Cinema

ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ :‌ ಕರುನಾಡಲ್ಲಿ ದಾದಾ ಅಮರ

ಬೆಂಗಳೂರು: ಕರುನಾಡ ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿ ಇಂದಿಗೆ ಹನ್ನೆರಡು ವರ್ಷ ಕಳೆದಿವೆ. ಕನ್ನಡಚಿತ್ರರಂಗದಲ್ಲಿ ಮೇರುನಟನಾಗಿ ಮಿಂಚಿ ಬರೋಬ್ಬರಿ ಇನ್ನೂರು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸಲ್ಲಿ ಅಚ್ಚಳಿಯದಂತೆ ಬೇರೂರಿದ್ದಾರೆ. 2009ರ ಡಿ.30 ವಿಷ್ಣು ಅಭಿಮಾನಿಗಳ ಪಾಲಿಗೆ ಕರಾಳ ದಿನವಾಗಿತ್ತು. ಕೇವಲ 59ವಯಸ್ಸಿಗೆ ಅವರ ಉಸಿರು ನಿಲ್ಲುತ್ತೆ ಎಂದು ಯಾರೂ ಕನಸಲ್ಲೂ ಊಹಿಸಿರಲಿಲ್ಲ. ಅಂದು ಅವರ ಸಾವು ಅಭಿಮಾನಿಗಳಿಗೆ ನುಂಗಲೃದ ತುತ್ತಾಗಿತ್ತು. ಅವರನ್ನು ಕಳೆದುಕೊಂಡ ಕನ್ನಡಚಿತ್ರರಂಗ ನಿಜಕ್ಕೂ ಬಡವಾಯಿತು. ಅವರ ಸಾಹಸ, ಸರಳತೆ, ಮಗುವಿನಂತಹ ಮನಸ್ಸು ಎಂಥವರನ್ನೂ ಆಕರ್ಷಿಸುತ್ತವೆ. ಇಂದು ಅವರ ಪುಣ್ಯಸ್ಮರಣೆ ಹಿನ್ನೆಲೆ ದಾದಾ ಅಭಿಮಾನಿಗಳು ಕೆಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ವಿಷ್ಣುವರ್ಧನ್‌ ಸ್ಮಾರಕಕ್ಕೆ ಭಾರತಿ ವಿಷ್ಣುವರ್ಧನೆ, ಅನಿರುದ್ಧ್‌, ಆಪ್ತರು ಹಾಗೂ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.

ಪುಣ್ಯ ಸ್ಮರಣೆ ಪ್ರಯುಕ್ತ ದಾದಾ ಸಮಾಧಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಗುತ್ತಿದೆ. ರಕ್ತದಾನ, ಉಚಿತ ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿಷ್ಣುವರ್ಧನ್​ ಅವರ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಎಲ್ಲರಿಗೂ ಅಸಮಾಧಾನ ಇದೆ. 12 ವರ್ಷ ಕಳೆದರೂ ಸ್ಮಾರಕ ನಿರ್ಮಾಣ ತಡವಾಗಿರುವುದು ಬೇಸರದ ಸಂಗತಿ. ಆದಷ್ಟು ಬೇಗ ಸ್ಮಾರಕ ನಿರ್ಮಾಣ ಮಾಡಬೇಕೆಂದು ಅಭಿಮಾನಿಗಳು ಎಂದು ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Share Post