ ವಿಫಲಳಾಗಿದ್ದಾಳೆ..

ಇದನ್ನೂ ಓದಿ; ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!

ಪ್ರಕಾಶಂ ಜಿಲ್ಲೆಯ ತ್ರಿಪುರಾಂತಕಂ ಮಂಡಲದ ಮೇಡಪಿಯಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದೆ.. ವ್ಯಕ್ತಿಯೊಬ್ಬನನ್ನು ಕರೆತಂದಿರುವ ಮಹಿಳೆ ಬ್ಯಾಂಕ್‌ನ ಶಟರ್ ಬೀಗವನ್ನು ಒಡೆದಿದ್ದಾರೆ. ಬಳಿಕ ಆ ವ್ಯಕ್ತಿ ಬ್ಯಾಂಕ್ ಹೊರಗೆ ಕಾವಲು ಕಾಯುತ್ತಿದ್ದಾಗ ಮಹಿಳೆ ಒಳಗೆ ಹೋಗಿದ್ದಾಳೆ.. ಮೊದಲು ಮಹಿಳೆ ಬ್ಯಾಂಕ್ ಒಳಗಿದ್ದ ಸಿಸಿ ಕ್ಯಾಮರಾ ವೈರ್ ಕಟ್ ಮಾಡಿದ್ದಾಳೆ.. ಅನಂತರ ಬ್ಯಾಂಕ್‌ ಲಾಕರ್‌ ತೆರೆಯಲು ಮಹಿಳಾ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಶತಪ್ರಯತ್ನ ಪಟ್ಟರೂ ಲಾಕರ್‌ ತೆಗೆಯಲು ಆಗಿಲ್ಲ. ಇದರಿಂದಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ವಾಪಸ್‌ ಹೋಗಿದ್ದಾಳೆ..

ಇದನ್ನೂ ಓದಿ; ಎಂತಾ ಕಾಲ ಬಂತಪ್ಪ; ಬೈಕ್‌ನಲ್ಲಿ ಹೋಗುತ್ತಲೇ ಲಿಪ್‌ ಕಿಸ್‌..!

ಬೆಳಗ್ಗೆ ಬ್ಯಾಂಕ್‌ ಓಪನ್‌ ಮಾಡಲು ಮ್ಯಾನೇಜರ್‌ ಬಂದಾಗ ಶಟರ್‌ ಮುರಿದಿರುವ ಕಂಡುಬಂದಿದೆ.. ಒಳಗೆ ನೋಡಿದಾಗಿ ಏನೂ ಕಳುವಾಗದಿರುವುದು ನೋಡಿ ನಿಟ್ಟುಸಿರುಬಿಟ್ಟಿದ್ದಾರೆ.. ಇನ್ನು ಮಹಿಳೆ ಒಂದು ಸಿಸಿಟಿವಿ ವೈಯರ್‌ ಮಾತ್ರ ಕಟ್‌ ಮಾಡಿದ್ದು, ಬೇರೆ ಕ್ಯಾಮರಾಗಳಲ್ಲಿ ಮಹಿಳೆಯ ಕೃತ್ಯವೆಲ್ಲಾ ರೆಕಾರ್ಡ್‌ ಆಗಿದೆ..

ಇದನ್ನೂ ಓದಿ; ವಯನಾಡು ಪ್ರವಾಹ ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ; ಸಿಎಂ

Share Post