ಉಗ್ರ ಸಂಘಟನೆ ಹೆಸರಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ!
ಬೆಂಗಳೂರು; ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದೀಗ ದುಷ್ಕರ್ಮಿಗಳು ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಇ-ಮೇಲ್ ಒಂದು ಬಂದಿದ್ದು, ಮ್ಯೂಸಿಯಂನ ಹಲವು ಕಡೆ ಬಾಂಬ್‌ಗಳನ್ನು ಬಚ್ಚಿಡಲಾಗಿದೆ. ಇಂದು ಬೆಳಗ್ಗೆ ಅವು ಸ್ಫೋಟಗೊಳ್ಳಲಿವೆ ಎಂಬ ಮಾಹಿತಿ ಆ ಇ-ಮೇಲ್‌ನಲ್ಲಿತ್ತು.
Morgue999lolಎಂಬ ಮೇಲ್ ಐಡಿಯಿಂದ ಈ ಬೆದರಿಕೆ ಬಂದಿದೆ. Terrorizers 111 ಉಗ್ರ ಸಂಘಟನೆಯಿಂದ ಎಂದು ಹೇಳಿಕೊಂಡಿದ್ದಾರೆ. ಇಂದು ಬೆಳಗ್ಗೆ ಈ ಇ-ಮೇಲ್ ಬಂದಿದ್ದು, ಕಬ್ಬನ್ ಪಾರ್ಕ್ ಪೊಲೀಸರು ಡಾಗ್ ಸ್ಕ್ವಾಡ್ ಜೊತೆ ಪರಿಶೀಲನೆ ಮಾಡಿದ್ದಾರೆ. ಆದ್ರೆ ಅಲ್ಲಿ ಯಾವುದೇ ಸ್ಫೋಟಕ ಕಂಡುಬಂದಿಲ್ಲ.