Politics

ಬಿಜೆಪಿ ಸೇರಿದ ಬಿಪಿನ್‌ ರಾವತ್‌ ಸಹೋದರ ವಿಜಯ್‌ ರಾವತ್‌..!

ನವದೆಹಲಿ: ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಸಹೋದರ ವಿಜಯ್‌ ರಾವತ್‌ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್‌ ರಾವತ್‌ ಕೂಡಾ ಸೇವೆಯಲ್ಲಿ ಕರ್ನಲ್‌ ಆಗಿ ನಿವೃತ್ತಿ ಹೊಂದಿದ್ದಾರೆ. ಇವರು ಉತ್ತರ ಖಂಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸಮ್ಮುಖದಲ್ಲಿ ಇಂದು ವಿಜಯ್‌ ರಾವತ್‌ ಬಿಜೆಪಿ ಸೇರಿದ್ದಾರೆ. ಇದೇ ವೇಳೆ ಮಾತನಾಡಿರುವ ಅವರು, ಮಾಜಿ ಸೇನಾಧಿಕಾರಿಯೂ ಆಗಿರುವ ತಮ್ಮ ತಂದೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಹೀಗಾಗಿ ನಾನೂ ಅದೇ ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ವಿಶಿಷ್ಟವಾದ ದೃಷ್ಟಿಕೋನ ಮತ್ತು ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿ. ಹೀಗಾಗಿ, ಬಿಜೆಪಿ ಸೇರಲು ಪ್ರಧಾನಿ ಮೋದಿಯವರೇ ನನಗೆ ಸ್ಫೂರ್ತಿ ಎಂದು ವಿಜಯ್‌ ರಾವತ್‌ ಹೇಳಿದ್ದಾರೆ.

Share Post