Lifestyle

ಈ 5 ಸಲಹೆ ಅನುಸರಿಸಿದರೆ ಗಂಡ-ಹೆಂಡತಿ ನಡುವೆ ಜಗಳವೇ ಆಗಲ್ಲ!

ಸಂಬಂಧ ಯಾವುದೇ ಇರಲಿ, ಆಗಾಗ ಜಗಳ ಆಗುವುದು ಕಾಮನ್‌.. ಅದ್ರಲ್ಲೂ ಪ್ರೀತಿ ಇರುವವರಲ್ಲಿ ಕೋಪ, ತಾಪ ಇದೇ ಇರುತ್ತದೆ.. ಇನ್ನು ಹೇಳೋದಾದರೆ ಗಂಡ-ಹೆಂಡತಿ ನಡುವೆ ಪ್ರೀತಿ ಇದ್ದರೂ ಆಗಾಗ ಜಗಳಕ್ಕೆ ಬೀಳುತ್ತಲೇ ಇರುತ್ತಾರೆ.. ಒಮ್ಮೊಮ್ಮೆ ಬರುವ ಸಿಟ್ಟು ಸಂಸಾರಗಳನ್ನೇ ಹಾಳು ಮಾಡಿಬಿಡುತ್ತವೆ.. ಆದ್ರೆ ಗಂಡ-ಹೆಂಡತಿ ಇಬ್ಬರು ಕೆಲವೊಂದು ವಿಷಯಗಳನ್ನು ಅನುಸರಿಸಿದರೆ ಎಂದಿಗೂ ಇಬ್ಬರ ನಡುವೆ ಜಗಳವೇ ಆಗುವುದಿಲ್ಲ..

ಇದನ್ನೂ ಓದಿ; ಸ್ಕೂಟರ್‌ ಮೇಲೆ ಹಾರಿದ ಕೋಲೆ ಬಸವ; ಖ್ಯಾತ ಚೆಫ್‌ ರಘು ಕುಂದಾಪುರ ಬಚಾವ್‌!

ಕೋಪದಲ್ಲಿ ಏನೇನೋ ಮಾಡಲು ಹೋಗಬೇಡಿ;

ಆಗಾಗ ಗಂಡ-ಹೆಂಡಿರ ಜಗಳಗಳಾಗುತ್ತವೆ.. ಇದು ಕಾಮನ್‌ ಕೂಡಾ.. ಆದ್ರೆ ಅದು ವಿಕೋಪಕ್ಕೆ ತಿರುಗಬಾರದು.. ಕೆಲವರು ಜಗಳವಾಡುವಾಗ, ಆಕ್ರಮಣ ಮಾಡುತ್ತಾರೆ.. ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ಎಸೆಯವುದು, ಒಡೆದು ಹಾಕುವುದು ಮಾಡುತ್ತಾರೆ.. ಇಂತಹ ಸಂದರ್ಭದಲ್ಲಿ ತಾಳ್ಮೆ ತಂದುಕೊಳ್ಳುವುದು ಒಳ್ಳೆಯದು.. ಒಬ್ಬರು ಕೋಪಗೊಂಡರೆ ಮತ್ತೊಬ್ಬರು ಜಗಳಕ್ಕಿಳಿಯದೇ ಸಮಾಧಾನ ಮಾಡಿಕೊಂಡರೆ ಕೋಪ ಕಡಿಮೆಯಾಗುತ್ತದೆ.. ಕೋಪ ಕಡಿಮೆಯಾದ ಮೇಲೆ ಜಗಳಕ್ಕೆ ಕಾರಣವಾದ ವಿಷಯಗಳ ಬಗ್ಗೆ ಇಬ್ಬರೂ ಕೂತು ಮಾತಡಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ..

ಇದನ್ನೂ ಓದಿ; ಅಕ್ಕಪಕ್ಕದ ರಾಜ್ಯಗಳಿಂದ ಸಿದ್ದರಾಮಯ್ಯಗೆ ಫುಲ್‌ ಡಿಮ್ಯಾಂಡ್‌; ಪ್ರಚಾರಕ್ಕೆ ಬರಲು ಡಿಮ್ಯಾಂಡ್‌

ಕೋಪ ಬಂದಾಗ ಹೊಡೆಯುವಂತಹ ಕೆಲಸ ಮಾಡಬಾರದು;

