ಖಾಸಗಿ ಭಾಗಗಳಲ್ಲಿ ತುರಿಕೆ ಹೆಚ್ಚಾಗುತ್ತಿದೆಯಾ..?; ಹಾಗಾದರೆ ಇಲ್ಲಿದೆ ಸಮಸ್ಯೆಗೆ ಪರಿಹಾರ!
ಹೆಚ್ಚಿನ ಜನರು ಖಾಸಗಿ ಭಾಗಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಈ ಭಾಗಗಳಲ್ಲಿ ಸೋಂಕು ಸಂಭವಿಸುತ್ತದೆ. ಯೀಸ್ಟ್ ಸೋಂಕುಗಳು ಮತ್ತು ಕ್ಯಾಂಡಿಡಲ್ ವಲ್ವೋವಾಜಿನೈಟಿಸ್ ವಿಶೇಷವಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಈ ಸೋಂಕುಗಳು ಹೆಚ್ಚಾಗಿ ನಿರ್ಜಲೀಕರಣ ಮತ್ತು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ, ಅಲ್ಲಿ ಯೀಸ್ಟ್ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಆಗ ಸೋಂಕುಗಳು ಬರುತ್ತವೆ. ಸೋಂಕುಗಳನ್ನು ಕಡಿಮೆ ಮಾಡಲು ಅನೇಕ ಕ್ರೀಮ್ಗಳು ಮತ್ತು ಔಷಧಿಗಳನ್ನು ಬಳಸಲಾಗುತ್ತದೆ. ಅಸಮರ್ಪಕ ಆಹಾರ ಮತ್ತು ಅಜೀರ್ಣ ಸಮಸ್ಯೆಗಳಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳಿವೆ. ಎಂದು ತಿಳಿಯಿರಿ.
ಇದನ್ನೂ ಓದಿ; 5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್; ದುಬಾರಿಯಾಗ್ತಿದೆ ಐಟಂ ಸಾಂಗ್
ಆ ಸ್ಥಳದಲ್ಲಿ ಅಲೋವೆರಾ ಜೆಲ್ ಹಚ್ಚಿರಿ;
ಬೇಸಿಗೆಯಲ್ಲಿ ದೇಹದ ಖಾಸಗಿ ಭಾಗಗಳಲ್ಲಿ ತುರಿಕೆ ಹೆಚ್ಚಾಗುತ್ತದೆ.. ಬೆವರಿನಿಂದಲೂ ಇದು ಸಂಭವಿಸುತ್ತದೆ.. ಬೆವರು ಹೆಚ್ಚಾದಾಗ ಬ್ಯಾಕ್ಟೀರಿಯಾಗಳೂ ಹುಟ್ಟಿಕೊಳ್ಳುತ್ತವೆ.. ಹೀಗಾಗಿ ಆ ಭಾಗದಲ್ಲಿ ಆಲೋವೆರಾ ಜೆಲ್ ಹಚ್ಚುವುದು ಉತ್ತಮ.. ಅಲೋವೆರಾ ಜೆಲ್ ಆಂಟಿಮೈಕ್ರೊಬಿಯಲ್ ಗುಣ ಹೊಂದಿದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಅನುಕೂಲವಾಗುತ್ತದೆ.. ಚರ್ಮದ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಈ ಆಲೋವೆರಾ ಜೆಲ್ ನಿಯಂತ್ರಿಸುತ್ತದೆ.. ತುರಿಕೆ ಇರುವ ಜಾಗಕ್ಕೆ ಆಲೋವೆರಾ ಜೆಲ್ ಹಚ್ಚುವುದರಿಂದ ಚರ್ಮದ ಸೋಂಕಿನಂತಹ ಸಮಸ್ಯೆಗಳು ಇಲ್ಲವಾಗುತ್ತವೆ. ಅಂಗಡಿಗಳಲ್ಲಿ ಆಲೋವೆರಾ ಜೆಲ್ ಸಿಗುತ್ತದೆ.. ಮನೆಯ ಬಳಿಯೇ ಅಲೊವೆರಾ ಬೆಳೆದಿದ್ದರೆ ಅದರಿಂದ ಜೆಲ್ ಹೊರತೆಗೆದು ನೇರವಾಗಿ ಅದಕ್ಕೆ ಹಚ್ಚಬಹುದು..ಇದು ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಅನುಕೂಲ ಮಾಡಿಕೊಡುತ್ತದೆ…
ಇದನ್ನೂ ಓದಿ; ನಿಮ್ಮ ಈ ವರ್ತನೆಯೂ ಡಿಪ್ರೆಷನ್ ಲಕ್ಷಣವೇ..; ಎಚ್ಚರ ಎಚ್ಚರ..!
