CinemaInternational

ಗಾಂಧೀಜಿ ನಂತರ ಶಾರುಖ್ ಖಾನ್‌ಗೆ ಪ್ರತಿಷ್ಠಿತ ಗೌರವ ನೀಡಿದ ಫ್ರಾನ್ಸ್‌!

ಮುಂಬೈ; ಬಾಲಿವುಡ್‌ ಖಾನ್‌ತ್ರಯರಲ್ಲಿ ಒಬ್ಬರಾದ ಖ್ಯಾತ ನಟ ಶಾರುಖ್‌ ಖಾನ್‌ಗೆ ದಶಕಗಳು ಕಳೆದರೂ ಕ್ರೇಜ್‌ ಕಡಿಮೆಯಾಗಿಲ್ಲ.. ಈಗಲೂ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.. ಜಗತ್ತಿನಾದ್ಯಂತ ಅವರನ್ನು ಪ್ರೀತಿಸುವವರು ಅವರ ನಟನೆಯನ್ನು ಇಷ್ಟಪಡುವವರು ಇದ್ದಾರೆ.. ಇವರಿಗೆ ಪ್ರಪಂಚದ ಮಟ್ಟದಲ್ಲಿ ಹಲವಾರು ಗೌರವಗಳು ದಕ್ಕಿವೆ.. ಇದೀಗ ಮತ್ತೊಂದು ಬಹುದೊಡ್ಡ ಗೌರವ ಶಾರುಖ್‌ ಖಾನ್‌ ಪಾಲಾಗಿದೆ.. ಈ ಗೌರವ ಪಡೆದ ಮೊದಲ ಭಾರತೀಯ ನಟ ಎನಿಸಿಕೊಂಡಿದ್ದಾರೆ..

ಇದನ್ನೂ ಓದಿ; ತುಪ್ಪ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಹೇಗೆ..?

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿರುವ ಗ್ರಾವಿನ್ ಮ್ಯೂಸಿಯಂಗೆ ದೊಡ್ಡ ಹೆಸರಿದೆ.. ಈ ಮ್ಯೂಸಿಯಂನಲ್ಲಿ ಶಾರುಖ್ ಖಾನ್‌ ಅವರ ಚಿತ್ರ ಹಾಗೂ ಹೆಸರಿರುವ ಹೊಸ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಗ್ರಾವಿನ್‌ ಮ್ಯೂಸಿಯಂ ಪ್ರಪಂಚದಲ್ಲೇ ಪ್ರಸಿದ್ಧಿ ಹೊಂದಿದ್ದು, ಇದರಲ್ಲಿ ಶಾರುಖ್ ಖಾನ್‌ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳಿವೆ.. ಮೇಣದ ಪ್ರತಿಮೆ ಸ್ಥಾಪಿಸಿದ್ದಲ್ಲದೆ ಈ ಮ್ಯೂಸಿಯಂ ವತಿಯಿಂದ ಶಾರುಖ್ ಖಾನ್ ಗೌರವಾರ್ಥ ಚಿನ್ನದ ನಾಣ್ಯ ಬಿಡುಗಡೆ ಮಾಡಲಾಗಿದೆ.. ಶಾರುಖ್ ಖಾನ್ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ನಟ. ಮಹಾತ್ಮ ಗಾಂಧಿಯವರ ನಂತರ ಶಾರುಖ್ ಖಾನ್ ಈ ಗೌರವವನ್ನು ಪಡೆದ ಎರಡನೇ ಭಾರತೀಯರಾಗಿದ್ದಾರೆ.

ಇದನ್ನೂ ಓದಿ; ಬಿಜೆಪಿ ಮೇಯರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!

 

Share Post