Lifestyle

ನಿಮ್ಮ ಸಂಗಾತಿಯ ವರ್ತನೆ ಹೀಗಿದ್ದರೆ ಇನ್ನೊಂದು ಅಫೇರ್‌ ಇದೆ ಎಂದರ್ಥ!

ಸಂಬಂಧಗಳಲ್ಲಿ ಮೋಸಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ.. ಒಂದೇ ಹುಡುಗ ಅಟ್‌ ಎ ಟೈಮ್‌ ಹಲವು ಹುಡುಗಿಯರ ಜೊತೆ ಸಂಬಂಧ ಇಟ್ಟುಕೊಳ್ಳುವುದು, ಒಂದೇ ಹುಡುಗಿ ಹಲವು ಹುಡುಗರ ಜೊತೆ ಅಫೇರ್‌ ಇಟ್ಟುಕೊಳ್ಳುವುದು ಹೆಚ್ಚಾಗುತ್ತಿದೆ.. ಇದರ ಜೊತೆ ಗಂಡ-ಹೆಂಡತಿ ಸಂಬಂಧದಲ್ಲೂ ಮೋಸಗಳಾಗುತ್ತಿವೆ.. ಮದುವೆಯಾಗಿದ್ದರೂ ಮತ್ತೊಬ್ಬರ ಜೊತೆ ಅಫೇರ್‌ ಇಟ್ಟುಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿವೆ.. ಹಾಗಾದ್ರೆ, ಸಂಗಾತಿಗೆ ಮೋಸ ಮಾಡುತ್ತಿರುವುದನ್ನು ಕಂಡು ಹಿಡಿಯುವುದು ಹೇಗೆ ನೋಡೋಣ ಬನ್ನಿ..

ಇದನ್ನೂ ಓದಿ; ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಲ; ದಲಿತ ಮತಗಳು ʻಕೈʼ ಹಿಡಿದರೆ ಬಿಜೆಪಿಗೆ ನಷ್ಟ!

ಮೊದಲಿನಂತೆ ಆಸಕ್ತಿ ತೋರದೇ ಇರುವುದು;

ಇಬ್ಬರು ನಡುವೆ ಪ್ರೀತಿ ಇದ್ದಾಗ ಇಬ್ಬರೂ ಅನ್ಯೋನ್ಯವಾಗಿರುತ್ತಾರೆ.. ಇಬ್ಬರ ನಡುವೆ ಪ್ರತಿ ವಿಷಯಕ್ಕೂ ಆಸಕ್ತಿ ಇರುತ್ತದೆ.. ಕೇರಿಂಗ್‌ ಇರುತ್ತದೆ.. ಆದ್ರೆ ದಿಢೀರನೆ ಯಾರಾದರೂ ಒಬ್ಬರು ಆಸಕ್ತಿ ತೋರಿಸುವುದು ಕಡಿಮೆ ಮಾಡಿದರೆ, ಸಂಗಾತಿ ಜೊತೆ ಬರೆಯುವುದನ್ನು ಕಡಿಮೆ ಮಾಡಿ ನಿರ್ಲಕ್ಷ್ಯ ಮಾಡುತ್ತಿದ್ದರೆ, ಅವರಿಗೆ ಬೇರೆ ಅಫೇರ್‌ ಏನಾದರೂ ಇದೆಯಾ ಎಂದು ಪರೀಕ್ಷಿಸುವುದಕ್ಕೆ ಒಂದು ಕಣ್ಣಿಡುವುದು ಉತ್ತಮ.

ಇದನ್ನೂ ಓದಿ; ಈ 5 ಸಲಹೆ ಅನುಸರಿಸಿದರೆ ಗಂಡ-ಹೆಂಡತಿ ನಡುವೆ ಜಗಳವೇ ಆಗಲ್ಲ!

ಹೆಚ್ಚಿನ ಸಮಯ ಫೋನ್‌ಗಳೇ ಕಾಲ ಕಳೆಯುವುದು;

ಕೆಲವರು ಜೊತೆಯಲ್ಲಿ ಸಂಗಾತಿ ಇದ್ದರೂ ಸಂಗಾತಿ ಜೊತೆ ಕಾಲ ಕಳೆಯದೇ ಫೋನ್‌ ನಲ್ಲೇ ಇರುತ್ತಾರೆ.. ಚಾಟ್‌ ಮಾಡುವುದು, ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್‌ ಇರುವುದು ಮಾಡುತ್ತಿರುತ್ತಾರೆ.. ಅಲ್ಲದೆ ಫೋನ್‌ ಅನ್ನು ಖಾಸಗಿಯಾಗಿ ಇರಿಸುವುದು ಮಾಡುತ್ತಿರುತ್ತಾರೆ.. ಅಂತಹವರ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.. ಹೀಗೆ ಮಾಡುತ್ತಾ, ಸುಳ್ಳು ಹೇಳಿ ಅಲ್ಲಿ ಇಲ್ಲಿ ಹೋಗುತ್ತಿದ್ದರೆ ಅಂತಹವರಿಗೆ ಮತ್ತೊಂದು ಸಂಬಂಧ ಇರುವ ಬಗ್ಗೆ ಪರೀಕ್ಷೆ ಮಾಡಬೇಕಾಗುತ್ತದೆ..