ಚರ್ಮದ ಆರೈಕೆಗೆ ಮೊಸರು ಉಪಯುಕ್ತ;
ಚರ್ಮದ ಆರೈಕೆ ಮಾಡಲು ಮೊಸರು ಉಪಯೋಗಿಸುತ್ತಾರೆ.. ಚರ್ಮದ ತುರಿಕೆಗೂ ಇದು ಸಹಾಯ ಮಾಡುತ್ತದೆ.. ಯಾಕಂದ್ರೆ ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಅಧಿಕವಾಗಿದ್ದು, ಮೊಸರು ತಿಂದರೆ ಯೀಸ್ಟ್ ಇನ್ಫೆಕ್ಷನ್ ತಡೆಗಟ್ಟಬಹುದು. ಇನ್ನು ದೇಹವನ್ನು ಆರೋಗ್ಯವಾಗಿಡಲು ಗುಡ್ ಬ್ಯಾಕ್ಟೀರಿಯಾ ಬೇಕಾಗುತ್ತದೆ.. ಆ ಬ್ಯಾಕ್ಟೀರಿಯಾಗೆ ಈ ಮೊಸರು ಅನುಕೂಲ ಮಾಡಿಕೊಡುತ್ತದೆ.. ಈ ಬ್ಯಾಕ್ಟೀರಿಯಾ ಯೀಸ್ಟ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ. ಮೊಸರಿನಿಂದ ನಾವು ನಮ್ಮ ದೇಹದ ಚರ್ಮದ ಆರೈಕೆ ಮಾಡಬಹುದು.. ಇದರಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಮಹಿಳೆಯರ ಯೋನಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.. ಮೊಸರು ಯೋನಿ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಿ, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊಸರನ್ನು ತಿನ್ನುವದಷ್ಟೇ ಅಲ್ಲ, ಸಮಸ್ಯೆ ಇರುವ ಜಾಗಕ್ಕೆ ಹಚ್ಚಬಹುದು..
ಇದನ್ನೂ ಓದಿ; ಬೇಸಿಗೆಯಲ್ಲಿ ಮಧುಮೇಹಿಗಳು ಕುಡಿಯಬಹುದಾದ ಪಾನೀಯಗಳಿವು..!
ತೆಂಗಿನ ಎಣ್ಣೆ ಹಚ್ಚುವುದರಿಂದ ತುರಿಕೆ ತಡೆಯಬಹುದು;
ಇನ್ನು ತೆಂಗಿನ ಎಣ್ಣೆಯಲ್ಲಿ ಅನೇಕ ಔಷಧೀಯ ಗುಣಗಳಿವೆ.. ಇದರಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಲ್ ಗುಣಗಳಿವೆ.. ಇದರಿಂದಾಗಿ ತೆಂಗಿನ ಎಣ್ಣೆ ಚರ್ಮದ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.. ಜೊತೆಗೆ ತೆಂಗಿನೆಣ್ಣೆಯು ಚರ್ಮದ ಸೋಂಕನ್ನು ಬರದಂತೆ ತಡೆಯುತ್ತದೆ.. ಖಾಸಗಿ ಅಂಗಗಳ ಬಳಿ ತೆಂಗಿನ ಎಣ್ಣೆ ಹಚ್ಚುವುದರಿಂದ ಚರ್ಮದ ಕಾಯಿಲೆಗಳನ್ನು ನಿವಾರಣೆ ಮಾಡಬಹುದು. ಈ ಎಣ್ಣೆಯಲ್ಲಿರುವ ಕ್ಯಾಪ್ರಿಲಿಕ್ ಆಮ್ಲ ಯೀಸ್ಟ್ ಸೋಂಕನ್ನು ದೂರ ಮಾಡುತ್ತದೆ. ಖಾಸಗಿ ಭಾಗಗಳಲ್ಲಿ ಯೀಸ್ಟ್ ಸೋಂಕಿನ ವಿರುದ್ಧ ಹೋರಾಡಲಿದ್ದು, ಅದಕ್ಕಾಗಿ ನೈಸರ್ಗಿಕ ಎಣ್ಣೆಯನ್ನು ಹಚ್ಚಿ ಸ್ವಲ್ಪ ಹೊತ್ತು ಇಟ್ಟು ತಣ್ಣೀರಿನಿಂದ ಸ್ವಚ್ಛಗೊಳಿಸಬೇಕು. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಎಂದು ತಜ್ಞರು ಹೇಳುತ್ತಾರೆ..