ಗಂಡ-ಹೆಂಡತಿ ನಡುವೆ ಜಗಳವಾದಾಗ ಕೆಲವು ಗಂಡಸರು ಹೆಂಡತಿ ಮೇಲೆ ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತವೆ.. ಹಾಗೆ ಮಾಡುವುದರಿಂದ ಸಂಸಾರದಲ್ಲಿ ಎಂದಿಗೂ ಹೊಂದಾಣಿಕೆ ಬರುವುದಿಲ್ಲ.. ಜಗಳ ಎಂದಿಗೂ ಕಡಿಮೆಯಾಗುವುದಿಲ್ಲ.. ಜೊತೆಗೆ ಬಹುಬೇಗ ಬೇರೆಯಾಗುವುದಕ್ಕೂ ದಾರಿಯಾಗುತ್ತದೆ.. ಹೀಗಾಗಿ ಎಷ್ಟೇ ಕೋಪ ಇದ್ದರೂ ಕೂಡಾ ಹೊಡೆಯುವುದು, ಬಡಿಯುವುದು ಮಾಡಬೇಡಿ.. ಸ್ವಲ್ಪ ಸಮಧಾನದಿಂದ ಯೋಚನೆ ಮಾಡಿ.. ಇಲ್ಲವೆ ಆಗ ಸ್ಥಳದಲ್ಲಿರುವ ಇತರರ ಮಾತನ್ನಾದರೂ ಕೇಳಬೇಕಾಗುತ್ತದೆ..

ಇದನ್ನೂ ಓದಿ; ಚಿಕ್ಕಬಳ್ಳಾಪುರದಲ್ಲಿ ರೆಡ್ಡಿ, ಮೊಯ್ಲಿ ಮುನಿಸು ಡಾ.ಕೆ.ಸುಧಾಕರ್‌ಗೆ ವರವಾಗುತ್ತಾ..?

ಜಗಳ ನಿಲ್ಲಿಸಿ, ಒಂಟಿ ಕುಳಿತು ಬರೆದಿಡಿ;

ಗಂಡ-ಹೆಂಡತಿ ನಡುವೆ ಜಗಳವಾದಾಗ ಯಾರಾದರೊಬ್ಬರು ಸೈಲೆಂಟ್‌ ಆದರೆ ಜಗಳ ನಿಲ್ಲುತ್ತದೆ.. ಆಗ ಒಂಟಿ ಕುಳಿತು ಜಗಳ ಯಾಕಾಯಿತು.. ಯಾರದು ತಪ್ಪು..? ಯಾವ ಕಾರಣಕ್ಕಾಗಿ ಜಗಳ ಆಯಿತು..? ಜಗಳದ ವೇಳೆ ನಮ್ಮ ವರ್ತನೆ ಹೇಗಿತ್ತು..? ಎಲ್ಲದನ್ನೂ ಬರೆದಿಡಿ.. ಆಗ ಮನಸ್ಸು ಸ್ವಲ್ಪ ನಿರಾಳವಾಗುತ್ತದೆ.. ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಿ.. ಅನಂತರ ಬರೆದಿಟ್ಟಿದ್ದನ್ನು ಓದಿ ನೋಡಿ, ನಿಮಗೇ ಪರಿಹಾರ ಸಿಗುತ್ತದೆ.. ನೀವು ಮಾಡಿರುವ ತಪ್ಪೇನು ಅನ್ನೋದು ನಿಮಗೆ ಗೊತ್ತಾಗಿರುತ್ತದೆ..

ಇದನ್ನೂ ಓದಿ; ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುತ್ತಂತೆ ಈ ದೇಶ..!

ಸಂತೋಷದ ಸಂಗತಿಗಳನ್ನೂ ಒಂದೆಡೆ ಬರೆದಿಡಿ;

ಗಂಡ ಹೆಂಡತಿ ಜಗಳ ಮಾಡಿಕೊಂಡಾಗ ಇಬ್ಬರೂ ಕೂಡಾ ಜಗಳಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.. ಅವನ್ನು ಬರೆದ್ದಿಟ್ಟಿದ್ದಾಯ್ತು.. ಇನ್ನು ಇಬ್ಬರೂ ಅನ್ಯೋನ್ಯವಾಗಿದ್ದಾಗಿನ ಸಂತೋಷದ ಸನ್ನಿವೇಶಗಳನ್ನು ಬರೆದಿಡಿ.. ಯಾವ ಕಾರಣಕ್ಕಾಗಿ ಆಗ ಸಂತೋಷದಿಂದ ಇದ್ದೆವು ಎಂಬುದನ್ನು ಬರೆಯಿರಿ.. ಅನಂತರ ಎರಡನ್ನೂ ತಾಳೆ ಮಾಡಿ ನೋಡಿ.. ಆಗ ನಿಮಗೆ ಸುಖವಾಗಿ ಸಂಸಾರ ನಡೆಸೋದಕ್ಕೆ ದಾರಿ ಸಿಗುತ್ತದೆ..

ನಿಮ್ಮಿಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾದಾಗ ಅದರ ಹಿಂದಿನ ಕಾರಣವನ್ನು ಕಂಡು ಹಿಡಿದು ಕೂತು ಮಾತಾಡಿ. ನಂತರ ಇಬ್ಬರು ಕೂಡ ಪರಸ್ಪರ ಸಾರಿ ಹೇಳಿಕೊಳ್ಳಿ. ಇದರಿಂದ ಹೆಚ್ಚಿನ ಕೋಪ ಕಡಿಮೆಯಾಗುತ್ತದೆ ಮತ್ತು ಜಗಳವೂ ಕಡಿಮೆಯಾಗುತ್ತದೆ.

ಇದನ್ನೂ ಓದಿ; ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿ…

Share Post