Actress Ramya; ನಟಿ ರಮ್ಯಾ ಅವರ ನಾಯಿ ಕಾಣೆ; ಹುಡುಕಿಕೊಟ್ರೆ ಬಹುಮಾನ
ಬೆಂಗಳೂರು; ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕೆಲ ದಿನಗಳಿಂದ ಕಾಂಗ್ರೆಸ್ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಸ್ಟಾರ್ ಪ್ರಚಾರಕಿಯಾಗಿರುವುದರಿಂದ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಅವರ ಪ್ರೀತಿಯ ನಾಯಿ ಕಳೆದುಹೋಗಿದೆ. ಇದರಿಂದ ದುಃಖಿತರಾಗಿರುವ ರಮ್ಯಾ, ನಾಯಿಯನ್ನು ಹುಡುಕಿಕೊಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ರೇಸ್‌ಕೋರ್ಟ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್‌ನಿಂದ ನನ್ನ ನಾಯಿ ಕಳೆದುಹೋಗಿದೆ. ಅದನ್ನು ಹುಡುಕಿಕೊಡುವಂತೆ ರಮ್ಯಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾಯಿ ಫೋಟೋವನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದರು, ಮೇ 6ರಂದು ನನ್ನ ಮುದ್ದಿನ ನಾಯಿ ಚಾಂಪ್ ಕಾಣೆಯಾಗಿದೆ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಅದು ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಎಂದು ರಮ್ಯಾ ಹೇಳಿಕೊಂಡಿದ್ದಾರೆ. ನಾಯಿ ಸಿಕ್ಕಿದರೆ 7012708137 ಈ ನಂಬರ್‌ಗೆ ಕರೆ ಮಾಡುವಂತೆ ರಮ್ಯಾ ತಿಳಿಸಿದ್ದಾರೆ. ಇನ್ನು ನಾಯಿ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡೋದಾಗಿಯೂ ಹೇಳಿಕೊಂಡಿದ್ದಾರೆ.