HistoryNational

ಭಾರತದಲ್ಲಿ 160 ಕೋಟಿ ಗಡಿ ದಾಟಿದ ಕೊರೊನಾ ಲಸಿಕೆ ಪ್ರಮಾಣ

ನವದೆಹಲಿ: ಕೊರೊನಾ ಮಹಾಮಾರಿ ತಡೆಯಲು ಭಾರತ ಸಜ್ಜಾಗಿ ಲಸಿಕಾ ಅಭಿಯಾನವನ್ನು ಶುರು ಮಾಡಿತ್ತು. ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್‌ ತಲುಪುವ ಕಾರ್ಯವನ್ನು ಮಾಡುತ್ತಲೇ ಇದೆ. ವ್ಯಾಕ್ಸಿನ್‌ ಅಭಿಯಾನ ಭಾರತದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಇದುವರೆಗೂ 160ಕೋಟಿಗೂ ಹೆಚ್ಚು ಲಸಿಕೆ ವಿತರನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಡಲು ನಡೆಯುತ್ತಿರುವ ಲಸಿಕಾ ಅಭಿಯಾನ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್‌ ಡ್ರೈವ್‌ ಆಗಿ ಹೊರಹೊಮ್ಮಿದೆ.  ಭಾರತದಲ್ಲಿ ನೀಡಲಾದ ಒಟ್ಟು #COVID19 ಲಸಿಕೆ ಡೋಸ್‌ಗಳು 160 ಕೋಟಿ ಗಡಿ ದಾಟಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನುಷ್ಕ್ ಮಾಂಡವಿಯಾ ತಿಳಿಸಿದ್ದಾರೆ.

ಲಸಿಕೆ ಹಾಕಿದ ನಂತರವೂ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಎಂದು ಕರೆ ನೀಡಿದ್ದಾರೆ.

Share Post