Cinema

5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್‌; ದುಬಾರಿಯಾಗ್ತಿದೆ ಐಟಂ ಸಾಂಗ್‌

ಮುಂಬೈ; ಇತ್ತೀಚೆಗೆ ಪ್ರತಿ ಸಿನಿಮಾದಲ್ಲೂ ಐಟಂ ಸಾಂಗ್‌ ಕಾಮನ್‌ ಆಗಿಬಿಟ್ಟಿದೆ.. ಸಿನಿಮಾ ಅಂದ್ರೆ ಐಟಂ ಸಾಂಗ್‌ ಇರಲೇಬೇಕು ಎಂಬ ಮಟ್ಟಿಗೆ ಇದೆ.. ಹೀಗಾಗಿ ಐಟಂ ಸಾಂಗ್‌ಗೆ ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡೋದಕ್ಕೆ ನಿರ್ಮಾಪಕರು ರೆಡಿ ಇರುತ್ತಾರೆ.. ಈ ಐಟಂ ಸಾಂಗ್‌ಗಳೇ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ಕೂಡಾ ಕೊಡುತ್ತಿವೆ.. ಹೀಗಾಗಿ ನಿರ್ದೇಶಕರು ಬೇಡ ಎಂದರೂ ನಿರ್ಮಾಪಕರು ಐಟಂ ಸಾಂಗ್‌ ಇರಲಿ ಎನ್ನುತ್ತಾರೆ.. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡೋದಕ್ಕೆ ರೆಡಿಯಾಗ್ತಾರೆ.. ಹೀಗಾಗಿ ಐಟಂ ಸಾಂಗ್‌ ಗಳ ನಿರ್ಮಾಣ ಅತಿ ದುಬಾರಿಯಾಗುತ್ತಿದೆ.. ಅದರಲ್ಲಿ ಕುಣಿಯುವ ನಟಿಯರು ಕೂಡಾ ಸಿನಿಮಾ ಹೀರೋಯಿನ್‌ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.. ಆ ಮಟ್ಟಕ್ಕೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಕೂಡಾ..

ಇದನ್ನೂ ಓದಿ; ನಿಮ್ಮ ಈ ವರ್ತನೆಯೂ ಡಿಪ್ರೆಷನ್‌ ಲಕ್ಷಣವೇ..; ಎಚ್ಚರ ಎಚ್ಚರ..!

5 ಕೋಟಿ ರೂಪಾಯಿ ಚಾರ್ಜ್‌ ಮಾಡುವ ನಟಿಯರು;

ಅನೇಕ ನಟಿಯರು ಈಗ ಐಟಂ ಸಾಂಗ್‌ ನಲ್ಲಿ ಕುಣಿಯುತ್ತಿದ್ದಾರೆ.. ಸ್ಟಾರ್‌ ನಟಿಯರು ಕೂಡಾ ಈ ನೃತ್ಯಕ್ಕೆ ಸೈ ಎನ್ನುತ್ತಿದ್ದಾರೆ.. ಯಾಕಂಗ್ರೆ ಒಂದು ಹಾಡಿಗೆ ಕುಣಿದರೆ ಅವರಿಗೆ ಕೋಟಿ ಕೋಟಿ ಹಣ ಸಿಗುತ್ತದೆ.. ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ ಅನೇಕರು ಈ ಐಟಂ ಸಾಂಗ್‌ಗಳಿಂದ ಚೆನ್ನಾಗಿ ದುಡ್ಡು ಮಾಡುತ್ತಿದ್ದಾರೆ.. 4-5 ನಿಮಿಷದ ಐಟಂ ಸಾಂಗ್‌ಗೆ ಐದು ಕೋಟಿ ರೂಪಾಯಿವರೆಗೂ ನಟಿಯರು ಚಾರ್ಜ್‌ ಮಾಡುತ್ತಾರೆ.. ಭಾರತೀಯ ಚಿತ್ರರಂಗದಲ್ಲಿ ಐಟಂ ಸಾಂಗ್‌ಗೆ ನಟಿಯರು ಚಾರ್ಜ್‌ ಮಾಡಿರುವ ಅತಿ ಹೆಚ್ಚು ಸಂಭಾವನೆ ಇದು..

