13 ವರ್ಷದ ಹಿಂದೆ ಸತ್ತ ಗಂಡನಿಂದ ಮಗು ಪಡೆದಳಂತೆ ಈ ಮಹಿಳೆ!
ನವದೆಹಲಿ; ಕೆಲದಿನಗಳಿಂದ ಒಂದು ವಿಡಿಯೋ ವೈರಲ್ ಆಗುತ್ತಿದೆ.. ವಾಹಿಯೊಂದರ ವರದಿಗಾರನೊಬ್ಬ ಒಬ್ಬ ಮಹಿಳೆಗೆ ಪ್ರಶ್ನೆ ಕೇಳುತ್ತಾನೆ.. ಈ ಮಗು ಯಾರದು..? ಅಂತ. ಆಕೆ ಇದು ನನ್ನದೇ ಎಂದು ಹೇಳುತ್ತಾನೆ.. ನಿನ್ನ ಗಂಡ 13 ವರ್ಷದ ಹಿಂದೆಯೇ ತೀರಿಹೋಗಿದ್ದಾನೆ. ಈ ಮಗು ಹೇಗಾಯ್ತು ಅನ್ನೋದು ಪತ್ರಕರ್ತನ ಮತ್ತೊಂದು ಪ್ರಶ್ನೆ.. ಅದಕ್ಕೆ ಆ ಮಹಿಳೆ ಕೊಟ್ಟ ಉತ್ತರಕ್ಕೆ ಪತ್ರಕರ್ತ ಹೌಹಾರಿದ್ದ.. ಯಾಕಂದ್ರೆ, ಆ ಮಗು ಆಕೆಯ ಗಂಡನಿಂದಲೇ ಹುಟ್ಟಿದ್ದಂತೆ.. ನನ್ನ ಗಂಡ ನಿತ್ಯವೂ ಕನಸಲ್ಲಿ ಬರುತ್ತಿದ್ದ.. ಕನಸಲ್ಲೇ ನಮ್ಮ ಮಿಲನ ಮಹೋತ್ಸವ ನಡೆಯುತ್ತಿತ್ತು.. ಇದರಿಂದಾಗಿ ಮಗು ಆಗಿದೆ ಎಂದು ಆ ಮಹಿಳೆ ಹೇಳಿದ್ದಾಳೆ..
ಇದನ್ನೂ ಓದಿ; ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ!
ಆ ಮಹಿಳೆ ಎಲ್ಲಿಯವಳೋ, ಯಾವ ಊರಿನಲ್ಲಿದ್ದಾಳೋ ಗೊತ್ತಿಲ್ಲ. ಆದ್ರೆ ಆಕೆ ಆಡಿದ ಈ ಮಾತುಗಳು ಸಖತ್ ವೈರಲ್ ಆಗುತ್ತಿವೆ.. ಹೀಗೂ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.. ನೆಟ್ಟಿಗರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದಾರೆ.. ಇದರಲ್ಲಿ ಮಹಿಳೆಯ ಬಗ್ಗೆ ಲೇವಡಿ ಮಾಡುವವರೇ ಹೆಚ್ಚಿದ್ದಾರೆ..
ಇದನ್ನೂ ಓದಿ; ಟಿಪ್ಪರ್ ಲಾರಿ ಡಿಕ್ಕಿ; ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು!