CinemaNational

ಇಂದು ನಟ ನಾಗ ಚೈತನ್ಯ-ನಟಿ ಶೋಭಿತಾ ಧೂಳಿಪಾಳ್ಳ ನಿಶ್ಚಿತಾರ್ಥ!

ಹೈದರಾಬಾದ್‌; 2021ರಲ್ಲಿ ಸಮಂತಾ ಜೊತೆ ವಿಚ್ಛೇದನ ಪಡೆದಿದ್ದ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ಹಾಗೂ ನಟ ನಾಗಚೈತನ್ಯ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ನಟಿ ಶೋಭಿತಾ ಧೂಳಿಪಾಳ್ಳ ಅವರ ಜೊತೆ ಇಂದು ಅಕ್ಕಿನೇನಿ ನಾಗಚೈತನ್ಯ ನಿಶ್ಚಿತಾರ್ಥ ನಡೆಯಲಿದೆ ಎಂಬ ಮಾಹಿತಿ ಇದೆ.. ಆದ್ರೆ ಅಕ್ಕಿನೇನಿ ಕುಟುಂಬದಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಎಂಗೇಜ್‌ಮೆಂಟ್‌ ನಂತರ ಮದುವೆ ಬಗ್ಗೆ ನಾಗಚೈತನ್ಯ ಅವರೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; 13 ವರ್ಷದ ಹಿಂದೆ ಸತ್ತ ಗಂಡನಿಂದ ಮಗು ಪಡೆದಳಂತೆ ಈ ಮಹಿಳೆ!

ಕೆಲ ತಿಂಗಳ ಹಿಂದೆ ನಾಗಚೈತನ್ಯ ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲಿ ಶೋಭಿತಾ ಧೂಳಿಪಾಳ್ಳ ಪರಿಚಯವಾಗಿದ್ದು, ಅಂದಿನಿಂದ ಅವರು ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಸುದ್ದಿ ಇದೆ.. ಹಲವಾರು ದಿನಗಳಿಂದ ಇವರಿಬ್ಬರೂ ಮದುವೆಯಾಗುತ್ತಾರೆಂಬ ಸುದ್ದಿಗಳು ಹರಿದಾಡುತ್ತಿದ್ದವು.. ಈಗ ಆ ಸುದ್ದಿಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ..

ಇದನ್ನೂ ಓದಿ; ದರ್ಶನ್‌ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ!

ನಟಿಯೂ ಆಗಿರುವ ಶೋಭಿತಾ ಧೂಳಿಪಾಳ್ಳ ಅವರು 2013ರಲ್ಲಿ ಫೆಮಿನೋ ಮಿಸ್‌ ಇಂಡಿಯಾ ಅರ್ಥ್‌ ಟೈಟಲ್‌ ತನ್ನದಾಗಿಸಿಕೊಂಡಿದ್ದರು.. ಅನಂತರ ಅದೇ ವರ್ಷದಲ್ಲಿ ಮಿಸ್‌ ಅರ್ಥ್‌ ಸ್ಪರ್ಧೆಯಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು.. ಅನಂತರ ಸಿನಿಮಾ ಕ್ಷೇತ್ರಕ್ಕೆ ಬಂದ ಅವರು ರಾಮನ್‌ ರಾಘವ್‌, ಗೂಢಚಾರಿ, ಮೇಜರ್‌ ಎಂಬ ಸಿನಿಮಾಗಳನ್ನು ನಟಿಸಿದ್ದಾರೆ.. ಮೇಡ್‌ ಇನ್‌ ಹೆವೆನ್‌ ಎಂಬ ವೆಬ್‌ ಸೀರೀಸ್‌ನಲ್ಲೂ ಅವರು ನಟನೆ ಮಾಡಿದ್ದಾರೆ..

Share Post