ವಯನಾಡು ಪ್ರವಾಹ ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ; ಸಿಎಂ
ಬೆಂಗಳೂರು; ಭೂಕುಸಿತ ಹಾಗೂ ಪ್ರವಾಹದಿಂದಾಗಿ ಕೇರಳದ ವಯನಾಡಿನಲ್ಲಿ ನೂರಾರು ಮಂದಿ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.. ನೂರಾರು ಜನ ಸಾವನ್ನಪ್ಪಿದ್ದಾರೆ.. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯ ಜೊತೆ ಜೊತೆಗೆ ಪರಿಹಾರ ಕಾರ್ಯಗಳನ್ನೂ ಕೈಗೊಳ್ಳಬೇಕಿದೆ.. ಹಲವಾರು ಸಂಘ ಸಂಸ್ಥೆಗಳು ಇದಕ್ಕೆ ಮುಂದೆ ಬರುತ್ತಿವೆ.. ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಾ ಕೇರಳ ಸಂತ್ರಸ್ತರ ನೆರವಿಗೆ ನಿಂತಿದೆ.. ವಯನಾಡಿನ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರದಿಂದ 100 ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ..
ಇದನ್ನೂ ಓದಿ; ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!
ಈ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.. ಭೀಕರ ಭೂಕುಸಿತದಿಂದ ಕೇರಳ ತತ್ತರಿಸಿದೆ.. ಇಂತಹ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ಕರ್ನಾಟಕವೂ ಇರಲಿದೆ.. ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನೆರವು ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ.. ಕರ್ನಾಟಕದ ಸರ್ಕಾರದ ಮೂಲಕ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ.. ಸಂತ್ರಸ್ತರ ಬದುಕು ಪುನರ್ ಸ್ಥಾಪಿಸಲು ನಾವೂ ಕೂಡಾ ಕೈಜೋಡಿಸಲಿದ್ದೇವೆ ಎಂದು ಹೇಳಿದ್ದಾರೆ.. ಇದಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್, ವಯನಾಡು ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೃತಜ್ಞತೆ ಸಲ್ಲಿಸಿದ್ದಾರೆ..
ಇದನ್ನೂ ಓದಿ; ಫೋನ್ ಪಕ್ಕಕ್ಕಿಡು ಎಂದಿದ್ದಕ್ಕೆ ಪೋಷಕರ ವಿರುದ್ಧವೇ ದೂರು ಕೊಟ್ಟ 21ರ ಯುವತಿ!