Bengaluru

Water Crisis; ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಇವರಿಗೆಲ್ಲಾ ಶೇ.20ರಷ್ಟು ನೀರು ಕಟ್‌!

ಬೆಂಗಳೂರು; ಇದು ಇನ್ನೂ ಮಾರ್ಚ್ ತಿಂಗಳು.. ಈಗಿನ್ನೂ ಬೇಸಿಗೆ ಶುರುವಾಗಿವೆ.. ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆಯ ಧಗೆ ಹೆಚ್ಚಾಗಲಿದೆ.. ಆದ್ರೆ ಬೆಂಗಳೂರಿನ ಜನಕ್ಕೆ ಈಗಲೇ ಬೇಸಿಗೆ ಬಿಸಿ ತಟ್ಟಿದೆ. 30 ಸಾವಿರಕ್ಕೂ ಹೆಚ್ಚು ಬೋರ್ ವೆಲ್ ಗಳು ಬತ್ತಿಹೋಗಿವೆ.. ಈಗಲೇ ಸರಿಯಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ.. ಏನಪ್ಪ ಮಾಡೋದು ಅಂತ ಬೆಂಗಳೂರು ಜಲಮಂಡಲಿ ತಲೆ ಮೇಲೆ ಕೈಹೊತ್ತು ಕುಳಿತಿದೆ.

ಇದನ್ನೂ ಓದಿ; ಕಾಂಗ್ರೆಸ್ ಗೆ ಕೆಲವೆಡೆ ಅಭ್ಯರ್ಥಿಗಳಿಲ್ಲ; ಇದ್ದರೂ ಗೆಲ್ಲೋ ವಿಶ್ವಾಸವಿಲ್ಲ!

ಹೆಚ್ಚು ನೀರು ಬಳಸುವವರಿಗೆ ನೀರಿನ ಖೋತಾ;

 ಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಬೆಂಗಳೂರಿನ ಜನಕ್ಕೆ ನೀರು ಪೂರೈಸುವ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದೆ. ಈಗಾಗಲೇ ಕೆಲ ಅಪಾರ್ಟ್ ಮೆಂಟ್ ಗಳು, ಉದ್ಯಮಗಳಿಗೆ ಸರಿಯಾಗಿ ನೀರು ಪೂರೈಕೆ ಯಾಗ್ತಿಲ್ಲ. ಜನವಸತಿ ಪ್ರದೇಶಗಳಲ್ಲಿ ನೀರು ಪೂರೈಕೆ ಕಡಿಮೆ ಮಾಡಲಾಗಿದೆ. ಆದರೂ ಸಮಸ್ಯೆ ಹೆಚ್ಚುತ್ತಲೇ ಇದೆ.. ಹೀಗಾಗಿ ನೀರು ಸರಬರಾಜು ಮಂಡಳಿ, ಅಪಾರ ಪ್ರಮಾಣದಲ್ಲಿ ನೀರು ಬಳಸುವವರಿಗೆ ನೀರು ಪೂರೈಕೆಯಲ್ಲಿ ಖೋತಾ ಮಾಡಲು ನಿರ್ಧಾರ ಮಾಡಲಾಗಿದೆ.

ಶೇಕಡಾ 20ರಷ್ಟು‌‌ ನೀರು ಪೂರೈಕೆಯಲ್ಲಿ ಖೋತಾ;

 ನಗರದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಖರ್ಚು ಮಾಡುವ 38 ಬಳಕೆದಾರರಿದ್ದಾರೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಬಯೋಕಾನ್ ಪ್ರೈವೇಟ್ ಲಿಮಿಟೆಡ್, ಏರ್ ಫೋರ್ಸ್ ಸ್ಟೇಷನ್‌ಗಳು, ಬೆಂಗಳೂರು ವಿಶ್ವವಿದ್ಯಾಲಯ, ರೈಲ್ವೇಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಕೂಡಾ ಈ ಪಟ್ಟಿಯಲ್ಲಿವೆ. ಈ ಸಂಸ್ಥೆಗಳಿಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಶೇ.20ರಷ್ಟು ಕಡಿಮೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ; Loksabha; ಕಾಂಗ್ರೆಸ್ 2ನೇ ಪಟ್ಟಿ ರಿಲೀಸ್; ಅಚ್ಚರಿ ವ್ಯಕ್ತಿಗಳಿಗೆ ಟಿಕೆಟ್

