CrimeNational

ಹೋಟೆಲ್‌ ಕೋಣೆ, ಆರು ಯುವಕರು, ಒಂದೇ ಹುಡುಗಿ; ಅಲ್ಲಿ ನಡೆದಿದ್ದೇನು..?

ಭೋಪಾಲ್‌; ಆ ಹೋಟೆಲ್‌ನಲ್ಲಿ ಒಂದು ಕೊಠಡಿ ಬುಕ್‌ ಆಗಿತ್ತು.. ಆದರಲ್ಲಿ ಆರು ಹುಡುಗರು, ಒಂದೇ ಹುಡುಗಿ ಇದ್ದರು.. ಹೀಗಾಗಿ ಅಲ್ಲೇನು ನಡೆಯುತ್ತಿತ್ತು..? ಆರು ಹುಡುಗರ ಮಧ್ಯೆ ಆ ಹುಡುಗಿ ಏನು ಮಾಡುತ್ತಿದ್ದಳು ಎಂಬ ಕುತೂಹಲ ಎಲ್ಲರಿಗೂ ಶುರುವಾಗಿತ್ತು.. ಆದ್ರೆ ಎಲ್ಲರೂ ಅಂದುಕೊಂಡದ್ದಕ್ಕಿಂತ ಭಯಾನಕ ಕೆಲಸ ಅಲ್ಲಿ ನಡೆಯುತ್ತಿತ್ತು.. ಏನದು ನೋಡೋಣ ಬನ್ನಿ..

ಇದನ್ನೂ ಓದಿ; ನಿಮ್ಮ ಸಂಗಾತಿಯ ವರ್ತನೆ ಹೀಗಿದ್ದರೆ ಇನ್ನೊಂದು ಅಫೇರ್‌ ಇದೆ ಎಂದರ್ಥ!

ಗ್ವಾಲಿಯರ್‌ನ ಖಾಸಗಿ ಹೋಟೆಲ್‌ನಲ್ಲಿ ಪತ್ತೆ;

ಮಧ್ಯಪ್ರದೇಶದ ಗ್ವಾಲಿಯರ್‌ನ ಮಾಧವ್‌ ನಗರದಲ್ಲಿ ಒಂದು ಖಾಸಗಿ ಹೋಟೆಲ್‌ ಇದೆ.. ಆ ಹೋಟೆಲ್‌ನ ಕೊಠಡಿ ಪೊಲೀಸರು ಭೇಟಿ ಕೊಟ್ಟಾಗ ಅಲ್ಲಿದ ದೃಶ್ಯಗಳನ್ನು ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದರು.. ಯಾಕಂದ್ರೆ ಆ ಸಣ್ಣ ಕೊಠಡಿಯಲ್ಲಿ ಆರು ಮಂದಿ ಯುವಕರು ಹಾಗೂ ಒಂದೇ ಹುಡುಗಿ ಇದ್ದಳು.. ಹಾಗಂತ ಅಲ್ಲಿ ಮಾಡಬಾರದ ಖಾಸಗಿ ಕೆಲಸ ಏನೂ ನಡೆಯುತ್ತಿರಲಿಲ್ಲ.. ಆದ್ರೆ ಎಲ್ಲರೂ ಸೇರಿಕೊಂಡು ಅದಕ್ಕಿಂತ ಭಯಾನಕವಾದ ಕೆಲಸ ಮಾಡುತ್ತಿದ್ದರು..

ಇದನ್ನೂ ಓದಿ; ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಲ; ದಲಿತ ಮತಗಳು ʻಕೈʼ ಹಿಡಿದರೆ ಬಿಜೆಪಿಗೆ ನಷ್ಟ!

ಲಾಡ್ಜ್‌ ಕೊಠಡಿಯಲ್ಲೇ ಕಾಲ್‌ ಸೆಂಟರ್‌ ಓಪನ್‌;

ಆಶೀರ್ವಾದ್‌ ಹೆಸರಿನ ಲಾಡ್ಜ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಆರು ಯುವಕರು ಹಾಗೂ ಒಬ್ಬಳು ಯುವತಿ ಕಾಲ್‌ ಸೆಂಟರ್‌ ನಡೆಸುತ್ತಿದ್ದರು.. ಈ ಬಗ್ಗೆ ಮಾಹಿತಿದಾರೊಬ್ಬನ ಸುಳವಿನೊಂದಿಗೆ ಪೊಲೀಸರು ದಾಳಿ ನಡೆಸಿದ್ದರು.. ಪೊಲೀಸರು ಬಂದು ನೋಡಿದಾಗ ಎಲ್ಲರೂ ಲ್ಯಾಪ್‌ಟಾಪ್‌ನಲ್ಲಿ ಬ್ಯುಸಿಯಾಗಿದ್ದರು.. ಮಾಮೂಲಿ ಅಕ್ರಮವಿಲ್ಲ ಕಾಲ್‌ ಸೆಂಟರ್‌ ನಡೆಸುತ್ತಿದ್ದರೆ ಏನೂ ತೊಂದರೆ ಇರಲಿಲ್ಲ.. ಆದ್ರೆ ಮಾಡುತ್ತಿದ್ದ ಕೆಲಸವೇ ಬೇರೆ ಇತ್ತು.
ಇದನ್ನೂ ಓದಿ; ಈ 5 ಸಲಹೆ ಅನುಸರಿಸಿದರೆ ಗಂಡ-ಹೆಂಡತಿ ನಡುವೆ ಜಗಳವೇ ಆಗಲ್ಲ!

