ಚುನಾವಣೆಗಾಗಿ 30 ಕೋಟಿ ಬೆಟ್ಟಿಂಗ್!; ಸೋತು ಹಣ ನೀಡಲಾಗದೆ ವ್ಯಕ್ತಿ ಸೂಸೈಡ್!
ಏಲೂರು; ಆಂಧ್ರಪ್ರದೇಶದಲ್ಲಿ ಈ ಬಾರಿ ಜಿದ್ದಾಜಿದ್ದಿನ ರಾಜಕೀಯ ನಡೆದಿತ್ತು.. ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಜೋರಾಗಿ ನಡೆದಿತ್ತು.. ಅದೇ ರೀತಿ ವ್ಯಕ್ತಿಯೊಬ್ಬ 30 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದು ಸೋತಿದ್ದಾನೆ.. ಇದರಿಂದಾಗಿ ಊರು ಬಿಟ್ಟಿದ್ದ ಆತನ ಶವ ಪತ್ತೆಯಾಗಿದೆ.. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ..
ಏಲೂರು ಜಿಲ್ಲೆಯ ನೂಜಿವೀಡು ಮಂಡಲ ಪೂರ್ವ ದಿಗವಳ್ಳಿಯ ಜಗ್ಗವರಪು ವೇಣುಗೋಪಾಲರೆಡ್ಡಿ ಆತ್ಮಹತ್ಯೆ ಮಾಡಿಕೊಂಡವರು.. ಚುನಾವಣಾ ಫಲಿತಾಂಶ ಬಂದ ನಂತರ ವೇಣುಗೋಪಾಲರೆಡ್ಡಿ ನಾಪತ್ತೆಯಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಭಾರಿ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ. ಈ ಕ್ರಮದಲ್ಲಿ ಹಣ ಸಂಗ್ರಹಿಸಿದ್ದ ಎನ್ನಲಾಗಿದೆ. ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯವಾಗಿ ಹೇಳಲಾಗುತ್ತಿದೆ.
ಬೆಟ್ಟಿಂಗ್ ನಿರ್ವಾಹಕರು ಹಣ ನೀಡದ ಕಾರಣ ವೇಣು ಮನೆಗೆ ತೆರಳಿ ಬೀಗ ಒಡೆದಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣಗಳು, ಎಸಿ, ಟಿವಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರುವಂತಿದೆ. ಆ ಮಾಹಿತಿ ಪಡೆದ ವೇಣು ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ದೇಹದ ಮೇಲೆ ಗಾಯಗಳಾಗಿದ್ದು, ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.