ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣ; ಅಕ್ರಮ ಕಟ್ಟಡ ತೆರವಿಗೆ ಅಡ್ಡಿ
ಮೈಸೂರು; ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಿವೃತ್ತ ಐಬಿ ಅಧಿಕಾರಿಯನ್ನು ಕಾರು ಹರಿಸಿ ಕೊಲೆ ಮಾಡಲಾಗಿತ್ತು. ಅದರ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಈ ಕೊಲೆ ನಡೆದಿದ್ದ ಅಕ್ರಮವಾಗಿ ಕಟ್ಟುತ್ತಿರುವ ಕಟ್ಟಡ ವಿವಾದದಿಂದಾಗಿ. ಇಂದು ಈ ಕಟ್ಟಡ ತೆರವು ಮಾಡಲು ನಗರ ಪಾಲಿಕೆ ಅಧಿಕಾರಿಗಳು ಬಂದಿದ್ದರು. ಈ ವೇಳೆ ಮಾತು ಚಕಮಕಿ ನಡೆದಿದೆ.
ಮೈಸೂರಿನ ಟಿ.ಕೆ.ಬಡಾವಣೆಯ ಕುಲಕರ್ಣಿ ಹತ್ಯೆಯಾಗಿದ್ದ ನಿವೃತ್ತ ಅಧಿಕಾರಿ. ಇವರ ಮನೆ ಪಕ್ಕದ ಜಾಗದಲ್ಲಿ ಮನೆಯೊಂದನ್ನು ಕಟ್ಟಡಲಾಗುತ್ತಿತ್ತು. ಆದ್ರೆ ಕಟ್ಟಡವನ್ನು ಕಾನೂನು ಮೀರಿ ಕಟ್ಟುತ್ತಿದ್ದರಿಂದ ಕುಲಕರ್ಣಿಯವರು ಕೋರ್ಟ್ ಮೊರೆಹೋಗಿದ್ದರು. ಈ ಕಾರಣಕ್ಕಾಗಿ ಪಕ್ಕದ ಮನೆಯ ಮಾದಪ್ಪನ ಪುತ್ರ ಮನು, ಕುಲಕರ್ಣಿಯನ್ನು ಹತ್ಯೆ ಮಾಡಿದ್ದ. ಇದೀಗ ಅಧಿಕಾರಿಗಳು ಈ ಕಟ್ಟಡವನ್ನು ತೆರವು ಮಾಡುತ್ತಿದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.