ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು; ಶಿಕ್ಷಕಿ ಬೈದರು ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ. ಇಲ್ಲಿನ ಪಿಳ್ಳಾರೆಡ್ಡಿ ನಗರದಲ್ಲಿ ವಿದ್ಯಾರ್ಥಿನಿ ಅಮೃತಾ ಎಂಬಾಕೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಣಸವಾಡಿಯ ಮರಿಯಂ ಸ್ಕೂಲ್‌ನಲ್ಲಿ ಅಮೃತ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆದ್ರೆ ಸರಿಯಾಗಿ ಓದದೇ ಇದ್ದುದಕ್ಕೆ ಶಿಕ್ಷಕಿ ಎಲ್ಲರ ಮುಂದೆ ಬೈದಿದ್ದಾರೆ. ಇದ್ರಿಂದ ಮನನೊಂದ ಅಮೃತಾ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
“Mom am sorry am not able to forget in school I cannot live with this guilty”. “I Love u mom, Daddy” ಅಂತ ಅಮೃತಾ ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ.