ದಿನಾ ಸೆಕ್ಸ್‌ಗೆ ಒತ್ತಾಯಿಸುವ ಲೇಡಿ ಬಾಸ್!; ಸೊಂಟ ಮುರಿದುಕೊಂಡ ಉದ್ಯೋಗಿ!
ಕ್ಯಾಲಿಫೋರ್ನಿಯಾ; ಉದ್ಯೋಗ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಕೊಡುವ ಸುದ್ದಿಗಳನ್ನು ನಾವು ನೋಡೇ ಇರ್ತೀವಿ.. ಆದ್ರೆ ಮಹಿಳೆಯರಿಗೆ ಅಷ್ಟೇ ಅಲ್ಲ, ಕೆಲವು ಕಡೆ ಪುರುಷ ಉದ್ಯೋಗಿಗಳು ಕೂಡಾ ಕಿರುಕುಳಕ್ಕೊಳಗಾಗುತ್ತಿದ್ದಾರೆ.. ಇದಕ್ಕೆ ಉದಾಹರಣೆಯೇ ಈ ಸುದ್ದಿ.. ಕ್ಯಾಲಿಫೋರ್ನಿಯಾದಲ್ಲಿ ಮಹಿಳಾ ಸೆನೆಟರ್ ಒಬ್ಬರು ನನ್ನನ್ನು ಸೆಕ್ಸ್ ಸ್ಲೇವ್ ಆಗಿ ನೋಡುತ್ತಿದ್ದಳು ಎಂದು ಮಾಜಿ ಉದ್ಯೋಗಿಯೊಬ್ಬರು ಆರೋಪ ಮಾಡಿದ್ದಾರೆ..
ಸೆನೆಟರ್ ಮೇರಿ ಅಲ್ವಾರಾಡೊ ಗಿಲ್ ಎಂಬುವವರ ವಿರುದ್ಧ ಇಂತಹದ್ದೊಂದು ಆರೋಪ ಕೇಳಿಬಂದಿದೆ.. 2022ರಲ್ಲಿ ಸೆನೆಟರ್ ಅಲ್ವಾರಾಡೊ ಗಿಲ್ ಅವರು ಚಾಡ್ ಕಾಂಡಿಟ್ ಎಂಬಾತನನ್ನು ತನ್ನ ಕಚೇರಿಯಲ್ಲಿ ಸಿಬ್ಬಂದಿ ಮುಖ್ಯಸ್ಥನನ್ನಾಗಿ ನೇಮಿಸಿಕೊಂಡಿದ್ದರು.. ಚಾಂಡ್ ಕಾಂಡಿಟ್‌ನನ್ನು ಉದ್ಯೋಗದ ಸ್ಥಳದಲ್ಲಿ ಹಾಗೂ ಪ್ರವಾಸ ಹೋದ ಸ್ಥಳದಲ್ಲಿ ಸೆನೆಟರ್ ಸೆಕ್ಸ್ ಗುಲಾಮನನ್ನಾಗಿ ನೋಡುತ್ತಿದ್ದಳಂತೆ.. ಮಹಿಳಾ ಸೆನೆಟರ್ ಅಲ್ವಾರಾಡೋ ಗಿಲ್ ಅವರು ನನ್ನನ್ನು ಸಂಭೋಗ ನಡೆಸಲು ಬಲವಂತ ಮಾಡುತ್ತಿದ್ದರು.. ಕೆಲವೊಮ್ಮೆ ನಾನು ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ನನ್ನನ್ನು ಕೆಲಸದಿಂದ ವಜಾ ಮಾಡಿದ್ದರು ಎಂದು ಕಾಂಡಿಟ್ ಆರೋಪ ಮಾಡಿದ್ದಾರೆ..
ವಿಪರೀತ ಬಲವಂತ ಮಾಡಿದ್ದ ಅಲ್ವಾರಾಡೊ ಗಿಲ್ ಜೊತೆ ನಿರಂತರ ಸೆಕ್ಸ್ ನಲ್ಲಿ ತೊಡಗಬೇಕಾದ ಪರಿಸ್ಥಿತಿ ಬಂದಿತ್ತು.. ಇದರಿಂದಾಗಿ ನಾನು ಬೆನ್ನು ಹಾಗೂ ಸೊಂಟ ನೋವಿನಿಂದ ಸಂಕಷ್ಟ ಅನುಭವಿಸುತ್ತಿದ್ದೇನೆ ಎಂದೂ ಕಾಂಡಿಟ್ ಹೇಳಿಕೊಂಡಿದ್ದಾನೆ.
2023ರಲ್ಲಿ ಒಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು.. ಈ ವೇಳೆ ಮೇರಿ ಅಲ್ವಾರಾಡೋ ಗಿಲ್ ಕಾರಿನಲ್ಲೇ ಓರಲ್ ಸೆಕ್ಸ್‌ಗೆ ವಿಪರೀತ ಒತ್ತಾಯ ಮಾಡಿದಳು.. ಈ ಕಾರಣಕ್ಕಾಗಿ ಚಲಿಸುತ್ತಿದ್ದ ಕಾರಿನಲ್ಲಿಯೇ ಓರಲ್ ಸೆಕ್ಸ್ ಮಾಡುತ್ತಿದ್ದಾಗ ನನ್ನ ಬೆನ್ನಿಗೆ ಗಂಭೀರವಾದಂತಹ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ.. ನನಗೆ ಆರೋಗ್ಯ ಸಮಸ್ಯೆಯಾದರೂ ಆಕೆ ನನಗೆ ಕರುಣೆ ತೋರಲಿಲ್ಲ ಎಂದೂ ದೂರಿದ್ದಾರೆ.. ಆದ್ರೆ ಈ ಆರೋಪವನ್ನು ಮೇರಿ ಅಲ್ವಾರಾಡೊ ಗಿಲ್ ಪರ ವಕೀಲರು ತಳ್ಳಿಹಾಕಿದ್ದಾರೆ.