ಅಪಾರ್ಟ್‌ಮೆಂಟ್‌ನಲ್ಲಿ 14 ಯುವಕರು, 6 ಯುವತಿಯರು!; ರೇವ್ ಪಾರ್ಟಿ ಮಾಡ್ತಿದ್ದವರು ಸಿಕ್ಕಿಬಿದ್ದಿದ್ದು ಹೇಗೆ..?
ಹೈದರಾಬಾದ್; ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗಿನ ನಟಿಯೊಬ್ಬರು ಸಿಕ್ಕಿಬಿದ್ದಿದ್ದರು.. ಅಷ್ಟೇ ಅಲ್ಲ, ಹೈದರಾಬಾದ್ ಮೂಲದವರೇ ಹಲವರಿದ್ದರು ಎಂಬುದು ಮಾಹಿತಿ.. ಇದೀಗ, ಹೈದರಾಬಾದ್‌ನಲ್ಲೇ ರೇವ್ ಪಾರ್ಟಿ ನಡೆದಿದ್ದು, ಪೊಲೀಸರು ಇದನ್ನು ಬಯಲು ಮಾಡಿದ್ದಾರೆ..
ಇದನ್ನೂ ಓದಿ; ತುಪ್ಪ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಹೇಗೆ..?
ಬರ್ತ್ ಡೇ ಪಾರ್ಟಿ ಹೆಸರಿನಲ್ಲಿ ಹೈದರಾಬಾದ್‌ನ ಮಾದಾಪುರ್‌ನ ಅಪಾರ್ಟ್‌ಮೆಂಟ್ ಒಂದರ ಫ್ಲ್ಯಾಟ್‌ನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು.. ಗುರುವಾರ ರಾತ್ರಿ ನಡೆದ ಈ ಪಾರ್ಟಿಗೆ ಹುಡುಗಿಯರನ್ನು ಕೂಡಾ ಕರೆಸಲಾಗಿತ್ತು.. ಫ್ಲ್ಯಾಟ್‌ನಲ್ಲಿ 14 ಯುವಕರು ಹಾಗೂ 6 ಯುವತಿಯರು ಪಾರ್ಟಿ ಮಾಡುತ್ತಿದ್ದರು.. ಈ ವಿಚಾರ ಟಾಸ್ಕ್ ಫೋರ್ಸ್ ಪೊಲೀಸರಿಗೆ ಗೊತ್ತಾಗಿ ದಾಳಿ ಮಾಡಿದ್ದಾರೆ.. ಐವರು ಸಂಘಟಕರ ವಿರುದ್ಧ ಕೇಸ್ ದಾಖಲು ಮಾಡಿದ್ದು ವಿಚಾರಣೆ ನಡೆಸಲಾಗುತ್ತಿದೆ..
ಇದನ್ನೂ ಓದಿ; ಬಿಜೆಪಿ ಮೇಯರ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!
ರೇವ್ ಪಾರ್ಟಿಯಲ್ಲಿ ಒಂದು ಗ್ರಾಂ ಕೊಕೇನ್, ಎರಡು ಗ್ರಾಂ ಎಂಡಿಎಂಎ, ಹಲವು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.. ಜೊತೆಗೆ ಹುಡುಗಿಯರನ್ನು ಕರೆತರಲು ಬಳಸಿದ್ದ ಇನ್ನೋವಾ ಕಾರನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.. ಮಾದಕವಸ್ತುಗಳ ಮೌಲ್ಯ 1 ಲಕ್ಷದ 25 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ.. ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕರು ಡ್ರಗ್ಸ್ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ..
ಇದನ್ನೂ ಓದಿ; 15 ದಿನಗಳ ಕಾಲ ಸಕ್ಕರೆ ಬಳಕೆ ನಿಲ್ಲಿಸಿಬಿಟ್ಟರೆ ನಮ್ಮ ದೇಹದಲ್ಲಿ ಏನಾಗುತ್ತೆ..?
ಬೇಗಂಪೇಟೆಯ ನಾಗರಾಜು ಎಂಬುವವರ ಹುಟ್ಟುಹಬ್ಬದ ಹೆಸರಿನಲ್ಲಿ ಈ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈವೆಂಟ್ ಪ್ರವರ್ತಕ ಕಿಶೋರ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ನಾಗರಾಜು, ಸಾಯಿಕುಮಾರ್ ಹಾಗೂ ಬೇಗಂಪೇಟೆ ಭಾಗದ ಬಿ.ಟೆಕ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮೋಟರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.