CrimeLifestyleNational

ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!

ಅಮರಾವತಿ; ಶಾಲೆಯ ಶೌಚಾಲಯದಲ್ಲೇ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಂಧ್ರಪ್ರದೇಶದ ಚೀಮಕುರ್ತಿ ಮಂಡಲದ ನಿವಾಸಿ ಕೋತಪಟ್ಟಣಂನಲ್ಲಿ ಈ ಘಟನೆ ನಡೆದಿದೆ.. ಇಲ್ಲಿನ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ.. ಆಕೆ ಇನ್ನೂ ಜೂನ್‌ 19ರಂದು ಈ ಶಾಲೆಗೆ ಸೇರಿದ್ದಳು ಎಂದು ತಿಳಿದುಬಂದಿದ್ದಳು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಿರ್ಣಯ!

ವಿದ್ಯಾರ್ಥಿನಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ಯಾರಿಗೂ ಹೇಳಿರಲಿಲ್ಲ.. ವಿಪರೀತವಾದಾಗ ಆಕೆ ಶಾಲೆಯ ಶೌಚಾಲಯಕ್ಕೆ ಹೋಗಿದ್ದಾಳೆ.. ಈ ವೇಳೆ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.. ಆಕೆ ಗರ್ಭಿಣಿಯಾಗಿದ್ದಳು ಅನ್ನೋದು ಯಾರಿಗೂ ತಿಳಿದಿರಲಿಲ್ಲ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಕುಳಿತಲ್ಲೇ ಪ್ರಾಣ ಬಿಟ್ಟ ಗಾರೆ ಕೆಲಸಗಾರ; ಮಾರನೆ ದಿನದವರೆಗೂ ಗೊತ್ತಾಗಲೇ ಇಲ್ಲ!

ಇನ್ನು ಆ ವಿದ್ಯಾರ್ಥಿನಿ ತುಂಬಾ ಸಮಯದವರೆಗೆ ವಾಪಸ್‌ ಬರದ ಹಿನ್ನೆಲೆಯಲ್ಲಿ ನೋಡಲು ಹೋಗಿದ್ದಾರೆ.. ಈ ವೇಳೆ ಆಕೆ ಮಗುವಿಗೆ ಜನ್ಮ ನೀಡಿರುವುದು ಗೊತ್ತಾಗಿದೆ.. ಕೂಡಲೇ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.. ರಕ್ತದಮಡುವಿನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ.. ಒಂಗೋಲ್‌ನ ರಾಜೀವ್‌ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ತಾನೇ ಬಟ್ಟೆ ಹರಿದುಕೊಂಡು ಯುವಕನ ಮೇಲೆ ಆರೋಪ ಮಾಡಿದ ಮಹಿಳೆ!

Share Post