Cinema

ಇಂದು ಹೃತಿಕ್‌ ರೋಶನ್‌ಗೆ ಹುಟ್ಟು ಹಬ್ಬದ ಸಂಭ್ರಮ

ಮುಂಬೈ : ಬಾಲಿವುಡ್‌ನ ಮೋಸ್ಟ್‌ ಹ್ಯಾಂಡ್ಸಮ್‌ ನಟ ಹೃತಿಕ್‌ ರೋಶನ್‌ ಅವರು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ವಿಕ್ರಮ್‌ ವೇದ ಸಿನಿಮಾದ ಫೋಟೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿರುವ ಹೃತಿಕ್‌ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್‌ ಸಿಕ್ಕಿದೆ.

ಇನ್ಸ್ಟಾಗ್ರಾಂನಲ್ಲಿ  40 ಮಿಲಿಯನ್‌ ಫಾಲೋವರ್ಸ್‌  ಹೊಂದಿರುವ ಹೃತಿಕ್‌ ರೋಷನ್‌ ಅವರಿಗೆ ಭಾರತವಷ್ಟೇ ಅಲ್ಲದೇ ಹೊರದೇಶಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಇನ್ನು ಟ್ವಿಟರ್‌ನಲ್ಲಿಯೂ 31ಮಿಲಿಯನ್‌ಗಿಂತಲೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ ಹೃತಿಕ್‌ ರೋಶನ್‌.

ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಗಣ್ಯರು, ಅಭಿಮಾನಿಗಳು ಹೃತಿಕ್‌ ಅವರ ಹುಟ್ಟು ಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಇನ್ನು #vedha #hrithikroshan ಎರಡೂ ಕೂಡ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಆಗಿವೆ.

ವಿಕ್ರಂ ವೇದಾ ಸಿನಿಮಾ ತಮಿಳಿನ ರೀಮೇಕ್‌ ಆಗಿದೆ. ಇದರಲ್ಲಿ ಹೃತಿಕ್‌ ಅವರು ವೇದಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮಿಳಿನ ವಿಕ್ರಂ ವೇದಾ ಸಿನಿಮಾದಲ್ಲಿ ಮಾಧವನ್‌ ಮತ್ತು ವಿಜಯ್‌ ಸೇತುಪತಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇನ್ನು ಬಾಲಿವುಡ್‌ನಲ್ಲಿ ಹೃತಿಕ್‌ ಮತ್ತು ಸೈಫ್‌ ಅಲಿ ಖಾನ್‌ ಅವರು ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ

 

Share Post