ಅರೆಸ್ಟ್ ಆಗ್ತಾರಾ ಹೇಮಂತ್ ಸೊರೇನ್.?; ಸಿಎಂ ಆಗ್ತಾರಾ ಕಲ್ಪನಾ ಸೊರೇನ್..?
ರಾಂಚಿ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಿಸಲು ತಯಾರಿ ನಡೆಸಿದ್ದಾರೆ. ಇದನ್ನು ಅರಿತ ಹೇಮಂತ್ ಸೊರೇನ್ ಅವರು ಅಜ್ಞಾತ ಸ್ಥಳದಲ್ಲಿದ್ದಾರೆ. ಒಂದು ವೇಳೆ ಹೇಮಂತ್ ಸೊರೇನ್ ಅವರು ಪತ್ತೆಯಾದರೆ, ಅವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಅವರನ್ನು ಮುಖ್ಯಮಂತ್ರಿ ಮಾಡೋದಕ್ಕೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಚಿಂತನೆ ನಡೆಸಿದೆ.
ಹೇಮಂತ್ ಸೊರೇನ್ ಬಂಧನವಾದರೆ ಕಲ್ಪನಾ ಸೊರೇನ್ ಅವರು ಸಿಎಂ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಹೇಮಂತ್ ಸೊರೇನ್ ಅವರು ಶಾಸಕರಾಗದೇ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ, ಆರು ತಿಂಗಳೊಳಗೆ ಅವರು ಶಾಸಕರಾಗಬೇಕು. ಆದ್ರೆ ಜಾರ್ಖಂಡ್ ವಿಧಾನಸಭೆಯ ಅವಧಿ ಒಂದು ವರ್ಷದೊಳಗೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ನಿರಾಕರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಲ್ಪನಾ ಅವರನ್ನು ಸಿಎಂ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.