CrimeNational

ಲ್ಯಾಪ್‌ಟಾಪ್‌ ಕದ್ದು ಮಾಲೀಕನಿಗೆ ಮೇಲ್‌ ಮಾಡಿದ ಕಳ್ಳ

ನವದೆಹಲಿ; ಲ್ಯಾಪ್‌ಟಾಪ್‌ ಕಳವು ಮಾಡಿದ್ದ ಕಳ್ಳನೊಬ್ಬ ಮಾಲೀಕನಿಗೆ ನಾನೇ ಲ್ಯಾಪ್‌ ಟಾಪ್‌ ಕದ್ದಿದ್ದೇನೆ ಬ್ರೋ ಎಂದು ಇ-ಮೇಳ್‌ ಕಳುಹಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಬಗ್ಗೆ ಲ್ಯಾಪ್‌ ಟಾಪ್‌ ಕಳೆದುಕೊಂಡಿರುವ ಮಾಲೀಕ ಝ್ವಾಲಿ ಟಿಕ್ಸೋ ಎಂಬಾತ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾನೆ.

ಕಳ್ಳನೊಬ್ಬ ರಾತ್ರಿ ಲ್ಯಾಪ್‌ಟಾಪ್‌ ಕದ್ದಿದ್ದು, ಅದರಲ್ಲಿದ್ದ ಇ-ಮೇಲ್‌ ಮೂಲಕ ಮಾಲೀಕನಿಗೆ ಮಾಹಿತಿ ಕಳುಹಿಸಿದ್ದಾನೆ. ನನಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ನೀವು ಬ್ಯುಸಿ ಇರುವುದನ್ನು ನೋಡಿ ನಿಮ್ಮ ಲ್ಯಾಪ್‌ ಟಾಪ್‌ ಕದ್ದಿದ್ದೇನೆ. ನಿಮಗೆ ಅಗತ್ಯವಿರುವ ಫೈಲ್‌ಗಳು ಇದ್ದರೆ ಹೇಳಿ ಅವುಗಳನ್ನು ಕಳುಹಿಸಿಕೊಡುತ್ತೇವೆ. ನಾನು ಈಗಾಗಲೇ ಗ್ರಾಹಕನನ್ನು ಹುಡುಕಿದ್ದೇನೆ. ಮಾರಾಟ ಮಾಡುತ್ತಿದ್ದೇವೆ. ಲ್ಯಾಪ್‌ಟಾಪ್‌ ಕದ್ದಿದ್ದಕ್ಕೆ ಕ್ಷಮೆ ಇರಲಿ ಎಂದು ಇ-ಮೇಲ್‌ ಮಾಡಿದ್ದಾನೆ.

Share Post