ಇದನ್ನೂ ಓದಿ; ಬೇಸಿಗೆಯಲ್ಲಿ ಮಧುಮೇಹಿಗಳು ಕುಡಿಯಬಹುದಾದ ಪಾನೀಯಗಳಿವು..!

ಯಾರ್ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ..?

ಐಟಂ ಸಾಂಗ್​ನಲ್ಲಿ ಅನೇಕ ನಟಿಯರು ಕಾಣಿಸಿಕೊಳ್ಳುತ್ತಾರೆ.. ಅದರಲ್ಲಿ ಪ್ರಮುಖರ ಸಂಭಾವನೆಯನ್ನು ನಾವು ತಿಳಿಯೋಣ.. ಮಲೈಕಾ ಅರೋರಾ ಅವರು ಅತಿ ಹೆಚ್ಚು ಐಟಂ ಸಾಂಗ್‌ಗಳಲ್ಲಿ ಕುಣಿದಿದ್ದಾರೆ.. ಇವರು ಪ್ರತಿ ಹಾಡಿಗೆ ಅವರು 50 ಲಕ್ಷದಿಂದ 1 ಕೋಟಿ ರೂಪಾಯಿಯವರೆಗೆ ಸಂಭಾವನೆಯನ್ನು ಪಡೆಯುತ್ತಾರೆ.. ಕರೀನಾ ಕಪೂರ್ ಅವರು ಒಂದು ಐಟಂ ಸಾಂಗ್‌ಗೆ ಕುಣಿಯಲು 1.5 ಕೋಟಿ ರೂಪಾಯಿ ಪಡೆದರೆ, ತಮನ್ನಾ ಭಾಟಿಯಾ 1 ಕೋಟಿ ರೂಪಾಯಿ, ಕತ್ರಿನಾ ಕೈಫ್ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ಬಾಲಿವುಡ್‌ನ ದುಬಾರಿ ಕಲಾವಿದರಲ್ಲಿ ಒಬ್ಬರಾದ ಸನ್ನಿ ಲಿಯೋನ್ ಪ್ರತಿ ಹಾಡಿಗೆ 2-3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.. ಸಮಂತಾ ಕೂಡಾ ಇತ್ತೀಚೆಗೆ ಐಟಂ ಸಾಂಗ್‌ ನಲ್ಲಿ ಕುಣಿದು ದುಬಾರಿ ಸಂಭಾವನೆ ಪಡೆದಿದ್ದರು..

ಇದನ್ನೂ ಓದಿ; ಮುಂಬೈ ಇಂಡಿಯನ್ಸ್‌ ಸತತ ಸೋಲು; ಕಂಗೆಟ್ಟ ಪಾಂಡ್ಯ ದೇವರ ಮೊರೆ!

ಪುಷ್ಪ ಸಿನಿಮಾದಲ್ಲಿ ಸಮಂತಾ ಹೆಜ್ಜೆ;

ಅಲ್ಲು ಅರ್ಜುನ್ ನಟನೆಯ ತೆಲುಗಿನ ಪುಷ್ಪ ಚಿತ್ರದಲ್ಲಿ ‘ಹೂ ಅಂತೀಯಾ ಮಾವ..’ ಹಾಡಿಗೆ ಸಮಂತಾ ಕುಣಿದು ಕುಪ್ಪಳಿಸಿದ್ದರು.. ಇದಕ್ಕೆ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದರು.. ಐದು ನಿಮಿಷ ಕಾಣಿಸಿಕೊಂಡ ಸಮಂತಾ ಅವರ ವೃತ್ತಿಜೀವನದಲ್ಲಿ ಮೊದಲ ವಿಶೇಷ ಐಟಂ ಸಾಂಗ್ ಇದಾಗಿದೆ.

ಇದನ್ನೂ ಓದಿ; ತಿರುಪತಿ ತಿಮ್ಮಪ್ಪನಿಗೆ ಭಾರೀ ಪುಷ್ಪ ಯಜ್ಞ; ಏನಿದರ ಉದ್ದೇಶ..?

Share Post