National

1.1ಕೆಜಿ ಚಿನ್ನದ ಪೌಡರ್‌ ರವಾನೆ; ವಿಮಾನ ನಿಲ್ದಾಣದಲ್ಲಿ ಸೆರೆ

ಮುಂಬೈ: ಒಳ ಉಡುಪಿನಲ್ಲಿ ಚಿನ್ನದ ಪೌಡರ್‌ ತಂದಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ ಬಂದಿದ್ದ ವ್ಯಕ್ತಿ, ತಮ್ಮ ಒಳ ಉಡುಪಿನಲ್ಲಿ ಪಾಕೆಟ್‌ನಲ್ಲಿ ಸುತ್ತಿಕೊಂಡು ಸುಮಾರು 1.1 ಕೆಜಿ ತೂಕದ ಚಿನ್ನದ ಪೌಡರ್‌ ತಂದಿದ್ದರು. ತಪಾಸಣೆ ವೇಳೆ ಆತ ಸಿಕ್ಕಿಬಿದ್ದಿದ್ದಾನೆ.

ಚಿನ್ನದ ಪೌಡರ್‌ ತಂದಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

 

 

Share Post