ಇನ್ಫೋಸಿಸ್ ಫೌಂಡೇಶನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ
ಬೆಂಗಳೂರು; ಇನ್ಫೋಸಿಸ್ ಸಂಸ್ಥೆಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಿದೆ.. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನಾಂಕವಾಗಿದ್ದು, ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ..
ಇನ್ಫೋಸಿಸ್ ಫೌಂಡೇಷನ್ ಎಸ್‌ಟಿಇಎಂ ಸ್ಟಾರ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಅಡಿ 2024-25ರ ಸಾಲಿನ ಅರ್ಜಿಗಳನ್ನ ಆಹ್ವಾನಿಸಲಾಗಿದೆ… ಇಂಜಿನಿಯರಿಂಗ್, ಎಂಬಿಬಿಎಸ್, ಗಣಿತ, ತಂತ್ರಜ್ಞಾನ, ವಿಜ್ಞಾನ ವಿಷಯಗಳಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದ ಮಹಿಳಾ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.. ಆಯ್ಕೆಯಾದ ಪ್ರತಿ ವಿದ್ಯಾರ್ಥಿನಿಗೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ..
ಇದನ್ನೂ ಓದಿ; ಡಿ.ಕೆ.ಶಿವಕುಮಾರ್ ಅವರೇ ಬ್ರ್ಯಾಂಡ್ ಬೆಂಗಳೂರು ಅಂದ್ರೆ ಇದೇನಾ..?
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಆಧಾರ್/ಪಾನ್ ಕಾರ್ಡ್, ದ್ವಿತಿಯ ಪಿಯುಸಿಯ ಪ್ರಮಾಣ ಪತ್ರ, ಜೆಇಇ/ಸಿಇಟಿ/ ನೀಟ್ನಲ್ಲಿ ಪಡೆದ ಅಂಕಪಟ್ಟಿಗಳು, ಪಾಸ್ ಫೋಟೋಗಳು, ಆದಾಯ ಪ್ರಮಾಣ ಪತ್ರ, ಕರೆಂಟ್ ಬಿಲ್, ಬ್ಯಾಂಕ್ ಅಕೌಂಟ್ ಮಾಹಿತಿಹಳನ್ನು ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಲಿಂಕ್ಗೆ ಭೇಟಿ ಕೊಡಿ- ವೆಬ್‌ಸೈಟ್ https://www.buddy4study.com/page/infosys-stem-stars-scholarship
ಇದನ್ನೂ ಓದಿ; ಪತ್ನಿ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ!; ಪತ್ನಿ ದೂರು ಕೊಟ್ಟಿದ್ದಕ್ಕೆ ನೇಣಿಗೆ ಶರಣು!