ವಿದೇಶಿಗರನ್ನು ವಂಚನೆ ಮಾಡುತ್ತಿದ್ದ ತಂಡ;

ಆರು ಯುವಕರು ಹಾಗೂ ಒಂದು ಯುವತಿ ಸೇರಿಕೊಂಡು ಆನ್‌ಲೈನ್‌ ನಲ್ಲಿ ವಿದೇಶಿ ನಾಗರಿಕರಿಗೆ ಗಾಳ ಹಾಕುತ್ತಿದ್ದರು.. ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ದೇಶದ ಪ್ರಜೆಗಳಿಗೆ ಕರೆ ಮಾಡಿ ಈ ಗ್ಯಾಂಗ್‌ ವಂಚನೆ ಮಾಡುತ್ತಿತ್ತು… ವಿದೇಶಿ ಜನರೊಂದಿಗೆ ಮಾತನಾಡಲು ಚೆನ್ನಾಗಿ ಇಂಗ್ಲೀಷ್‌ ಮಾತನಾಡುವ ಯುವತಿಯನ್ನು ಬಳಸಿಕೊಳ್ಳಲಾಗುತ್ತಿತ್ತು.. ಇವರೆಲ್ಲಾ ಮೈಕ್ರೋಸಾಫ್ಟ್‌ ಕಂಪನಿಯ ಏಜೆಂಟರಂತೆ ಪರಿಚಯ ಮಾಡಿಕೊಂಡು, ಕಂಪ್ಯೂಟರ್‌ನಲ್ಲಿ ವೈರಸ್‌ ಇದೆ ಎಂದು ಬಿಂಬಿಸಿ ವಿದೇಶಿಗರಿಗೆ ಮೋಸ ಮಾಡುತ್ತಿದ್ದರು..

ಇದನ್ನೂ ಓದಿ; ಸ್ಕೂಟರ್‌ ಮೇಲೆ ಹಾರಿದ ಕೋಲೆ ಬಸವ; ಖ್ಯಾತ ಚೆಫ್‌ ರಘು ಕುಂದಾಪುರ ಬಚಾವ್‌!

ಕೊಠಡಿ ಸಂಖ್ಯೆ 204ರಲ್ಲಿ ನಡೆಯುತ್ತಿತ್ತು ವಂಚನೆ;

ಬಂಧಿತರಿಂದ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ವಿದೇಶಿಗರ ಫೋನ್‌ ನಂಬರ್‌ಗಳು ಸಿಕ್ಕಿವೆ.. ಇವರೆಲ್ಲಾ ಏಳು ದಿನಗಳ ಹಿಂದೆ ಈ ಹೋಟೆಲ್‌ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.. ಆರೋಪಿಗಳು ಬಂದ ದಿನದಿಂದಲೇ ವಂಚನೆ ಶುರು ಮಾಡಿದ್ದಾರೆ.. ಗ್ವಾಲಿಯರ್‌ ಕರ್ಣ ಎಂಬ ವ್ಯಕ್ತಿ ಈ ಗುಂಪಿಗೆ ಮೊಬೈಲ್ ಹಾಗೂ ಲ್ಯಾಪ್ಟಾಪ್ ಒದಗಿಸಿದ್ದಾನೆ ಎಂದು ತಿಳಿದುಬಂದಿದೆ.. ಎಲ್ಲರೂ ಹೆಸರು ಬದಲಿಸಿಕೊಂಡು ಈ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ; ಅಕ್ಕಪಕ್ಕದ ರಾಜ್ಯಗಳಿಂದ ಸಿದ್ದರಾಮಯ್ಯಗೆ ಫುಲ್‌ ಡಿಮ್ಯಾಂಡ್‌; ಪ್ರಚಾರಕ್ಕೆ ಬರಲು ಡಿಮ್ಯಾಂಡ್‌

ಹೆಸರು ಬದಲಿಸಿಕೊಂಡು ವಂಚನೆ;

ವಿದೇಶಿ ಹೆಸರುಗಳನ್ನು ವಂಚನೆ ಮಾಡುತ್ತಿದ್ದರು.. ಅಭಯತ್‌ ರಾಜಾವತ್‌ ಎಂಬಾತ ಮಿಸ್ಟರ್‌ ಪಾಲ್‌ ಎಂದು ಹೆಸರಿಟ್ಟುಕೊಂಡಿದ್ದ ನಿತೇಶ್‌ ಎಂಬಾತ ಮಾರ್ಟಿನ್‌ ಎಂದೂ, ಸುರೇಶ್‌ ಎಂಬಾತ ಜಾನ್‌ ಎಂದೂ, ದೀಪಕ್‌ ಎಂಬಾತ ರಿಯಾನ್‌ ಎಂದೂ, ರಾಜ್‌ ಎಂಬಾತ ಸೈಬರ್‌ ಎಕ್ಸ್‌ಪರ್ಟ್‌ ಎಂದೂ, ಸುರೇಶ್‌ ಎಂಬ ಡೆವಿಲ್‌ ಎಂದೂ ಹಾಗೂ ಶ್ವೇತಾ ಎಂಬ ಹುಡುಗಿ ನ್ಯಾನ್ಸಿ ಎಂದೂ ಹೇಳಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ..

ಕೊಠಡಿಯಿಂದ 8 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. 15 ಮೊಬೈಲ್‌ಗಳು, ಫೈಬರ್‌ ಇಂಟರ್‌ನೆಟ್‌ ಮೋಡೆಮ್‌, ಕಾಲಿಂಗ್‌ ಸ್ಟ್ರಿಪ್ಟ್‌, ಡೇಟಾ ಸಿಕ್ಕಿದೆ.

ಇದನ್ನೂ ಓದಿ; ಗಂಡನೂ ಬೇಕು, ಪ್ರಿಯಕರನೂ ಬೇಕು; ವಿದ್ಯುತ್‌ ಕಂಬ ಏರಿದ ಮಹಿಳೆ!

 

Share Post