CrimeNational

ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಹೊರಟ ದುಷ್ಕರ್ಮಿಗಳು!

ಭೋಪಾಲ್; ಇಬ್ಬರು ಮಹಿಳೆಯರನ್ನು ದುಷ್ಕರ್ಮಿಗಳು ಜೀವಂತವಾಗಿ ಸಮಾಧಿ ಮಾಡಲು ಯತ್ನಿಸಿರುವ ದಾರುಣ ಘಟನೆ ನಡೆದಿದೆ.. ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ.. ಪೊಲೀಸರು ಒಬ್ಬ ಆರೋಪಿಯನ್ನು ಅರೆಸ್ಟ್‌ ಮಾಡಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

ಇದನ್ನೂ ಓದಿ; ಹಾಡಹಗಲೇ ಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಿದ ದುಷ್ಕರ್ಮಿಗಳು!

ಹಿನೌಟಾ ಗ್ರಾಮದವರೇ ಆದ ಮಮತಾ ಪಾಂಡೆ ಹಾಗೂ ಆಶಾ ಪಾಂಡೆ ಎಂಬುವವರನ್ನು ಜೀವಂತವಾಗಿ ಹೂತು ಹಾಕಿ ಕೊಲೆ ಮಾಡಲು ಯತ್ನಿಸಲಾಗಿದೆ.. ಜೆಸಿಬಿಯಿಂದ ಗುಂಡಿ ತೆಗೆದು ಇಬ್ಬರು ಮಹಿಳೆಯರಿಗೆ ಕುತ್ತಿಗೆವರೆಗೂ ಮಣ್ಣು ಮುಚ್ಚಲಾಗಿತ್ತು.. ಜಲ್ಲಿ ಕಲ್ಲು ಮಿಶ್ರಿತ ಮಣ್ಣನ್ನು ಮಹಿಳೆಯರ ಮೇಲೆ ಸುರಿಯಲಾಗಿದ್ದು, ಇದ್ರಲ್ಲಿ ಒಬ್ಬ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ.. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ..

ಇದನ್ನೂ ಓದಿ; ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೇಣಿಗೆ ಶರಣು!; ಇಷ್ಟು ಸಣ್ಣ ಕಾರಣಕ್ಕೆ ಸಾಯಬೇಕಾ..?

ಹಿನೌಟಾ ಗ್ರಾಮದಲ್ಲಿ ಹೊಸ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ.. ಈ ರಸ್ತೆ ಮಹಿಳೆಯರ ಜಮೀನಿನಲ್ಲಿ ಹಾದುಹೋಗುತ್ತಿತ್ತು.. ಹೀಗಾಗಿ ರಸ್ತೆ ಮಾಡಬಾರದೆಂದು ಮಹಿಳೆಯರು ಅಡ್ಡಬಂದಿದ್ದಾರೆ.. ಇದರಿಂದಾಗಿ ಆಕ್ರೋಶಗೊಂಡ ಕಂಟ್ರಾಕ್ಟರ್‌ ಹಾಗೂ ಇನ್ನಿತರ ಪ್ರಭಾವಿಗಳು ಮಹಿಳೆಯರ ಮೇಲೆ ಮಣ್ಣು ಹಾಗೂ ಜೆಲ್ಲಿ ಸುರಿಸಿದ್ದಾರೆ.. ಈ ಮೂಲಕ ಇಬ್ಬರನ್ನೂ ಜೀವಂತ ಸಮಾಧಿ ಮಾಡಲು ಪ್ರಯತ್ನ ಮಾಡಿದ್ದಾರೆ.. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗ್ರಾಮಸ್ಥರು ಜೀವಂತ ಸಮಾಧಿ ಮಾಡುವುದನ್ನು ತಡೆದಿದ್ದಾರೆ.. ಜೊತೆಗೆ ಮಣ್ಣಿನಡಿ ಸಿಲುಕಿದ್ದ ಮಹಿಳೆಯರಿಬ್ಬರನ್ನೂ ರಕ್ಷಿಸಲಾಗಿದೆ.. ಒಬ್ಬ ಮಹಿಳೆ ಅಸ್ವಸ್ಥಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ..

ಇದನ್ನೂ ಓದಿ; ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಅಪಹರಣ!; ದಾರಿಮಧ್ಯೆ ತಪ್ಪಿಸಿಕೊಂಡಿದ್ದೇ ರೋಚಕ!

ಮಂಗಾವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆಯತ್ನ ಆರೋಪದಡಿ ಒಬ್ಬನನ್ನು ಬಂಧಿಸಲಾಗಿದೆ.. ಉಳಿದವರು ತಲೆಮರೆಸಿಕೊಂಡಿದ್ದಾರೆ..

Share Post