BengaluruCrime

Rameshwaram cafe Case; ಸ್ಫೋಟಕ್ಕೂ ಮೊದಲ ಟ್ರಯಲ್‌ ಬ್ಲಾಸ್ಟ್‌ ಮಾಡಿದ್ದನಂತೆ ಶಂಕಿತ; ಆತ ಕರ್ನಾಟಕದವನೇನಾ..?

ಬೆಂಗಳೂರು; ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದ್ದಂತೆ ಎಲ್ಲರೂ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಮರೆತೇ ಹೋಗಿದ್ದಾರೆ. ಆದ್ರೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ ಮಾತ್ರ ಸುಮ್ಮನೆ ಕೂತಿಲ್ಲ. ಸ್ಫೋಟದ ನಡೆಸಿದ ಶಂಕಿತ ಉಗ್ರನ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದೆ.. ಶೀಘ್ರದಲ್ಲೇ ಆತನ ಬಂಧನವಾಗುವ ಎಲ್ಲಾ ಸಾಧ್ಯತೆ ಇದೆ.. ಆರೋಪಿತ ಬಗ್ಗೆ ಹಲವಾರು ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಎನ್‌ಐಎ ಅಧಿಕಾರಿಗಳು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಇಷ್ಟರಲ್ಲೇ ಆರೋಪಿ ಅರೆಸ್ಟ್‌ ಆಗಲಿದ್ದಾನೆ ಎಂದು ಹೇಳಲಾಗುತ್ತಿದೆ.

ತಮಿಳುನಾಡಿನಿಂದ ಬಂದಿದ್ದ ಶಂಕಿತ ಉಗ್ರ;

ತಮಿಳುನಾಡಿನಿಂದ ಬಂದಿದ್ದ ಶಂಕಿತ ಉಗ್ರ; ಮಾರ್ಚ್‌ 1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶಂಕಿತ ಉಗ್ರ ಬಾಂಬ್‌ ಇಟ್ಟು ಹೋಗಿದ್ದ. ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಫೆಯಲ್ಲಿ ಆ ಟೈಮ್‌ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.. ಇದೀಗ ಈ ಪ್ರಕರಣವನ್ನು ಎನ್‌ಐಎ ತನಿಖೆ ಮಾಡುತ್ತಿದ್ದು, ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಮಾಹಿತಿಗಳ ಪ್ರಕಾರ, ಶಂಕಿತ ಉಗ್ರ ಪ್ರಕರಣ ನಡೆದ ದಿನವೇ ಬೆಂಗಳೂರಿಗೆ ಬಂದಿದ್ದಾನೆ. ಚೆನ್ನೈನಿಂದ ಟ್ರೈನ್‌ನಲ್ಲಿ ತಿರುಪತಿಗೆ ಬಂದಿದ್ದಾನೆ. ಅಲ್ಲಿಂದ ಬಸ್‌ನಲ್ಲಿ ಬೆಂಗಳೂರಿಗೆ ಬಂದು ಕೆಆರ್‌ ಪುರಂನಲ್ಲಿ ಇಳಿದಿದ್ದಾನೆ. ಅಲ್ಲಿಂದ ಮಹದೇವಪುರ ಇಂಡಿಯಾ ಸರ್ಕಲ್‌ನಲ್ಲಿ ಇಳಿದು ಬಸ್‌ ಬದಲಿಸಿದ್ದಾರೆ. ನಂತರ ಬ್ರೂಕ್‌ ಫೀಲ್ಡ್‌ ಬಳಿ ಇಳಿದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇದ್ದ ಬ್ಯಾಗ್‌ ಇಟ್ಟುಹೋಗಿದ್ದಾನೆ.

ಶಂಕಿತ ಉಗ್ರ ಕರ್ನಾಟಕದವನೇ ಇರಬೇಕು..!;

