Lifestyle

ತಿರುಪತಿ ತಿಮ್ಮಪ್ಪನಿಗೆ ಭಾರೀ ಪುಷ್ಪ ಯಜ್ಞ; ಏನಿದರ ಉದ್ದೇಶ..?

ಚಿತ್ತೂರು; ದೇಶದ ಶ್ರೀಮಂತ ದೇವರು, ಕೋಟ್ಯಂತರ ಭಕ್ತರನ್ನು ಹೊಂದಿರುವ ತಿರುಪತಿ ತಿಮ್ಮಪ್ಪನಿಗೆ ಭಾರಿ ಪುಷ್ಪ ಜರುಗಿದೆ.. ವರ್ಷಕ್ಕೊಮ್ಮೆ ಈ ಪುಷ್ಪ ಯಜ್ಞ ನಡೆಯಲಿದ್ದು, ಈ ಬಾರಿ ಇದಕ್ಕಾಗಿ ಬರೋಬ್ಬರಿ 3 ಸಾವಿರ ಕೆಜಿ ಹಲವಾಋು ಬಗೆಯ ಹೂವುಗಳನ್ನು ಬಳಸಲಾಗಿದೆ..

ಇದನ್ನೂ ಓದಿ; ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದೇಕೆ..?

ತಿರುಪತಿ ಬಳಿ ಶ್ರೀನಿವಾಸ ಮಂಗಾಪುರ ಗ್ರಾಮ ಇದೆ.. ಇಲ್ಲಿನ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ಪುಷ್ಪ ಯಜ್ಞ ಮಾಡಲಾಗುತ್ತದೆ.. ಈ ಬಾರಿಯೂ ಕೂಡಾ ಕಲ್ಯಾಣ ವೆಂಕೆಟೇಶ್ವರಿಗೆ ವಿಶೇಷ ಪುಷ್ಪ ಯಜ್ಞ ನೆರವೇರಿಸಲಾಯಿತು.. ದೇವರ ಮೆರವಣಿಗೆ ಮಾಡಿ, ಯಜ್ಞ ನೆರವೇರಿಸಲಾಯಿತು.. ಈ ಮೆರವಣಿಗೆಯಲ್ಲಿ ದೇವತೆಗಳಿಗೆ ಪುಷ್ಪ ಸ್ನಾನ ಮಾಡಿಸಲಾಯಿತು.. ಇದಕ್ಕೆ  3 ಸಾವಿರ ಕೆಜಿ ವಿವಿಧ ಹೂವುಗಳು, ವಿವಿಧ ಬಗೆ ಎಲೆಗಳನ್ನು ಸಮಪರ್ಣೆ ಮಾಡಲಾಯಿತು..

ಇದನ್ನೂ ಓದಿ; ನಾನೇ ಸುರಸುಂದರಾಂಗ, ಹುಡುಗಿಯರೆಲ್ಲಾ ನನ್ನೇ ಪ್ರೀತಿಸ್ತಾರೆ; ಹುಡುಗನೊಬ್ಬನ ವಿಚಿತ್ರ ಭ್ರಮಾ ಕಾಯಿಲೆ!

ಶುಕ್ರರವಾರ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಈ ಯಜ್ಞ ನಡೆಯಿತು.. ಶ್ರೀನಿವಾಸ ಮಂಗಾಪುರದ ಕಲ್ಯಾಣ ವೆಂಕಟೇಶ್ವರ ಸ್ವಾಮಿಗೆ ಪುಷ್ಪ ಸ್ನಾನ ಮಾಡಿಸಲು ಲಿಲ್ಲಿ, ನೈದಿಲೆ, ಗುಲಾಬಿ, ಮಲ್ಲಿಗೆ ಮುಂತಾದ ಹೂವುಗಳನ್ನು ಬಳಸಲಾಗಿತ್ತು.

ಇದನ್ನೂ ಓದಿ; ಹೋಟೆಲ್‌ ಕೋಣೆ, ಆರು ಯುವಕರು, ಒಂದೇ ಹುಡುಗಿ; ಅಲ್ಲಿ ನಡೆದಿದ್ದೇನು..?

Share Post