ಈ ಜನಕ್ಕೆ ಜಿರಳೆ ಅಂದ್ರೆ ಪ್ರಾಣ..!; ಕೆಜಿ ಜಿರಳೆ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರ..
ಬೆಂಗಳೂರು; ಭಾರತ ಸೇರಿದಂತೆ ಪ್ರಪಂಚದ ಎಲ್ಲಾ ಕಡೆ ಆಹಾರವಾಗಿ ಹಲವು ಜೀವಿಗಳು, ಕೀಟಗಳನ್ನು ತಿನ್ನುತ್ತೇವೆ.. ಭಾರತದಲ್ಲಿ ಕುರಿ, ಮೇಕೆ, ಕೋಳಿ ಮಾಂಸ ಸೇವನೆ ಹೆಚ್ಚು.. ಆದ್ರೆ ಕೆಲ ದೇಶಗಳಲ್ಲಿ ಜಿರಳೆಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ.. ಚೈನಾ, ಆಫ್ರಿಕಾ ಮುಂತಾದ ದೇಶಗಳ ಜನಕ್ಕೆ ಜಿರಳೆಗಳಿಂದ ಮಾಡಿದ ಖಾದ್ಯವೇ ಫೇವರಿಟ್ ಫುಡ್.. ಜಿರಳೆಗಳಲ್ಲಿ ಇರುವ ಹಲವಾರು ಪೋಷಕಾಂಶಗಳೇ ಇದಕ್ಕೆ ಕಾರಣ.. ಜಿರಳೆಗಳನ್ನು ತಿನ್ನುವ ದೇಶಗಳಲ್ಲಿ ಅವುಗಳು ಚಿನ್ನಕ್ಕೆ ಸಮಾನವಂತೆ.. ಮೇಕೆ, ಕೋಳಿ, ಮೀನುಗಳಲ್ಲಿ ಇರುವಂತೆ ಜಿರಳೆಯಲ್ಲೂ ಪ್ರೋಟೀನ್ ಹೆಚ್ಚಿರುತ್ತದೆ.. ಜಿರಳೆಗಳಲ್ಲಿ ಶೇಕಡಾ 14ರಷ್ಟು ಪ್ರೋಟೀನ್ ಇರುತ್ತೆ ಎಂದು ಹೇಳಲಾಗುತ್ತದೆ.. ಈ ಕಾರಣದಿಂದಾಗಿಯೇ ಆಫ್ರಿಕಾ, ಚೈನಾದಂತಹ ದೇಶಗಳಲ್ಲಿ ಜನರು ಮಾಂಸಾಹಾರವಾಗಿ ಜಿರಳೆಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ..
ಇದನ್ನೂ ಓದಿ; ಅನುದಾನಿತ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ; ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್
ಈ ದೇಶಗಳಲ್ಲಿ ಜಿರಳೆಗಳಿಗೆ ಹೆಚ್ಚಿನ ಡಿಮ್ಯಾಂಡ್ ಹೆಚ್ಚಾಗಿದೆ.. ಹೀಗಾಗಿ ನಮ್ಮಲ್ಲಿ ಕೋಳಿ, ಕುರಿಗಳನ್ನು ಬೆಳೆಸಿದಂತೆ ಚೈನಾ, ಆಫ್ರಿಕಾ ಮುಂತಾದ ದೇಶಗಳಲ್ಲಿ ಜಿರಳೆಗಳನ್ನು ಬೆಳೆಸುತ್ತಾರೆ.. ಜಿರಳೆಗಳ ಸಾಕಾಣೆ ಮಾಡಿ ಮಾರಾಟ ಮಾಡುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ.. ಮಾಂಸದ ವ್ಯಾಪಾರದಂತೆಯೇ ಜಿರಳೆ ವ್ಯಾಪಾರ ಕೂಡಾ ದೊಡ್ಡ ಮಟ್ಟದಲ್ಲಿ ಇಲ್ಲಿ ನಡೆಯುತ್ತಿದೆ.. ಈ ದೇಶಗಳಲ್ಲಿ 6 ಸಾವಿರ ರೀತಿಯ ಕೀಟಗಳನ್ನು ಆಹಾರವಾಗಿ ಬಳಸಲಾಗುತ್ತಿದೆ.. ಇದರಲ್ಲಿ ಜಿರಳೆ ಕೂಡಾ ಒಂದು. ಒಂದು ಅಂದಾಜಿನ ಪ್ರಕಾರ 2030ರ ವೇಳೆಗೆ ಸುಮಾರು 8 ಬಿಲಿಯನ್ ಜನಕ್ಕೆ ಜಿರಳೆಗಳನ್ನು ತಿನ್ನುವ ಅಭ್ಯಾಸ ಇರುತ್ತದೆ ಎಂದು ಹೇಳಲಾಗಿದೆ..
ಇದನ್ನೂ ಓದಿ; 13 ವರ್ಷದ ಹಿಂದೆ ಸತ್ತ ಗಂಡನಿಂದ ಮಗು ಪಡೆದಳಂತೆ ಈ ಮಹಿಳೆ!
ಜಿರಳೆಗಳನ್ನು ಒಂದು ಕೆಜಿಗೆ 5 ಯೂರೋಗಳಿಗೆ ಮಾರಾಟ ಮಾಡಲಾಗುತ್ತಿದೆ.. ಅಂದರೆ ಕೆಜಿ ಜಿರಳೆಗಳು ಇಲ್ಲಿ 459 ರೂಪಾಯಿ. ಜಿರಳೆಗಳಿಂದ ಎಣ್ಣೆ ತೆಗೆಯುವ ಕೆಲಸವೂ ನಡೆಯುತ್ತಿದೆ.. ಇನ್ನೊಂದೆಡೆ ಮುಂದಿನ ದಿನಗಳಲ್ಲಿ ಉಗಾಂಡಾ, ಆಫ್ರಿಕಾಗಳಲ್ಲಿ ಜಿರಳೆ ಪ್ರಮುಖ ಆಹಾರವಾಗಲಿದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಇಲ್ಲಿನ ಜನ ಜಿರಳೆ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆಂದು ಅಂದಾಜಿಸಿದ್ದಾರೆ.. ಇದರಿಂದಾಗಿ ಜಿರಳೆ ಸಾಕಾಣಿಕೆ ಮಾಡುವುದಕ್ಕೆ ಹೆಚ್ಚಿನ ಜನ ಮುಂದಾಗುತ್ತಿದ್ದಾರೆ..
ಇದನ್ನೂ ಓದಿ; 13 ವರ್ಷದ ಹಿಂದೆ ಸತ್ತ ಗಂಡನಿಂದ ಮಗು ಪಡೆದಳಂತೆ ಈ ಮಹಿಳೆ!