ಶಂಕಿತ ಉಗ್ರ ಕರ್ನಾಟಕದವನೇ ಇರಬೇಕು..!; ಶಂಕಿತ ಉಗ್ರನಿಗೆ ಬೆಂಗಳೂರು ಚೆನ್ನಾಗಿ ಪರಿಚಯ ಇದೆ.. ಹೀಗಾಗಿ ಆತ ಆರಾಮಾಗಿ ಬಸ್‌ನಲ್ಲೇ ಒಡಾಡಿದ್ದಾನೆ.. ಬಾಂಬ್‌ ಇಟ್ಟ ಮೇಲೂ ಮೆಜೆಸ್ಟಿಕ್‌ಗೆ ಬಂದು, ಅಲ್ಲಿಂದ ಮತ್ತೊಂದು ಬಸ್‌ ಹತ್ತಿ ಓಕುಳಿಪುರಂ ಬಳಿ ಇಳಿದು ಅಲ್ಲಿಂದ ಬಳ್ಳಾರಿಗೆ ಹೋಗುವ ಬಸ್‌ ಹತ್ತಿದ್ದಾನೆ. ಹೀಗಾಗಿ ಆರೋಪಿಗೆ ಬೆಂಗಳೂರು ಚೆನ್ನಾಗಿ ಗೊತ್ತಿದ್ದು, ಆತ ಕರ್ನಾಟಕದವನೇ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಟ್ರಯಲ್‌ ಬ್ಲಾಸ್ಟ್‌ ಮಾಡಿದ್ದರ ಬಗ್ಗೆ ಮಾಹಿತಿ;

ಟ್ರಯಲ್‌ ಬ್ಲಾಸ್ಟ್‌ ಮಾಡಿದ್ದರ ಬಗ್ಗೆ ಮಾಹಿತಿ;  ಶಂಕಿತ ಉಗ್ರ ಬಾಂಬ್‌ ಅನ್ನು ರಾಮೇಶ್ವರಂ ಕೆಫೆ ಬಳಿ ಇಡುವ ಮೊದಲು ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರ ಬಗ್ಗೆಯೂ ಎನ್‌ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿ ಈ ಹಿಂದೆ ಶಿವನ ಸಮುದ್ರ ಹಾಗೂ ಗುಡ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಈ ಭಾಗದಲ್ಲಿ ಹಲವು ಬಾರಿ ಸ್ಫೋಟದ ಸದ್ದು ಜನಕ್ಕೆ ಕೇಳಿಸಿದ್ದು, ಮೈನಿಂಗ್‌ ಇರಬಹುದು ಎಂದು ಜನ ಸುಮ್ಮನಾಗಿದ್ದರು ಎನ್ನಲಾಗಿದೆ.

ರಾಮೇಶ್ವರಂ ಕೆಫೆಗೆಂದೇ ಅಡ್ವಾನ್ಸ್ಡ್‌ ಬಾಂಬ್‌ ತಯಾರಿ;

ರಾಮೇಶ್ವರಂ ಕೆಫೆಗೆಂದೇ ಅಡ್ವಾನ್ಸ್ಡ್‌ ಬಾಂಬ್‌ ತಯಾರಿ; ಈ ಹಿಂದೆ ಕರ್ನಾಟಕ ಹಾಗೂ ತಮಿಳುನಾಡುಗಳಲ್ಲಿ ಬಾಂಬ್‌ ಸ್ಫೋಟಿಸಲಾಗಿತ್ತು. ಆಗ ಬಾಂಬ್ ಅನ್ನು ಕುಕ್ಕರ್ ಮತ್ತು ಸ್ಟೀಲ್ ಬಾಕ್ಸ್ ನಲ್ಲಿ ಇಡಲಾಗಿತ್ತು. ಆದ್ರೆ ಈ ಬಾರಿ ಸಾಫ್ಟ್ ಪೇಪರ್ ( ಸಿಲ್ವರ್ ಪೇಪರ್) ಮತ್ತು ಬ್ಯಾಗ್ ಮೂಲಕ ಮಾಡಿದ್ದಾರೆ. ಆರೋಪಿ ಒಂದು ಕಡೆ ಹೋಗದೇ ಬೇರೆ ಬೇರೆ ಕಡೆ ಸುತ್ತಾಟ ನಡೆಸುತ್ತಿರುವುದರಿಂದ ಆತನನ್ನು ಹಿಡಿಯಲು ಕಷ್ಟವಾಗುತ್ತಿದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಮತ್ತು ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ತನಿಖೆ ನಡೆಸಲಾಗಿದೆ. ಹಲವು ಮಹತ್ವದ ದಾಖಲೆಗಳು ಎನ್‌ಐಎ ತಂಡಕ್ಕೆ ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿ ಸಿಕ್ಕಿಬೀಳುವ ಸಾಧ್ಯತೆ ಇದೆ.

 

Share Post