ಆಪಲ್ ಸೈಡರ್ ವಿನೆಗರ್ ಬಳಸುವುದು ಒಳ್ಳೆಯದು;
ಆಪಲ್ ಸೈಡರ್ ವಿನೆಗರ್ ಕೂಡಾ ಯೀಸ್ಟ್ ಸೋಂಕನ್ನು ಕಡಿಮೆ ಮಾಡುತ್ತದೆ.. ಈ ನಿಟ್ಟಿನಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಲೋಟ ನೀರಿನಲ್ಲಿ ಒಂದರಿಂದ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿ ಕುಡಿಯಬಹುದು. ದಿನಕ್ಕೆ ಕನಿಷ್ಠ 3 ಬಾರಿ ಕುಡಿದರೆ ಒಳ್ಳೆಯದು. ಅದೇ ರೀತಿ ಸ್ನಾನದ ನೀರಿಗೆ ಒಂದು ಕಪ್ ಆಪಲ್ ಸೈಡರ್ ವಿನೆಗರ್ ಸೇರಿಸಿ ಸ್ನಾನ ಮಾಡಬಹುದು. ಇದರ ಜೈವಿಕ ಸಕ್ರಿಯ ಪದಾರ್ಥಗಳು ಸೋಂಕುಗಳಿಗೆ ಕಾರಣವಾಗುವ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ರಕ್ಷಿಸುತ್ತದೆ.
ಇದನ್ನೂ ಓದಿ; ಮುಂಬೈ ಇಂಡಿಯನ್ಸ್ ಸತತ ಸೋಲು; ಕಂಗೆಟ್ಟ ಪಾಂಡ್ಯ ದೇವರ ಮೊರೆ!
ಬೇವು ಕೂಡಾ ಚರ್ಮಕ್ಕೆ ಒಳ್ಳೆಯದು;
ಯೋನಿ ಸೋಂಕುಗಳಿಗೆ ಬೇವು ತುಂಬಾನೇ ಒಳ್ಳೆಯದು. ಒಂದು ಲೀಟರ್ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ ಮತ್ತು ಅದು ಅರ್ಧಕ್ಕೆ ಕಡಿಮೆಯಾಗುವವರೆಗೆ ಕುದಿಸಬೇಕು. ಈ ನೀರಿನಿಂದ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಬೇಕು.. ಹಾಗೆ ಮಾಡುವುದರಿಂದ ಖಾಸಗಿ ಭಾಗಗಳಲ್ಲಿ ಉಂಟಾಗಿರುವ ಚರ್ಮದ ಸೋಂಕನ್ನು ನಿವಾರಣೆ ಮಾಡಬಹುದು..
ಇದನ್ನೂ ಓದಿ; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸ್ತಾರಂತೆ ಸೋನಿಯಾ ಅಳಿಯ!
ಟೀ ಟ್ರೀ ಆಯಿಲ್;
ಟೀ ಟ್ರೀ ಆಯಿಲ್ ಕೂಡಾ ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಆಂಟಿ-ವೈರಲ್ ಗುಣಗಳಿಂದ ಸಮೃದ್ಧವಾಗಿರುವ ಟೀ ಟ್ರೀ ಆಯಿಲ್ ನೈಸರ್ಗಿಕ ಚರ್ಮವನ್ನು ಪೋಷಿಸುವ ಗುಣಗಳನ್ನು ಹೊಂದಿದೆ. ಆದ್ದರಿಂದ, ಇದನ್ನು ಬಳಸಬಹುದು. ಇದು ಯೋನಿ ಪ್ರದೇಶದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ 2-3 ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಬೇಕು. ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಮತ್ತು ಹತ್ತಿಯಿಂದ ಖಾಸಗಿ ಭಾಗಗಳಿಗೆ ಹಚ್ಚಬೇಕು.