ರೈತನ ಖಾತೆಯಲ್ಲಿ 6,833 ಕೋಟಿ ರೂಪಾಯಿ; ಇಷ್ಟೊಂದು ಎಲ್ಲಿಂದ ಬಂತು..?
ಲಖಿಸರಾಯ್; ರೈತರ ಬ್ಯಾಂಕ್ ಖಾತೆಯಲ್ಲಿ ಸಾವಿರ, ಎರಡು ಸಾವಿರ ಹಣ ಇರೋದೇ ಕಷ್ಟ.. ಅಂತಾದ್ರಲ್ಲಿ ಸಾವಿರಾರು ಕೋಟಿ ರೂಪಾಯಿ ಇದ್ದರೆ ಹೇಗಿರುತ್ತೆ.. ನೀವು ನಂಬ್ತೀರೋ ಬಿಡ್ತೀರೋ ಬಿಹಾರದ ರೈತನೊಬ್ಬನ ಖಾತೆಯಲ್ಲಿ ಬರೋಬ್ಬರಿ 6833 ಕೋಟಿ ರೂಪಾಯಿ ಹಣ ಇದೆ.
ಲಖಿಸರಾಯ್ ಜಿಲ್ಲೆಯ ಬರ್ಹಿಯಾ ಗ್ರಾಮದ ನಿವಾಸಿ ಸುಮನ್ ಕುಮಾರ್ ಅವರ ಖಾತೆಯಲ್ಲಿ ಇಷ್ಟೊಂದು ಹಣ ಕಂಡುಬಂದಿದೆ. ಕೋಟಕ್ ಸೆಕ್ಯುರಿಟೀಸ್ ಮಹೀಂದ್ರಾ ಬ್ಯಾಂಕ್‌ನ ಪಾಟ್ನಾ ಶಾಖೆಯಲ್ಲಿ ಸುಮನ್ ಕುಮಾರ್ ಅವರ ಖಾತೆಗೆ 6,833ಕೋಟಿಗೂ ಹೆಚ್ಚು ಹಣವನ್ನು ಜಮಾ ಮಾಡಲಾಗಿದೆ. ಸುಮನ್ ಅವರು ಪಾಸ್‌ಬುಕ್ ಅಪ್‌ಡೇಟ್ ಮಾಡಿಸಿದಾಗ ಭಾರಿ ಪ್ರಮಾಣ ಹಣ ಇರುವುದು ಕಂಡುಬಂದಿದೆ.
ವೃತ್ತಿಯಲ್ಲಿ ರೈತರಾಗಿರುವ ಸುಮನ್ ಕೋಟಕ್ ಮಹೀಂದ್ರಾ ಬ್ಯಾಂಕ್ ಪಾಟ್ನಾ ಶಾಖೆಯಲ್ಲಿ ಡಿಮ್ಯಾಟ್ ಖಾತೆ ಹೊಂದಿದ್ದು, ಷೇರು ವ್ಯವಹಾರ ನಡೆಸುತ್ತಾರೆ. ಖಾತೆಯಲ್ಲಿ ಹಣ ಯಾರಿಂದ ಜಮಾ ಆಗಿದೆ ಹಾಗೂ 6-7 ದಿನ ಕಳೆದರೂ ಖಾತೆಯಲ್ಲಿ ಹಾಗೆಯೇ ಹಣ ಇರುವುದರಿಂದ ಸುಮನ್‌ಗೆ ಅಚ್ಚರಿಯಾಗಿದೆ.
ಮೊಬೈಲ್ನಿಂದ ಸುಮನ್ ಟ್ರೇಡಿಂಗ್ ಕೆಲಸ ಮಾಡ್ತಾರೆ. ಇತ್ತಿಚೇಗೆ ಸುಮನ್ ಅಕೌಂಟ್ಗೆ ತುಂಬಾ ಹಣ ಬಂದಿರುವುದು ಗೊತ್ತಾಗಿದೆ. ಆಮೇಲೆ ಅವರು ಹಲವರನ್ನು ಸಂಪರ್ಕಿಸಿದರು. ಈ ಬಗ್ಗೆ ಕಸ್ಟಮರ್ ಕೇರ್ಗೂ ವಿಚಾರಿಸಲಾಯಿತು. ಹಣ ಬಂದಿರುವುದರ ಬಗ್ಗೆ ಖಾತ್ರಿ ಪಡೆಸಿದರು. ಈ ಬಗ್ಗೆ ಮಾಹಿತಿ ಹಕ್ಕಿನಡಿ ವಿವರ ಕೇಳಲಾಗಿದೆ. ಆದರೆ ಈವರೆಗೆ ಯಾವುದೇ ವರದಿ ಬಂದಿಲ್ಲ ಎಂದು ಸುಮನ್ ಕುಟುಂಬ ಸದಸ್ಯ ಶ್ರವಣ್ ಕುಮಾರ್ ಹೇಳಿದ್ದಾರೆ.