ಇದನ್ನೂ ಓದಿ; ಸ್ಕೂಟರ್‌ ಮೇಲೆ ಹಾರಿದ ಕೋಲೆ ಬಸವ; ಖ್ಯಾತ ಚೆಫ್‌ ರಘು ಕುಂದಾಪುರ ಬಚಾವ್‌!

ಹೆಚ್ಚು ಸುಳ್ಳು ಹೇಳುವುದು, ಸತ್ಯವನ್ನು ಮರೆಮಾಚುವುದು;

ಸಂಗಾತಿಗೆ ಮೋಸ ಮಾಡುವವರು ಹೆಚ್ಚು ಸುಳ್ಳು ಹೇಳುತ್ತಾರೆ.. ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.. ಸಂಗಾತಿಯ ಜೊತೆ ಸಮಯ ಕಳೆಯುವುದಿಲ್ಲ.. ಬದಲಾಗಿ ಸಂಗಾತಿಯನ್ನು ಯಾಮಾರಿಸಿ, ಯಾವುದೋ ಸುಳ್ಳು ಹೇಳಿ ಹೊರಹೋಗುವುದು ಮಾಡುತ್ತಿರುತ್ತಾರೆ.. ನೇರವಾಗಿ ಏನನ್ನೂ ಹೇಳದೇ ಎಲ್ಲವನ್ನೂ ಮುಚ್ಚಿಡುತ್ತಿರುತ್ತಾರೆ.. ಅಂತಹವರ ಬಗ್ಗೆ ಗಮನ ಕೊಡುವುದು ಒಳ್ಳೆಯದು.

ಇದನ್ನೂ ಓದಿ; ಅಕ್ಕಪಕ್ಕದ ರಾಜ್ಯಗಳಿಂದ ಸಿದ್ದರಾಮಯ್ಯಗೆ ಫುಲ್‌ ಡಿಮ್ಯಾಂಡ್‌; ಪ್ರಚಾರಕ್ಕೆ ಬರಲು ಡಿಮ್ಯಾಂಡ್‌

ಯಾವಾಗಲೂ ಸೌಂದರ್ಯಕ್ಕೆ ಒತ್ತು ಕೊಡುವುದು;

ಮೊದಲು ಸೌಂದರ್ಯಕ್ಕೆ ಒತ್ತು ಕೊಡದೇ ಸಾಮಾನ್ಯವಾಗಿದ್ದವರು, ಬರಬರುತ್ತಾ ಮೇಕಪ್‌, ಡ್ರೆಸ್‌ ಬಗ್ಗೆ ಆಸಕ್ತಿ ತೋರಿಸುತ್ತಿದ್ದರೆ ಯಾವಾಗಲೂ ಮೇಕಪ್‌ ಮಾಡಿಕೊಳ್ಳುತ್ತಿದ್ದರೆ ಕೊಂಚ ಅನುಮಾನಪಡುವುದು ಒಳ್ಳೆಯದು.. ಮೊದನಿಂದಲೂ ಹಾಗೆಯೇ ಇದ್ದರೆ ಯಾವುದೇ ತೊಂದರೆ ಇಲ್ಲ..

ವಿಪರೀತ ತಡವಾಗಿ ಮನೆಗೆ ಬರುವುದು;

ಇನ್ನು ಕೆಲವರು ಏನೋ ಒಂದು ಸಬೂಬು ಹೇಳಿ ಯಾವಾಗಲೂ ಲೇಟಾಗಿ ಮನೆಗೆ ಬರುವುದು. ವೀಕೆಂಡ್‌ಗಳನ್ನು ಏನೂ ನೆಪ ಎಲ್ಲೋ ಹೋಗುವುದು.. ಅದಕ್ಕೆ ಏನೇನೋ ಕತೆ ಕಟ್ಟುವುದು ಮಾಡುತ್ತಿದ್ದರೆ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಒಳ್ಳೆಯದು.

ಇದನ್ನೂ ಓದಿ; ಬರ್ತ್‌ ಡೇ ದಿನವೇ ಭೀಕರ ಅಪಘಾತ; ದೇವಸ್ಥಾನದ ಬಳಿಯೇ ತಾಯಿ, ಮಗು ದಾರುಣ ಸಾವು!

 

Share Post