ದಿನಕ್ಕೆ 2 ಕೋಟಿ ಲೀಟರ್ ನೀರು ಬಳಸುವ ಗ್ರಾಹಕರು;

 ಬೆಂಗಳೂರಿನಲ್ಲಿ ಕೆಲವೊಂದು ಸಂಸ್ಥೆಗಳು ದಿನಕ್ಕೆ ಎರಡು ಕೋಟಿ ಲೀಟರ್‌ಗೂ ಹೆಚ್ಚಿನ ನೀರನ್ನು ಬಳಕೆ ಮಾಡುತ್ತಿವೆ. ಹೀಗೆ ಎರಡು ಕೋಟಿ ಲೀಟರ್‌ಗೂ ಹೆಚ್ಚು ನೀರನ್ನು ದಿನವೊಂದಕ್ಕೆ ಬಳಸುನ ಸಂಸ್ಥೆಗಳನ್ನು ಬಿಡಬ್ಲ್ಯೂಎಸ್‌ಎಸ್‌ಬಿ ಬೃಹತ್‌ ಗ್ರಾಹಕರು ಎಂದು ಪರಿಗಣಿಸಿದೆ. ಹೀಗೆ ಬಳಕೆ ಮಾಡುವವರು ಬೆಂಗಳೂರು ಮಹಾನಗರದಲ್ಲಿ 38 ಗ್ರಾಹಕರಿದ್ದಾರೆ. ಇವರು ಪ್ರತಿ ತಿಂಗಳೂ ಒಟ್ಟು 1,765 ಮಿಲಿಯನ್ ಲೀಟರ್‌ ನೀರು ಬಳಸುತ್ತಿದ್ದಾರೆ.  ಇವರಿಗೆ ಪೂರೈಕೆ ಮಾಡುವ ನೀರಿನಲ್ಲಿ ಶೇಕಡಾ 20ರಷ್ಟುನ್ನು ಖೋತಾ ಮಾಡಲು ಈಗ ತೀರ್ಮಾನಿಸಲಾಗಿದೆ. ಹೀಗೆ ಮಾಡುವುದರಿಂದ ದಿನಕ್ಕೆ ಕನಿಷ್ಠ 10 ಎಂಎಲ್​ಡಿ ನೀರು ಉಳಿಸಬಹುದು. ಹೀಗೆ ಉಳಿಸುವ ನೀರನ್ನು ನಗರದ ಕೊಳೆಗೇರಿಗಳು ಮತ್ತು ಬಡವರ ಅಗತ್ಯಗಳನ್ನು ಪೂರೈಸಲು ಹಂಚಿಕೆ ಮಾಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

ಆದ್ರೆ ಇವರಿಗೆ ಹಠಾತ್‌ ನೀರು ಕಡಿಮೆ ಮಾಡುವುದಿಲ್ಲ. ಹಾಗೆ ಮಾಡಿದರೆ ತೊಂದರೆಯಾಗುತ್ತದೆ. ಹೀಗಾಗಿ ಮಾರ್ಚ್‌ 15ರಿಂದ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಹೋಗಲು ತೀರ್ಮಾನ ಮಾಡಲಾಗಿದೆ. ಏಪ್ರಿಲ್‌ 15ರ ವೇಳೆಗೆ ಶೇಕಡಾ 20ರಷ್ಟು ಖೋತಾ ಮಾಡಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ; Mandya; ಮಂಡ್ಯ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಫೈನಲ್‌; ಸುಮಲತಾ ನಿರ್ಧಾರ ಏನು..?

ಆಸ್ಪತ್ರೆಗಳಿಗೆ ನೀರಿನ ಪೂರೈಕೆಯಲ್ಲಿ ಖೋತಾ ಇಲ್ಲ;

  ಬೆಂಗಳೂರಿನ ಮೂರು ಆಸ್ಪತ್ರೆಗಳು ಕೂಡಾ ಬೃಹತ್‌ ನೀರು ಬಳಕೆ ಮಾಡುತ್ತವೆ. ವೈದ್ಯಕೀಯ ತುರ್ತು ಪರಿಸ್ಥಿತಿ ಪರಿಗಣಿಸಿ ಈ ಆಸ್ಪತ್ರೆಗಳಿಗೆ ನೀರು ಖೋತಾ ಮಾಡದಿರುವ ತೀರ್ಮಾನ ಮಾಡಲಾಗಿದೆ. ನಿಮ್ಹಾನ್ಸ್, ವಿಕ್ಟೋರಿಯಾ ಮತ್ತು ಕಮಾಂಡ್ ಆಸ್ಪತ್ರೆಗಳು ದಿನಕ್ಕೆ 2 ಕೋಟಿ ಲೀಟರ್‌ಗೂ ಹೆಚ್ಚು ನೀರು ಬಳಕೆ ಮಾಡುತ್ತಿವೆ.

  ಬೆಂಗಳೂರಿನ ಬಹುತೇಕ ಕಡೆ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಲವು ಪ್ರದೇಶಗಳಲ್ಲಿ ಮೂರು ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ.  ಮನೆಗಳಲ್ಲಿ ಕೊರೆಸಿದ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಹೀಗಾಗಿ ಜನರು ಟ್ಯಾಂಕರ್‌ ಮೊರೆಹೋಗುತ್ತಿದ್ದಾರೆ.. ಟ್ಯಾಂಕರ್‌ಗಳವರು ಕೂಡಾ ನಗರದ ಹೊರವಲಯದಿಂದ ನೀರು ತಂದು ಪೂರೈಕೆ ಮಾಡುತ್ತಿದ್ದಾರೆ. ಹೀಗಾಗಿ ಸೂಕ್ತ ಸಮಯಕ್ಕೆ ಸರಿಯಾದ ನೀರು ಕೂಡಾ ಪೂರೈಕೆಯಾಗುತ್ತಿಲ್ಲ.

ಇದನ್ನೂ ಓದಿ; Chikkaballapura; ಶಾಸಕ ಪ್ರದೀಪ್‌ ಈಶ್ವರ್‌ ಲೂಸ್‌ ಟಾಕ್‌; ಡಾ.ಕೆ.ಸುಧಾಕರ್‌ಗೆ ಇದೇ ಶ್ರೀರಕ್ಷೆ..?

ಹಳ್ಳಿಗಳಿಗೆ ತೆರಳುತ್ತಿರುವ ಟೆಕ್ಕಿಗಳು;

 ವರ್ಕ್‌ ಫ್ರಂ ಹೋಮ್‌ ಮಾಡುವ ಟೆಕ್ಕಿಗಳಿಗೂ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಟೆಕ್ಕಿಗಳೆಲ್ಲಾ ಹಳ್ಳಿಗಳ ಕಡೆಗೆ ಮುಖ ಮಾಡಿದ್ದಾರೆ. ತಮ್ಮ ಸ್ವಗ್ರಾಮಗಳಿಗೆ ತೆರಳು ಅಲ್ಲಿಯೇ ಕೆಲಸ ಮಾಡಲು ನಿರ್ಧಾರ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಿಂದ ಬಂದ ಟೆಕ್ಕಿಗಳು ಕೂಡಾ ವರ ರಾಜ್ಯಗಳಿಗೆ ವಾಪಸ್‌ ಹೋಗುತ್ತಿದ್ದಾರೆ. ಕಚೇರಿಗೆ ಹೋಗಿ ಕೆಲಸ ಮಾಡುವವರು ಕೂಡಾ ವರ್ಕ್‌ ಪ್ರಂ ಹೋಮ್‌ ತೆಗೆದುಕೊಂಡು, ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ನಗರದಲ್ಲಿ ಸುಮಾರು ಒಂದು ಕೋಟಿ 30 ಲಕ್ಷದಷ್ಟು ಜನಸಂಖ್ಯೆ ಇದ್ದು, ಅದಕ್ಕಿಂತ ಹೆಚ್ಚಿನ ವಾಹನಗಳು ಕೂಡಾ ಇವೆ. ಹೀಗಾಗಿ ಜನ ವಾಹನಗಳನ್ನು ತೊಳೆಯಲು, ಮನೆ ಮುಂದಿನ ಗಾರ್ಡನ್‌ ನಿರ್ವಹಿಸಲು ಹೆಚ್ಚಿನ ನೀರು ಪೋಲು ಮಾಡುತ್ತಿದ್ದಾರೆ. ಇದನ್ನು ತಡೆಯುವ ಪ್ರಯತ್ನಗಳು ಕೂಡಾ ಈಗ ನಡೆಯುತ್ತಿವೆ.

ಇದನ್ನೂ ಓದಿ; ಟಿಕೆಟ್‌ ಬೇಟೆಯಲ್ಲಿ ʻಸಿಂಹʼ ಫೇಲ್‌; ಹೊರಬಿತ್ತು ಅಸಹನೆಯ ʻಪ್ರತಾಪʼ

Share Post